ಇಂಡಿ: ಇಂಡಿ ನಗರದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ.ವಿ.ಪಾಟೀಲ ಅವರ ೫೯ನೇ ಜನ್ಮದಿನದ ಪ್ರಯುಕ್ತ ಸ್ಪಂದನಾ ಆಸ್ಪತ್ರೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬಡ ರೋಗಿಗಳಿಗೆ ಅಭಿಮಾನಿಗಳು, ಕಾರ್ಯಕರ್ತರಿಂದ ಹಣ್ಣು-ಹಂಪಲ ವಿತರಿಸುವ ಮೂಲಕ ಸರಳವಾಗಿ ಸಾಮೂಹಿಕವಾಗಿ ಕೆಕ್ ಕಟ್ಟ್ ಮಾಡಿ ಅರ್ಥಪೂರ್ಣವಾಗಿ ಶನಿವಾರರಂದು ಶಾಸಕರ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಳ ಸಜ್ಜನಿಕೆಯ ಸಹ ಹೃದಯಿ ಯಶವಂತರಾಯಗೌಡರಾಗಿದ್ದಾರೆ. ಈ ಹಿಂದೆ ಹಲವಾರು ಶಾಸಕರು ಮೂರು ಬಾರಿ ಆಯ್ಕೆಯಾಗಿದ್ದಾರೆ. ಅದರಂತೆ ನಮ್ಮ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಕೂಡಾ ಮೂರು ಬಾರಿ ಗೆಲುವು ಕಂಡಿದ್ದರಿಂದ ಹ್ಯಾಟ್ರಿಕ್ ಬಾರಿಸಿದ್ದಾರೆ ನೀಜ. ಆದರೆ ಅದು ಹ್ಯಾಟ್ರಿಕ್ ಗೆಲುವಲ್ಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ನಾಲ್ಕನೆ ಬಾರಿ ಗೆಲವು ಕಂಡಾಗ ಮಾತ್ರ ಹ್ಯಾಟ್ರಿಕ್ ಗೆಲುವಾಗುತ್ತದೆ. ಡಿ.ದೇವರಾಜ ಅರಸರು ಅತಿ ಹೆಚ್ಚು ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ರಿಕಾರ್ಡನ್ನು ಮಾನ್ಯ ಸಿದ್ದರಾಮಯ್ಯನವರು ಅವರಕಿಂತಲು ಅತಿ ಹೇಚ್ಚು ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಹಿಂದಿಕ್ಕಿದರು. ಅದರಂತೆ ಇಂಡಿ ಮತಕ್ಷೇತ್ರದ ರಿಕಾರ್ಡ ಮುರಿಯಬೇಕಾದರೆ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಬೇಕು. ಅವರ ಹುಟ್ಟು ಹಬ್ಬದ ದಿನವಾದ ಇಂದು ನಾವೇಲ್ಲ ಹೀರಿ-ಕಿರಿಯ ಕಾರ್ಯಕರ್ತರು ಆ ರಿಕಾರ್ಡ ಮೂರಿಯಲ್ಲು ಫಣ ತೋಟ್ಟು ಶ್ರಮಿಸೋಣ ಎಂದರು.
ಹಿರಿಯ ಮುಖಂಡರಾದ ಜಟ್ಟೆಪ್ಪ ರವಳಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬ ಆಚರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಚರಿಸುತ್ತಾರೆ. ಆದರೆ ನಮ್ಮ ಶಾಸಕರು ಹುಟ್ಟು ಆಚರಿಸಬೇಕು ಎಂದವರಲ್ಲ. ನಾವೆಲ್ಲರು ಸೇರಿ ಅವರ ಅನುಪಸ್ಥಿತಿಯಲ್ಲಿ ಜನ್ಮ ದಿನಾಚರಣೆ ಆಚರಿಸುತ್ತಿರುವುದು ಇದು ಪ್ರಿತಿಯಿಂದ ಎಂದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ, ಮಾಜಿ ಪುರಸಭೆ ಸದಸ್ಯ ಸತೀಶ ಕುಂಬಾರ ಮಾತನಾಡಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದರಿಂದ ಜನ್ಮ ದಿನಾಚರಣೆ ಆಚರಿಸಬೇಡಿ ಎಂದು ಶಾಸಕರು ಹೇಳಿದ್ದರು. ಆದರು ಸಹ ನಾವು ಉಚಿತ ಆರೋಗ್ಯ ಶಿಬೀರ ಹಮ್ಮಿಕೋಂಡು ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸರಳವಾಗಿ ಆಚರಿಸುತ್ತಿದ್ದೆವೆ. ಯಾವುದೆ ಅಡಂಬರಕ್ಕೆ ಅವಕಾಶ ನೀಡಿಲ್ಲ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತಕುಮಾರ ಧನಶೆಟ್ಟಿ, ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ಬಳ್ಳೊಳಿ ಬ್ಲಾಕ್ ಅಧ್ಯಕ್ಷ ಬಿ.ಸಿ.ಸಾವಕಾರ, ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಸುಗಂಧ ಪಾಟೀಲ, ಮುತ್ತಪ್ಪ ಪೋತೆ ಸೇರಿದಂತೆ ಅನೇಕರು ಮಾತನಾಡಿದರು.
ಗ್ಯಾರೆಂಟಿ ಸಮೀತಿ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ, ರಶೀದ ಅರಬ, ಧರ್ಮರಾಜ ವಾಲಿಕಾರ, ಸಣ್ಣಪ್ಪ ತಳವಾರ, ಭೀಮಾಶಂಕರ ಮೂರಮನ, ಸದಾಶಿವ ಪ್ಯಾಟಿ, ಕಾಮೇಶ ಉಕಲಿ, ಪ್ರಭುಗೌಡ ಬಿರಾದಾರ, ಶ್ರೀಮತಿ ಸುನ್ನೇವಾಲೆ, ಶೇಖರ ನಾಯಕ, ಶಬ್ಬೀರ ಖಾಜಿ, ಆಸೀಫ ಕಾರಬಾರಿ, ಅಯಾಜ್ ಟಾಂಗೇವಾಲೆ, ಖಲೀಲ ಇಂಡಿಕರ ಸೇರಿದಂತೆ ಅನೇಕರು ಇದ್ದರು. ವಾಲಿ ನೀರೂಪಿಸಿ ವಂದಿಸಿದರು.