Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯ

ಯರಗಟ್ಟಿ : ಗ್ರಾಮೀಣ ಭಾಗದ ಸಾಂಪ್ರದಾಯಿಕ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ರೈತರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಇಂತಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ವಿಶ್ವಾಸಣ್ಣಾ ವೈದ್ಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶಾಸಕ ವೈದ್ಯ ಅವರ ೪೫ನೇ ಹುಟ್ಟುಹಬ್ಬದ ನಿಮಿತ್ಯ ತೆರೆಬಂಡಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೆರೆಬಂಡಿ ಸ್ಪರ್ಧೆಗಳು ಗ್ರಾಮೀಣ ಜನರಲ್ಲಿ ಉತ್ಸಾಹ, ಒಗ್ಗಟ್ಟು ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುತ್ತವೆ. ರೈತರು ಮತ್ತು ಗ್ರಾಮೀಣ ಜನರೊಂದಿಗೆ ನಿಕಟ ಸಂಬಂಧ ಹೊಂದಿರುವ ಇಂತಹ ಸಾಂಪ್ರದಾಯಿಕ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಯುವಕರು ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ರಾಮಣ್ಣ ದಳವಾಯಿ, ಬಸಪ್ಪ ದಳವಾಯಿ, ಮಂಜುನಾಥ ಶಿವಾಪುರ, ಬಾಲಪ್ಪ ಮಾಯನ್ನಿ, ಸಿ ಬಿ ಬಾಳಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಪ್ರಜ್ವಲ್ ಗೌಡರ, ಹಣಮಂತ ಪೂಜೇರಿ, ವಿಠ್ಠಲ ತೋರಣಗಟ್ಟಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಗೋಪಾಲ ದಳವಾಯಿ, ರವಿ ಹರಳಿ, ವಿಠ್ಠಲ ದಳವಾಯಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸು ಹಸಬಿ, ಸಂಜು ದಳವಾಯಿ, ಲಕ್ಷ್ಮಣ ದಳವಾಯಿ , ಸೇರಿದಂತೆ ಗ್ರಾಮದ ಗಣ್ಯರು, ಅಭಿಮಾನಿ ಬಳಗದ ಪದಾಧಿಕಾರಿಗಳು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ಹೇಳಿಕೆ: ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹುಟ್ಟುಹಬ್ಬದ ಅಂಗವಾಗಿ ತೆರೆಬಂಡಿ ಸ್ಪರ್ಧೆ ಆಯೋಜಿಸಿರುವ ಅಭಿಮಾನಿ ಬಳಗದ ಕಾರ್ಯವನ್ನು ಅವರು ಪ್ರಶಂಸಿಸಿದರು. ಶಾಸಕ ವಿಶ್ವಾಸ ವೈದ್ಯ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಂಡಾರದಲ್ಲಿ ಮಿಂದೆದ್ದ ಲಕ್ಷ್ಮೀದೇವಿ ಭಕ್ತರುರಜಪೂತ್ ಕುಟುಂಬಗಳ ಕೊಡುಗೆ ಮಾದರಿ: ಯತ್ನಾಳ ಮೆಚ್ಚುಗೆ ರಾಣಾ ಪ್ರತಾಪ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ-ಶಾಸಕ ಪಾಟೀಲರಾಣಾಪ್ರತಾಪ್ ಅವರ ದೇಶಪ್ರೇಮ, ಸ್ವಾಭಿಮಾನ ಆದರ್ಶವಾಗಲಿ-ಡಾ.ಅಜಯಸಿಂಗ್ಕೌಶಲ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಶಹನಾಜ ಗಡೆಕಾಯಿ ಆಯ್ಕೆ,ಮಹಾರಾಣಾ ಪ್ರತಾಪ್ ತ್ಯಾಗ, ಶೌರ್ಯ, ರಾಷ್ಟ್ರಪ್ರೇಮದ ಪ್ರತೀಕ-ಠಾಕೂರ್*ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*ನಗರದಲ್ಲಿ ಸಚಿವ ಮಧು ಬಂಗಾರಪ್ಪಗೆ ಸನ್ಮಾನಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರೋತ್ಸಾಹಿಸಬೇಕು: ಎಸ್.ಸಿ. ಕೋಟಾರಗಸ್ತಿಸಾಂಸ್ಕೃತಿಕ ಲೋಕ ಸಂಕುಚಿತವಾಗುತ್ತಿರುವುದು ವಿಷಾದನೀಯ: ಡಾ. ಗುರುಪಾದ ಮರಿಗುದ್ದಿ