Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

*ಅಳವಂಡಿ ಪೋಲಿಸ್ ಠಾಣೆಯ ಯಲ್ಲಿ ದೌರ್ಜನ್ಯ: ಆರೋಪ: ಕ್ರಮಕ್ಕೆ ಒತ್ತಾಯ*

ಕೊಪ್ಪಳ/ತಾಲೂಕಿನ ಅಳವಂಡಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಹ್ಲಾದ್ ನಾಯಕ್ ಮತ್ತು ಠಾಣಾ ಕಾನಿಸ್ಟೇಬಲ್ ರವರು ವಿಚಾರಣೆ ನೆನಪದಲ್ಲಿ ತೀವ್ರ ತೊಂದರೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹಿಂಸೆ ನೀಡಿದ್ದಾರೆಂದು  ಬೋಚನಹಳ್ಳಿ ಗ್ರಾಮದ ಯಲ್ಲಪ್ಪ ಮೇಟಿ ಮತ್ತು ಬಸವರಾಜ್ ಬಂಡಿ ರವರು ಜಂಟಿಯಾಗಿ ಆರೋಪಿಸಿ ಅವರ ವಿರುದ್ಧ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ, 
ಈ ಕುರಿತು ಶನಿವಾರದಂದು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಆರೋಪಿಸಿ ಅವರ ವಿರುದ್ಧ  ಇಲಾಖೆಗೆ ಮತ್ತು ಸರ್ಕಾರಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ,
 ಕಾನೂನು ವಿಧ್ಯಾರ್ಥಿಗಳಾದ ಯಲ್ಲಪ್ಪ ತಂದೆ ಸುರೆಶಪ್ಪ ಮೇಟಿ (ಅಂಗವಿಕಲ) ವಯಸ್ಸು : 26, ವಿಳಾಸ : ಬೋಚನಹಳ್ಳಿ ಮತ್ತು ಬಸವರಾಜ ತಂದೆ ಗೋಣೆಪ್ಪ ಬಂಡಿ ವಯಸ್ಸು : 26, ವಿಳಾಸ : ಬೋಚನಹಳ್ಳಿ,  ರವಿವಾರ 14-ರಂದು ರಾತ್ರಿ 8:30 ಕ್ಕೆ ಅಳವಂಡಿಯ ಪೋಲಿಸ್ ಠಾಣೆಗೆ ಹೋಗಿದ್ದೆವು ಕಾರಣ ನನ್ನ ಸ್ನೇಹಿತನಾದ ಮರಿತಿಮ್ಮಪ್ಪನನ್ನು ಸಿವಿಲ್ ವ್ಯಾಜ್ಯಕ್ಕೆ ಸಂಬಂದಿಸಿದಂತೆ ನೋಟಿಸ್ ಕೊಡದೆ ಕರೆದುಕೊಂಡು ಹೊಗಿದ್ದರು, ಇದನ್ನು ಪ್ರಶ್ನೆ ಮಾಡಲು ನಾವುಗಳು ಠಾಣೆಗೆ ಹೋದಾಗ ಮರಿತಿಮ್ಮಪ್ಪನ ಮೇಲೆ ಠಾಣೆಯಲ್ಲಿ ಹಲ್ಲೆ ಮಾಡಿದ್ದರು ಈ ಘಟನೆಯನ್ನು ಯಲ್ಲಪ್ಪರವರು ತಮ್ಮ ಮೋಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದರು ಅದನ್ನು ಗಮನಿಸಿದ ಪಿ.ಎಸ್. ಐ ಪ್ರಹ್ಲಾದ್ ನಾಯಕ್ ರವರು ಮೊಬೈಲ್ ಕಸಿದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗವಿಕಲನಾದ ಯಲ್ಲಪ್ಪರವರ ಮೇಲೆ ಮನಬಂದಂತೆ ದೈಹಿಕ ಹಲ್ಲೆ ನಡೆಸಿದರು, ಹೊಡೆಯುವ ಹಕ್ಕು ನಿಮಗೆ ಇಲ್ಲಾ ಎಂದು ಪ್ರಶ್ನಿಸಿದ ಬಸವರಾಜನ ಮೇಲೂ ಏಕಾಏಕಿ ಕಾನಸ್ಟೇಬಲ್‌ಗಳು ಹಲ್ಲೆ ನಡೆಸಿದರು ಮತ್ತು ರೂಮಿನಲ್ಲಿ ನಮ್ಮಿಬ್ಬರನ್ನು ಕೂಡಿಹಾಕಿ ಥಳಿಸಿದ್ದಾರೆ. ನಂತರ ಮೋಬೈಲ್ನಲ್ಲಿ ಸಂಪೂರ್ಣ ಸೆರೆಹಿಡಿದಿದ್ದ ವಿಡೀಯೋಗಳನ್ನ ನಮ್ಮಿಂದ ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ಕಾನೂನು ಕೊಟ್ಟಿರುವಂತಹ ಅಧಿಕಾರವನ್ನು ಪೋಲಿಸ್ ರವರು ದೂರುಪಯೋಗ ಪಡಿಸಿಕೊಂಡಿದ್ದಾರೆ. ಈ ಎಲ್ಲಾ ಘಟನೆಯು ಅಳವಂಡಿ (583226) ಠಾಣೆಯ  ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿದ್ದು ಈ ಘಟನೆಯ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕೊಪ್ಪಳ ಇವರಿಗೆ ಕಾನೂನು ವಿಧ್ಯಾರ್ಥಿಗಳ ಸಂಘ ಮತ್ತು ನೊಂದ ವಿರ್ಧ್ಯಾರ್ಥಿಗಳಿಂದ ದೂರನ್ನು ದಿ 15-ರಂದು ಸಲ್ಲಿಸಿದ್ದು,  ಜಿಲ್ಲಾ ಪೋಲಿಸ್ ದೂರುಗಳ ಪ್ರಾಧಿಕಾರ ಜಿಲ್ಲಾ ಆಡಳಿತ ಭವನ ಕೊಪ್ಪಳ ಇವರಿಗೆ ದೂರನ್ನು 17- ರಂದು ಸಲ್ಲಿಸಿದ್ದು, ಮಾನವ ಹಕ್ಕುಗಳ ಆಯೋಗಕ್ಕೆ ಕೂಡ ದೂರನ್ನು ನೀಡಿದ್ದು ಮತ್ತು  ರಾಜ್ಯಪಾಲರು,  ಮುಖ್ಯ ಮಂತ್ರಿಗಳು,  ಗೃಹ ಸಚಿವರು,  ವಿರೋಧ ಪಕ್ಷದ ನಾಯಕರು, ಪೋಲಿಸ್ ಮಹಾನಿರ್ದೇಶಕರು, ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೂ ಕೂಡ ದೂರನ್ನು ಸಲ್ಲಿಸಿದ್ದೆವೆ, ಈ ಘಟನೆಯ ಕುರಿತು ಯಾವುದೇ ರೀತಿಯ ಕ್ರಮ ವಹಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಕಾನೂನು ವಿಧ್ಯಾರ್ಥಿಗಳ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಲ್ಲಪ್ಪ ತಂದೆ ಸುರೇಶಪ್ಪ ಮೇಟಿ ಬೋಚನಹಳ್ಳಿ ಮತ್ತು ಬಸವರಾಜ್ ತಂದೆ ಗೋಣೆಪ್ಪ ಬಂಡಿ ಭೋಚನಹಳ್ಳಿ ಅವರು ಜಂಟಿ ಪ್ರಕಟಣೆ ಮೂಲಕ ತಿಳಿಸಿ ದೂರು ನೀಡಿ ಕೂಡಲೇ ಸಂಬಂಧಿಸಿದವರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ,

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು  ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಅದ್ದೂರಿಯಾಗಿ ಲೋಕಾರ್ಪಣೆ. ಚಿಕ್ಕಸಂಗಮ ಅಂತಾರಾಷ್ಟ್ರೀಯ ಪ್ರವಾಸಿತಾಣ  ಮಾಡುವ ಗುರಿ ರಾಯಬಾಗ:ಗ್ರಾಹಕರ ಅಚಲ ವಿಶ್ವಾಸವೇ ಸಹಕಾರಿಯ ಯಶಸ್ಸಿಗೆ ಕಾರಣ: ಸಂಜಯ ಅಡಕೆಜು ೨೨ ರಿಂದ ಜು ೨೮ರ ವರೆಗೆ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರವಿಜಯಾನಂದ ಕಾಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜೂನ್ ೨೨ರಂದು ಹಕ್ಕೊತ್ತಾಯ ಪಾದಯಾತ್ರೆ ಇದ್ದಲಗಿ ಗ್ರಾಮಸ್ಥರ ಧರಣಿ ಸತ್ಯಾಗ್ರಹ : ಬೇಡಿಕೆಗಳ ಇಡೇರಿಕೆಗೆ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ ಶ್ರೀ ರಾಮನ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಶಾಸಕ ವಿಶ್ವಾಸ ವೈದ್ಯ ರೈತರಿಗೆ ಖೇತ ಬಚಾವೋ ಅಭಿಯಾನ ತರಬೇತಿ ಕಾರ್ಯಕ್ರಮ*ಅಳವಂಡಿ ಪೋಲಿಸ್ ಠಾಣೆಯ ಯಲ್ಲಿ ದೌರ್ಜನ್ಯ: ಆರೋಪ: ಕ್ರಮಕ್ಕೆ ಒತ್ತಾಯ*