Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಗವಾಡ: ಪಟ್ಟಣ ಪಂಚಾಯಿತಿಯಿಂದ 'ಕ್ಯಾಚ್ ದಿ ರೇನ್' ಜಲ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಕಾಗವಾಡ:ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಮರಾಠಿ ಶಾಲೆಯ ಮುಖ್ಯೋಪದಾಯ, ಡಿ ಪಿ ಧಾರವಾಡೆ ಹೇಳಿದರು.
ಅವರು ದಿ 30  ರಂದು ಕಾಗವಾಡ ಪಟ್ಟಣ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಜಲ ಮಿಷನ್‌ ಬೆಂಬಲಿತ 'ಕ್ಯಾಚ್ ದಿ ರೇನ್' ಜಲ ಸಂರಕ್ಷಣಾ ಅಭಿಯಾನದ ಅಂಗವಾಗಿ,  ಸಾರ್ವಜನಿಕರಲ್ಲಿ ಜಲ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ.ಮಳೆನೀರಿನ ಸರಿಯಾದ ಬಳಕೆ ಮತ್ತು ಸಂರಕ್ಷಣೆಗೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಕೋರಿದೆ.
ಮಳೆನೀರು ಕೊಯ್ಲು ಬೀಳುವ ಪ್ರತಿ ಹನಿ ಮಳೆನೀರನ್ನು ವ್ಯರ್ಥ ಮಾಡದೆ ಸಂಗ್ರಹಿಸುವುದು.ರೀಚಾರ್ಜ್ ಪಿಟ್ ನಿರ್ಮಾಣ ಮಳೆ ನೀರನ್ನು ಭೂಮಿಯ ಒಳಗೆ ಇಂಗಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು.ಪರಿಸರ ಜಾಗೃತಿ ಸಾರ್ವಜನಿಕ ಸಹಭಾಗತ್ವದೊಂದಿಗೆ ಪರಿಸರ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು
ಪಟ್ಟಣದ ಮನೆಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಮತ್ತು ಖಾಸಗಿ ಕಚೇರಿಗಳ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಜಲ ಸಂರಕ್ಷಣೆಯ ಈ ಬೃಹತ್ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಮನವಿ ಮಾಡಿದೆ.
ಇ ಸಂದರ್ಭದಲ್ಲಿ ಸುಭಾಷ ತುಪುಳೆ, ಸಾಯಿಲ ಪಾಟೀಲ, ಭರತ ಖೋತ. ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು
Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST