Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವರಮಹಾಲಕ್ಷ್ಮಿ ವಿಶೇಷ: ಬಳ್ಳಾರಿಯಲ್ಲಿ ಅವಿರಾ ಉಡುಪು ಸೀರೆ ಹಾಗೂ ಬೆಳ್ಳಿ ಆಭರಣಗಳ ಹಬ್ಬ

ಬಳ್ಳಾರಿ, ಜು. 30: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಳ್ಳಾರಿಯಲ್ಲಿ ಅವಿರಾ ಉಡುಪು ವತಿಯಿಂದ ಮೂರು ದಿನಗಳ ವಿಶೇಷ ಸೀರೆ ಹಾಗೂ ಬೆಳ್ಳಿ ಆಭರಣಗಳ ಹಬ್ಬವನ್ನು ಆಯೋಜಿಸಲಾಗಿದೆ. ಜುಲೈ 31ರಿಂದ ಆಗಸ್ಟ್ 2ರವರೆಗೆ ನಗರದ ಹೊಸ ಟ್ರಂಕ್ ರಸ್ತೆಯಲ್ಲಿರುವ ಹೋಟೆಲ್ ರಾಯಲ್ ಫೋರ್ಟ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವಿರಾ ಉಡುಪು ಸಂಸ್ಥೆಯ ಕಾರುಣ್ಯ ಗೌಡ, ಪ್ಯೂರ್ ಮೈಸೂರು ಕ್ರೇಪ್ ರೇಷ್ಮೆ, ಬನಾರಸಿ, ಟಿಶ್ಯೂ, ಮುಗಾ ರೇಷ್ಮೆ, ಕಲಂಕಾರಿ, ಕಾಟನ್, ಕಸೂತಿ ಹಾಗೂ ವಿವಿಧ ಮಾದರಿಯ ಸೀರೆಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಯ್ದ ಸೀರೆಗಳ ಮೇಲೆ ಶೇ.50ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಮೇಳದಲ್ಲಿ ರಸ್ ಸಿಲ್ವರ್ ಜ್ಯುವೆಲ್ಲರಿ ಸಂಸ್ಥೆಯೂ ಭಾಗವಹಿಸಿದ್ದು, ಬೆಳ್ಳಿ ಆಭರಣಗಳ ಮೇಲೆ ಶೇ.15ರವರೆಗೆ ವಿಶೇಷ ರಿಯಾಯಿತಿ ನೀಡುತ್ತಿದೆ. ಬಳ್ಳಾರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಮಹಿಳೆಯರು ಮತ್ತು ಸಾರ್ವಜನಿಕರು ಈ ವಿಶೇಷ ಮೇಳಕ್ಕೆ ಭೇಟಿ ನೀಡಿ ಹಬ್ಬದ ಖರೀದಿಯ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST