ಯರಗಟ್ಟಿ: ಬಸವೇಶ್ವರ ಅರ್ಬನ್ ಬ್ಯಾಂಕ್ ಹಾಗೂ ಶ್ರೀ ರವಿಶಂಕರ ಗುರುದೇವ ಸಂಸ್ಥೆಯ ದಿ ಆರ್ಟ್ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜು ೨೨ ರಿಂದ ಜು ೨೮ರ ವರೆಗೆ ಬೆಳಿಗ್ಗೆ ೦೬-೦೦ ಗಂಟೆಗೆಯಿಂದ ೦೮-೦೦ ಗಂಟೆಯ ವರೆಗೆ ಡಾ. ಬಿ. ಎಂ. ಪಾಟೀಲ ಇವರಿಂದ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಸದಸ್ಯರಿಗೆ, ಠೇವುದಾರರಿಗೆ, ಮಹಿಳೆಯರಿಗೆ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಯಾವುದೇ ತರಹದ ಸೇವಾ ಶುಲ್ಕವಿರುವುರಿಲ್ಲ. ಹಾಗೂ ಇತರೆ ಆಸಕ್ತರಿಗೆ ಯಾವುದೇ ಸೇವಾ ಶುಲ್ಕ ಭರಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಮಹಾಬಳೇಶ್ವರ ಹಾದಿಮನಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
