LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಇಂದು  ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಅದ್ದೂರಿಯಾಗಿ ಲೋಕಾರ್ಪಣೆ. 

ಬೆಳಗಾವಿ : ನಗರದ ಸಂಘ ಸದನ ನ್ಯೂ ಗೂಡ್ಸ್ ಶೆಡ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಇಂದು ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಪ.ಪೂ. ಶ್ರೀ ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು, ಕಾರಂಜಿಮಠದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ಸ್ಮಾರಕ ಭವನವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಘಚಾಲಕರಾದ ಬಸವರಾಜ ಡಂಬಳ ವಹಿಸಲಿದ್ದು, ಜನ ಕಲ್ಯಾಣ ಟ್ರಸ್ಟ್ನ ನಿರ್ವಾಹಕ ವಿಶ್ವಸ್ಥ ಅರವಿಂದ್ರಾವ್ ದೇಶಪಾಂಡೆ ಅವರು ಸರ್ವಜನತೆಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.
ಲೋಕಾರ್ಪಣೆ ಸಮಾರಂಭದ ಹಿನ್ನೆಲೆಯಲ್ಲಿ ಸ್ಮಾರಕ ಭವನವನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದ್ದು, ಇಡೀ ಪ್ರದೇಶ ಹಬ್ಬದ ವಾತಾವರಣವನ್ನು ಪಡೆದುಕೊಂಡಿದೆ. ಸಂಘ ಪರಿವಾರದ ಪದಾಧಿಕಾರಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನಗರದ ಪ್ರಮುಖ ಕಾರ್ಯಕ್ರಮವಾಗಿ ಗಮನ ಸೆಳೆದಿರುವ ಈ ಲೋಕಾರ್ಪಣೆ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡೋರಿ ಗ್ರಾಮಕ್ಕೆ ಜಿಲ್ಲಾಧಿಕಾರಿ- ಸ್ನೇಹಲ್ ಆರ್. ಭೇಟಿ  ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ಮಾತು ಮನೆ ಕಟ್ಟುತ್ತದೆ, ಮಾತೇ ಮನೆಯನ್ನು ಕೆಡಿಸುತ್ತದೆ - ಶಿದ್ದಲಿಂಗಶ್ರೀ*ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ದತ್ತಾ ವಾಸ್ಟರ್ ಅವಿರೋಧವಾಗಿ ಆಯ್ಕೆ*ಪ್ರಾಮಾಣಿಕತೆ ಇದ್ದಲ್ಲಿ ಲಾಭ ಹೆಚ್ಚಿರುತ್ತದೆ - ಗುರುಪಾದ ಶ್ರೀಭಾಜಪ ಜಿಲ್ಲಾಧ್ಯಕ್ಷ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ