ಹಸಿರು ಕ್ರಾಂತಿ ವರದಿ ವಿಜಯಪುರ
ಗುಂಟಾ ಮನೆಗಳಿಗೆ, ರೈತರ ತೋಟದ ಮನೆಗಳಿಗೆ, ಅನುಮತಿಗೆ ಕೋರಿ ಸಲ್ಲಿಸಿದ ಎಲ್ಲ ಮನೆಗಳಿಗೆ ವಿದ್ಯುತ್ ಹೊಸ ಸಂಪರ್ಕ ಶೀಘ್ರ ಕಲ್ಪಿಸಬೇಕು, ವಿಜಯಪುರ ನಗರದಲ್ಲಿ ಭೂಗತ ಕೇಬಲ್ ವಿದ್ಯುತ್ ಸಂಪರ್ಕ ಅಳವಡಿಸಲು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಸಬೇಕು, ಇಂಧನ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಮೂಲಕ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ರೈತ ಭಾರತ ಪಕ್ಷದ ವತಿಯಿಂದ ಮನವಿ ನೀಡಿದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹೆಸ್ಕಾಂ ವಿಭಾಗಿಯ ಕಚೇರಿಯವರಿಗೆ ಸೋಮವಾರ ಪಾದಯಾತ್ರೆ ನಡೆಸಿ ಹೆಸ್ಕಾಂ ವಿಭಾಗೀಯ ಕಚೇರಿಯ ಆವರಣದಲ್ಲಿ ನಡೆದ ಅನಿರ್ದಿಷ್ಟ ಹೋರಾಟವನ್ನು ಮುಂದುವರೆಸಿದರು. ಸ್ಥಳಕ್ಕೆ ಹೆಸ್ಕಾಂ ಎಂಡಿ, ಜಿಎಂ ತಾಂತ್ರಿಕ, ಜಿಎಂ ಅಡ್ಮಿನ್, ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರರು ಹೆಸ್ಕಾಂ ಆರ್‌ಎಪಿಡಿಆರ್‌ಪಿ ಮತ್ತು ಮುಖ್ಯ ವಿದ್ಯುತ್ ಪರ್ವೀಕ್ಷಕರು ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಎಲ್ಲರಿಗೂ ವಿದ್ಯುತ್ ಸಂಪರ್ಕವನ್ನು ನೀಡಿ. ಇಲ್ಲವೇ ಕಳ್ಳತನ ಮಾಡಲು ಬಿಡಿ. ಈ ವಿಷಯವಾಗಿ ತಮ್ಮ ಇಲಾಖೆಯ ಯಾವುದೇ ಅಧಿಕಾರಿಗಳು ಬ೦ದು ದ೦ಡ ಹಾಕುವಂತಿಲ್ಲ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದ ವಿದ್ಯುತ್ ಗ್ರಾಹಕರು ಕಟ್ಟಿದ, ಕಟ್ಟುವ ಮನೆಗಳಿಗೆ ಹಾಗೂ ವ್ಯಾಪಾರ ಮಾಡುವ ಬಕ್ಲೀಸ್ ಪತ್ರದ ಸ್ಥಾವರಗಳಿಗೆ ವಿದ್ಯುತ್ ಸ೦ಪರ್ಕವನ್ನು ನಿರಂತರವಾಗಿ ನೀಡಬೇಕು. ಪ್ರತಿವರ್ಷ ಎಎಸ್‌ಡಿ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದು, ಅದನ್ನು ಐಎಸ್‌ಡಿ ಹೆಡ್ಡಿನಲ್ಲಿ ಕಟ್ಟಿಸಿಕೊಳ್ಳಬೇಕು. ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಶಿವಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ ಗ್ರಾಮೀಣ ಉಪವಿಭಾಗವನ್ನು ಮೊದಲಿನ ಜಾಗಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೇ ಅಧೀಕ್ಷಕ ಅಭಿಯಂತರ ಕಚೇರಿಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
11 ಡಿಸೆಂಬರ್ 2024 ರಿಂದ ಇಲ್ಲಿಯವರೆಗೆ ಹೊಸದಾಗಿ ಪಡೆದಿರುವ ವಿದ್ಯುತ್ ಸಂಪರ್ಕಗಳಿಗೆ ಉಚಿತ ಗೃಹಜೋತಿ ಯೋಜನೆ ನೀಡಬೇಕು. ಗೃಹ ಜ್ಯೋತಿ ಯೋಜನೆಗೆ 2022-23ರ ಸರಾಸರಿ ಯುನಿಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು, ವರ್ಷಗಳು ಬದಲಾದಂತೆ ಸರಾಸರಿ ಯೂನಿಟ್‌ಗಳು ಬದಲಾವಣೆಯಾಗಬೇಕು ಎಂದು ಒತ್ತಾಯಿಸಿದರು.
ರೈತರಿಗೆ ನೀಡುವ ಅಸಮರ್ಪಕ ವಿದ್ಯುತ್ ತಡೆಗೆ ಆಗ್ರಹ:
ರೈತರ ಪಂಪ್‌ಸಟ್ ದಂಡದ ಹಣವನ್ನು ₹15,000 ದಿಂದ ಶೂನ್ಯಕ್ಕೆ ಇಳಿಸಬೇಕು. ಏಕೆಂದರೆ ಮೊದಲೇ ಬರಗಾಲ ಇರುವುದರಿಂದ ರೈತರಿಗೆ ಅನುಕೂಲ ಮಾಡಿಕೊಡಬೇಕು. ರೈತರಿಗೆ ಅಸಮರ್ಪಕ ವಿದ್ಯುತ್ ನೀಡುವುದನ್ನು ನಿಲ್ಲಿಸಬೇಕು. ರೈತರ ವಿದ್ಯುತ್ ಪರಿವರ್ತಕಗಳ ಫೀಯನ್ನು ₹3100 ರಿಂದ ₹10,500 ಏರಿಸಿದ್ದೀರಿ. ಅದನ್ನು ಪುನಃ 3100ಕ್ಕೆ ಇಳಿಸಬೇಕು. ಯಾವುದೇ ವಿದ್ಯುತ್ ಪರ್ವೀಕ್ಷಕರ ಕಚೇರಿಯಲ್ಲಿ ಅನ್‌ಲೈನ್ ಮೂಲಕ ಅರ್ಜಿಯನ್ನು ಹಾಕಿದ ಮೇಲೆ ಅದಕ್ಕೆ ತುಂಬಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ತುಂಬಾ ವಿಷಾದಕರ ಸಂಗತಿ. ಆದಕಾರಣ ಆ ಕೆಲಸ ಮುಗಿಯುವವರೆಗೆ ಅದರಲ್ಲಿಯೇ ಇರಬೇಕು ಅಥವಾ ಆ ಕೆಲಸ ಆಗದಿದ್ದರೇ ಅರ್ಜಿದಾರರಿಗೆ ಆ ಹಣವನ್ನು ಪುನಃ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಇಸ್ಮಾಯಿಲ್ ಸುತಾರ್, ಶಿವು ಉಪ್ಪಲದಿನ್ನಿ, ಹಾರುಣ್ ಶೇಖರ್, ಸಲಹುದ್ದೀನ್ ಮನಿಯರ್, ರಾಜು ದುಮಾಲೆ ರಾಜು ಧುಮಾಲೆ, ಕೆ.ಎಂ.ಹುಂಡೆಕಾರ್, ವಿಠ್ಠಲ್ ಕೊಲ್ಗಾರ, ಇಮ್ತಿಯಾಜ್ ಶೇಖ, ಗದಿಗೆಪ್ಪ ವಾಲಿಕಾರ್, ಪ್ರತಾಪ್ ದೊಡ್ಡಮನಿ, ಪ್ರಕಾಶ್ ನಾಯ್ಕೊಡಿ, ಶಿವು ವಾಗೋಲಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಸುಮಾರು 75 ಪರ್ಸೆಂಟ್ ಅಧಿಕಾರಿಗಳು ಸ್ವಯಂ ಕಾಮಗಾರಿಗಳನ್ನು ಹಿಡಿದು ಕೆಲಸವನ್ನು ಮಾಡುತ್ತಿದ್ದು, ಅಂತಹ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಬೇಕು. ಎಲ್ಲ ವಿದ್ಯುತ್ ಕಂಪನಿಗಳ ಅಧಿಕಾರಿಗಳ ಸಿಗ್ನಚರ್ ಅನ್ನು ಡಿಜಿಟಲ್ ಆಗಿ ಪರಿವರ್ತಿಸಬೇಕು. ಎಲ್ಲ ಹಿರಿಯ ಅಧಿಕಾರಿಗಳು ವಿಸಿ ಮೀಟಿಂಗ್ ಕಡಿಮೆ ಮಾಡಿ ಸಾರ್ವಜನಿಕರ ಕೆಲಸ ಮಾಡುವ ಕಡೆ ಗಮನಹರಿಸಬೇಕು. ಸಾರ್ವಜನಿಕ ಮಾಹಿತಿ ಹಕ್ಕು ನಿಯಮದಡಿ ಹೆಸ್ಕಾಂ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇದರ ಬಗ್ಗೆ ಎಲ್ಲರಿಗೂ ಟ್ರೈನಿಂಗ್ ನೀಡಬೇಕು. ಇ೦ಧನ ಇಲಾಖೆಯ ಉದ್ಯೋಗಿಗಳ ಮೆಡಿಕಲ್ ಬಿಲ್ ಹಾಗೂ ಲೀವ್ ಸರಂಡರ್ ಹಣವನ್ನು ಬೇಗನೆ ನೀಡಬೇಕು. ವಿದ್ಯುತ್ ಗುತ್ತಿಗೆದಾರರ ಕಾಮಗಾರಿಗಳ ಬಿಲ್ ಬೇಗನೆ ನೀಡಬೇಕು.
-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.