ಹೊಸಪೇಟೆ:ವಿಜಯನಗರ ಜಿಲ್ಲೆಯ ಜಿಲ್ಲಾ ಬೀದಿ ನಾಟಕ ಒಕ್ಕೂಟವನ್ನು ನೊಂದಣಿ ಮಾಡಿಸಲು ಜಿಲ್ಲೆಯಲ್ಲಿ ಸಕ್ರಿಯವಾಗಿ ಬೀದಿ ನಾಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಕಲಾತಂಡದ ಮುಖ್ಯಸ್ಥರುಗಳು, ನೋಂದಾಯಿತ ಸಂಘ ಸಂಸ್ಥೆಗಳು ಟ್ರಸ್ಟ್‌ಗಳು ಜಿಲ್ಲೆಯ ಎಲ್ಲಾ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಲ್ಲಿ ನೊಂದಾಯಿಸಿಕೊಳ್ಳಲು ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದಿನಾಂಕ ೧೮ ಜೂನ್ ೨೦೨೬ರಂದು ಮರಿಮನಹಳ್ಳಿಯ ದುರ್ಗದಾಸ್ ಕಲಾ ಮಂದಿರದಲ್ಲಿ ಜಿಲ್ಲೆಯ ಪ್ರಮುಖ ಬೀದಿ ನಾಟಕ ಕಲಾ ಸಂಘಗಳ ಸದಸ್ಯರುಗಳು ಮುಖ್ಯಸ್ಥರುಗಳು ಸೇರಿಕೊಂಡು ಬೀದಿ ನಾಟಕ ಸಂಘಗಳ ಒಕ್ಕೂಟವನ್ನು ರಿಜಿಸ್ಟರ್ ಮಾಡುವ ಕುರಿತು ಪೂರ್ವಭಾವಿ ಸಭೆಯನ್ನು ಮರಿಯಮ್ಮನಹಳ್ಳಿಯ ರಂಗಕರ್ಮಿಯಾದ ಹಿರಿಯರು ರಂಗ ಕಲಾವಿದರಾಧ ಬಿ.ಎಂ.ಎಸ್.ಪ್ರಭು , ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ನೀನಾಸಂ ಪದವೀಧರರು ಮರಿಯಮ್ಮನಹಳ್ಳಿ ಇವರ ಅಧ್ಯಕ್ಷತೆಯಲ್ಲಿ.ನಡೆಸಿತ್ತು.
ಈ ಸಭೆಯಲ್ಲಿ ಮುಖ್ಯವಾಗಿ ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲಾ ಬೀದಿ ನಾಟಕ ಕಲಾ ಸಂಘಗಳನ್ನು ಒಳಗೊಂಡಂತೆ ಜಿಲ್ಲಾ ಬೀದಿ ನಾಟಕ ಒಕ್ಕೂಟವನ್ನು ನೊಂದಣಿ ಮಾಡಿಸಬೇಕೆಂದು ತೀರ್ಮಾನಿಸಿದೆ..
ಆದ್ದರಿಂದ ವಿಜಯನಗರ ಜಿಲ್ಲೆಯಲ್ಲಿ ಸಕ್ರಿಯವಾಗಿ ಬೀದಿ ನಾಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಕಲಾತಂಡದ ಮುಖ್ಯಸ್ಥರುಗಳು, ಒಳಗೊಂಡಂತೆ ಜಿಲ್ಲೆಯಲ್ಲಿ ಇರುವಂತಹ ನೋಂದಾಯಿತ ಸಂಘ ಸಂಸ್ಥೆಗಳು ಟ್ರಸ್ಟ್ ಗಳು ದಿನಾಂಕ ೨೮ ಜೂನ್ ೨೦೨೬ ರಂದು ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಈ ಕುರಿತಂತೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುವುದು. ಇದರ ಜೊತೆಗೆ ದಿನಾಂಕ: ೨೮.೦೬.೨೦೨೬ರ ಒಳಗಾಗಿ ಕಲಾತಂಡದ ಮುಖ್ಯಸ್ಥರುಗಳು ಈ ಬೀದಿ ನಾಟಕ ಕಲಾ ತಂಡದಲ್ಲಿ ನೊಂದಾಯಿಸಿಕೊಳ್ಳಲು ಸಂಘಟನೆ ತಿಳಿಸಿದೆ . ಕಲಾ ತಂಡಗಳ ಒಕ್ಕೂಟದಲ್ಲಿ ನೊಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ೯೭೩೧೩೫೩೩೮೩ -.೯೧೬೪೭೦೦೦೩೬-.೯೭೪೨೪೧೮೪೮೮.-೯೬೩೨೦೭೧೭೭೩.
ಸದರಿ ಸಂದರ್ಭದಲ್ಲಿ ಗುಂಡಿ ರಮೇಶ್, ರಾಜ್ಯಪ್ರಶಸ್ತಿ ಪುರಸ್ಕೃತರು ಹಾಗೂ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರು, ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಎಂ.ಮಹಾಂತೇಶ್ ರಂಗಭೂಮಿಯ ಕಲಾವಿದ ಹಗರಿಬೊಮ್ಮನಹಳ್ಳಿ ತಾಲೂಕು ಮಾಸಾರಿ ನೇಲುಕುದುರೆ-೨, ಬಿ.ಎಂ.ಯೋಗೇಶ್ ನಿನಾಸಂ ಪದವೀಧರರು ಮರಿಯಮ್ಮನಹಳ್ಳಿ, ಸರ್ದಾರ್ ಭಾರಿಗಿಡ ನೀನಾಸಂ ಪದವೀಧರರು ಮರಿಯಮ್ಮನಹಳ್ಳಿ, ಟಿ.ನವೀನ್ ಕುಮಾರ್ ಸಾನಿಹಳ್ಳಿ ಪದವೀದಾರರು ಮರಿಯಮ್ಮನಹಳ್ಳಿ, ಮೋಹನ್ ಶಶಿಧರ್ ಹಾಗೂ ಲಕ್ಕಿಮರದ ಕೊಟ್ರೇಶ್ ಡ್ರಾಮಾ ಡಿಪ್ಲೋಮಾ ಪದವೀಧರರು ಮರಿಯಮ್ಮನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.
