ತಾಳಿಕೋಟೆ, ರಾಜ್ಯದಲ್ಲಿ ಬೀಕರ ಬರಗಾಲ ಆವರಿಸಿಕೊಂಡಿದೆ ಇಂತಹ ಸಂದರ್ಬದಲ್ಲಿ ರೈತರ ಹಾಗೂ ಜನರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ನಿರಾಸಕ್ತಿ ವಹಿಸುತ್ತಾಸಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಬುಧವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು ಬರಗಾಲ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ ಪತ್ರಬರೆದಿದ್ದೇವೆಂದು ಹಾರಿಕೆ ಉತ್ತರ ನೀಡುತ್ತಾ ಸಾಗಿದ್ದಾರೆ ಬರದ ಛಾಯೆ ರೈತರಿಗೆ ಸಂಕಷ್ಟಕ್ಕೆ ದೂಡಿದೆ ಆದರೆ ಕ್ಷೇತ್ರದಲ್ಲಿದ್ದುಕೊಂಡು ಕೆಲಸ ಮಾಡಬೇಕಾದ ಕಾಂಗ್ರೆಸ್ಸಿನ ಶಾಸಕರು ತಮ್ಮ ತಮ್ಮ ಮಂತ್ರಿ ಆಸೆಗಾಗಿ ದೆಹಲಿ, ಬೆಂಗಳೂರ ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆಂದು ಆರೋಪಿಸಿದರು.
ಉಸ್ತುವಾರಿಮಂತ್ರಿ ಬಬಲೇಶ್ವರಕ್ಕೆ ಸೀಮಿತನಾ?
ರೈತರ ಸಂಕಷ್ಟದ ಸಂದರ್ಬದಲ್ಲಿ ನೆರವಿಗೆ ಬರಬೇಕಾದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಬಬಲೇಶ್ವರ ಒಂದೇ ಕ್ಷೇತ್ರ ಜಿಲ್ಲೆ ಎಂದು ತಿಳಿದುಕೊಂಡು ಸಾಗಿದ್ದಾರೆ ವಿಜಯಪುರ ಜಿಲ್ಲೆಯಲ್ಲಿ ೮ ವಿಧಾನ ಸಭಾ ಕ್ಷೇತ್ರವೆಂಬುದನ್ನು ಮರೆತಿದ್ದಾರೆಂದು ಆರೋಪಿಸಿದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆ ಮುಕ್ತಾಯಗೊಳಿಸುವ ಸಲುವಾಗಿ ಕಳೆದ ೧ ವರ್ಷಗಳ ಹಿಂದೆ ರೈತರೆಲ್ಲರೂ ಒಗ್ಗೂಡಿ ಬೃಹತ್ ಹೋರಾಟ ನಡೆಸಿದ್ದಾಗ ಸ್ಥಳಕ್ಕೆ ಆಗಮಿಸಿದ ಎಂಬಿ ಪಾಟೀಲರು ಕೂಡಲೇ ಕೆಲಸ ಮುಗಿಸಿಕೊಡುತ್ತೇನೆ ಕೇವಲ ೨೦೦ ಕೋಟಿ ರೂ. ಕೆಲಸ ಭಾಕಿ ಉಳಿದಿದೆ ಸಾವಿರಾರು ಕೋಟಿ ಕೆಲಸ ಮುಗಿದಿದೆ ಇನ್ನೇನೂ ಸಣ್ಣ ಅಮೌಂಟಿಂದು ಉಳಿದಿದೆ ವರ್ಷದೊಳಗೆ ಮುಗಿಸಿಕೊಡುತ್ತೇನೆಂದು ಹೇಳಿ ಪ್ರತಿಭಟನಾ ನಿರತ ರೈತರಿಗೆ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿ ಹೋದವರು ಇನ್ನೂವರೆಗೂ ಈ ಯೋಜನೆ ಮುಕ್ತಾಯಗೊಳಿಸಲು ಚಕಾರ ಶಬ್ದ ಎತ್ತುತ್ತಿಲ್ಲಾ ಈ ಬೂದಿಹಾಳ-ಫೀರಾಪೂರ ಎಫ್‌ಆಯ್‌ಸಿ ಕಾಲುವೆ ನಿರ್ಮಾಣಕ್ಕೆ ಸಂಬಂದಿಸಿ ಕೆಲಸದಲ್ಲಿ ಯಾವುದೇ ಪ್ರೋಗ್ರೇಸ್‌ಕೂಡಾ ಪ್ರಾರಂಬವಾಗಿಲ್ಲಾ ಹೀಗಾಗಿ ಮತ್ತೇ ರೈತರೆಲ್ಲರೂ ಒಗ್ಗೂಡಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಆದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಏನೂ ಗೊತ್ತಿಲ್ಲದಂತೆ ಕ್ಷೇತ್ರವನ್ನೇ ಜಿಲ್ಲೆ ಎಂದು ತಿಳಿದು ಅಲ್ಲೇ ಸುತ್ತಾಡುತ್ತಿದ್ದಾರೆಂದು ಆರೋಪಿಸಿದರು.
ಗ್ರಾಂಪಂ-ಪುರಸಭೆಗೂ ಇಲ್ಲಾ ಅನುದಾನ
ಇಡೀ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಎಲ್ಲರೀತಿಯಿಂದಲೂ ವೈಫಲ್ಯದಲ್ಲಿ ಮುಂದುವರೆದಿದೆ ಗ್ರಾಂಪಂಗಳಿಗೆ ಕಳೆದ ೨ ವರ್ಷಗಳಿಂದಲೂ ೧೫ ನೇ ಹಣಕಾಸು ಒಳಗೊಂಡು ಯಾವುದೇ ರೀತಿಯ ಅನುದಾನ ಬಿಡುಗಡೆಗೊಳಿಸಿಲ್ಲಾ ಕೇವಲ ತೆರಿಗೆ ವಸೂಲಿಯ ಮೇಲೆ ವಿದ್ಯುತ್ ಬಿಲ್ ಇನ್ನಿತರ ಕಚೇರಿ ಕೆಲಸಗಳನ್ನು ಮಾಡಿಕೊಂಡು ದಿನ ದೂಡುವಂತಹ ಪರಸ್ಥಿತಿ ಗ್ರಾಂಪಂಗಳಿಗೆ ಬಂದೊದಗಿದೆ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಿಗೂ ಇದೇ ರೀತಿಯಾದ ಅನುದಾನದ ಕೊರತೆಯಿಂದ ಯಾವದೇ ಅಭಿವೃದ್ದಿ ಕೆಲಸ ಕಾರ್ಯಗಳು ಮಾಡಲು ಆಗದ ಪರಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆ ಇಲ್ಲಾ ಹೀಗಾಗಿ ವೈದ್ಯರು ಔಷಧಿಗಳು ಇಲ್ಲದಕ್ಕೆ ಹೊರಗಡೆ ತೊರಿಸಿಕೊಳ್ಳಲು ಹೋಗಿ ಎಂಬ ಪರಸ್ಥಿತಿ ಬಂದೊದಗಿದೆ ಇದೇಲ್ಲವನ್ನು ಮರೆ ಮಾಚಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಚೀವರು, ಶಾಸಕರು ಕಾಲಹರಣ ಮಾಡುತ್ತಿದ್ದಾರೆ ಸಚೀವ ಪ್ರೀಯಾಂಕಾ ಖರ್ಗೆಗೆ ಬೆಳಗಾದರೆ ಆರ್‌ಎಸ್‌ಎಸ್ ಜಪಿಸುವ ಚಿಂತೆಯಾಗಿದೆ ಇದನ್ನೇ ವೈಬವಿಕರಿಸಿ ರಾಜ್ಯದ ಜನರ ದಿಕ್ಕ ತಪ್ಪಿಸಿ ಸರ್ಕಾರದ ವೈಫಲ ಮರೆಮಾಚುವ ಕೆಲಸ ನಡೆದಿದೆ ಎಂದು ಆರ್.ಎಸ್.ಪಾಟೀಲ(ಕೂಚಬಾಳ) ಅವರು ಆರೋಪಿಸಿದರು.
ದರ ಹೆಚ್ಚಳದಲ್ಲಿ ಮೊಳಗಿದ ಸರ್ಕಾರ
ಕಾಂಗ್ರೆಸ್‌ನ ಯೋಜನೆಗಳು ಯಾವು ಜನರಿಗೆ ಮುಟ್ಟುತ್ತಿಲ್ಲಾ ಹಾಲಿನಿಂದ ಹಿಡಿದು ಆಲ್ಕೋಹಾಲ್‌ದವರೆಗೂ ದರವನ್ನು ಹೆಚ್ಚಿಗೆ ಮಾಡಿದ್ದಾರೆ ಜನನ ಉತ್ತಾರೆದಿಂದ ಮರಣ ಉತ್ತಾರೆವರೆಗೆ ಮತ್ತು ಸಬ್‌ರಜಿಸ್ಟರ್ ಆಫಿಸ್‌ಗೆ ಹೊದರೆ ದರ ಹೆಚ್ಚಳ ಛಾಪಾಖಾಗದದ ದರ ದುಪ್ಪಟ್ಟು ಮಾಡಿದ್ದಾರೆ ಪೇಟ್ರೋಲ್, ಡಿಸೇಲ್ ದರಕ್ಕೆ ತೆರಿಗೆ ಹಾಕಿದ್ದಾರೆ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವಂತಹ ಕೆಲಸ ರಾಜ್ಯದ ಕಾಂಗ್ರೇಸ್ ಸರ್ಕಾರದ ಮಾಡಿದೆ ಎಂದು ಆರೋಪಿಸಿದ ಅವರು ಕೂಡಲೇ ರಾಜ್ಯದ ಕಾಂಗ್ರೇಸ್ ಸರ್ಕಾರ ಇನ್ನಾದರೂ ಏಚ್ಚೆತ್ತುಕೊಂಡು ಬರ ನಿರ್ವಹಣೆಗೆ ಕೆಲಸಗಳನ್ನು ಪ್ರಾರಂಬಿಸುವಂತಹ ಕೆಲಸ ಮಾಡಲಿ ಎಂದು ಒತ್ತಾಯಿಸಿದ ಅವರು ಕೂಡಲೇ ಮುಖ್ಯಮಂತ್ರಿಗಳು ಈ ಕಾಂಗ್ರೇಸ್ ಸರ್ಕಾರದ ಕಳೆದ ೩ ವರ್ಷದ ಆಡಳಿತದಲ್ಲಿ ಏಷ್ಟು ಸಾಲ ಮಾಡಲಾಗಿದೆ ಎಂಬುದನ್ನು ಶ್ವೇತ ಪತ್ರ ಹೊರಡಿಸಿ ರಾಜ್ಯದ ಜನರಿಗೆ ಉತ್ತರ ಕೊಡುವಂತಹ ಕೆಲಸ ಮಾಡಬೇಕೆಂದರು.
