Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

 "ಫಲಾಪೇಕ್ಷೆಯಿಲ್ಲದ ಕಾರ್ಯ ಶ್ಲಾಘನೀಯ" -ಶ್ರೀಗುರುಸಿದ್ದೇಶ್ವರ ಶ್ರೀ


ಉಳ್ಳಾಗಡ್ಡಿ-ಖಾನಾಪೂರ:-ಪತ್ರಕರ್ತರು ಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸಿದ್ದು ಅವರ ಶ್ರಮಕ್ಕೆ ತಕ್ಕ ಪ್ರತಿಫಲವೇ ಬೆಳಗಾವಿ ಜಿಲ್ಲೆಯಲ್ಲಿ ಕೊಡಮಾಡಿದ 
ರಾಜ್ಯೋತ್ಸವ ಪ್ರಶಸ್ತಿ ಎಂದು ಹತ್ತರಗಿಯ ಕಾರಿಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು,
 ಅವರು ಸೋಮವಾರ ದಿ,೨ ರಂದು ಹತ್ತರಗಿಯ ಹರಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಕರ್ತರಾದ ಎ ಎಮ್ ಕರ್ನಾಚಿ ಹಾಗೂ ಬಿ ಬಿ ಕೋತೇಕರ ಅವರ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಸಂದಿಗ್ದ ಸ್ಥಿತಿಗಳಲ್ಲಿಯೂ ವರದಿಗಳನ್ನು ತಯಾರಿಸುವ ಚಾತುರ್ಯವನ್ನು ಪತ್ರಕರ್ತರು ರೂಢಿಸಿಕೊಂಡು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಕಲೆ ಇಂದಿನ ಸಮಾಜದಲ್ಲಿ ಅಗತ್ಯವಿದೆ ಆ ದಿಸೆಯಲ್ಲಿ ನಮ್ಮ ಭಾಗದ ಪತ್ರಕರ್ತರು ಕಾರ್ಯ ಪ್ರವೃತ್ತರಾಗಿದ್ದು ಶ್ಲಾಘನೀಯ ಎಂದರು,
ವೇದಿಕೆಯಲ್ಲಿದ್ದ ಹತ್ತರಗಿಯ ಹರಿ ಮಂದಿರದ ಡಾ|| ಆನಂದ ಮಹಾರಾಜ ಗೋಸಾವಿ ಮಾತನಾಡಿ ಸತ್ಯ ಸಂಶೋಧನೆಯೇ ಪತ್ರಿಕಾರಂಗದ ಧರ್ಮ ಆ ನಿಟ್ಟಿನಲ್ಲಿ ಸಮಾಜದಲ್ಲಿ ಶೃದ್ದೆಯಿಂದ ಜೀವನದಲ್ಲಿ ನಿರಪೇಕ್ಷವಾಗಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ಪತ್ರಕರ್ತರ ಸಹಕಾರ ಮತ್ತು ಕಾರ್ಯ ಅತ್ಯಗತ್ಯ ಎಂದರು,
ಪ್ರಾಸ್ತಾವಿಕವಾಗಿ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಾ||ಪಿ,ಬಿ ಅವಲಕ್ಕಿ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣಸಿಂಗ್ ರಜಪೂತ ವಹಿಸಿ ಮಾತನಾಡಿ ನಮ್ಮ ಕ್ಷೇತ್ರದ ಇಬ್ಬರು ಪತ್ರಕರ್ತರಾದ ಎ ಎಮ್ ಕರ್ನಾಚಿ ಹಾಗೂ ಬಿ ಬಿ ಕೊತೇಕರ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸವಿದೆ ನಮ್ಮ ಕ್ಷೇತ್ರದ ಪತ್ರಕರ್ತರು ಎಲ್ಲರಂತಲ್ಲಾ ಯಮಕನಮರಡಿ ವಲಯದಲ್ಲಿ ಪತ್ರಿಕಾ ಭವನ ನಿರ್ಮಿಸಲು ಸಚಿವರಾದ ಸತೀಶ ಜಾರಕಿಹೊಳಿವರಿಗೆ ಬೇಡಿಕೆ ಇಡಲಾಗಿದ್ದು ಈ ಕಾರ್ಯ ಶೀಘ್ರವೇ ನಡೆಯಲಿದೆ ಎಂದರು,
ಸತ್ಕಾರ:-ಎ,ಎಮ್,ಕರ್ನಾಚಿ, ಬಿ ಬಿ ಕೋತೇಕರ ಹಾಗೂ ಲೇಖಕರಾದ ಪ್ರಸಾದ ಕುಲಕರ್ಣಿ ಮತ್ತು ಉಭಯ ಶ್ರೀಗಳನ್ನು ಪತ್ರಕರ್ತರ ಸಂಗದ ಸದಸ್ಯರು ಸತ್ಕರಿಸಿದರು ಇದೇ ಸಂದರ್ಭದಲ್ಲಿ ಇಬ್ಬರು ಪತ್ರಕರ್ತರನ್ನು ವಿವಿಧ ಮುಖಂಡರು ಸಂಘ-ಸಂಸ್ಥೆಗಳ ಅಧ್ಯಕ್ಷರು ಸತ್ಕರಿಸಿದರು,
 ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ದೀಪಕ ರಾಜಗೋಳಕರ ಶ್ರೀಕಾಂತ ನಾವಗೆ ರಾಜು ಭೋಸ್ಲೆ ಮಹಾದೇವ ಪಟೋಳಿ, ಪ್ರಸಾದ ಕುಲಕರ್ಣಿ ದೇವಪ್ಪಾ ಹುನ್ನೂರಿ ಸಂತೋಷ ನೌಕುಡೆ ಈರಣ್ಣ ಹಾಲದೇವರಮಠ ದಸ್ತಗೀರ ಬಸ್ಸಾಪೂರೆ ಶಾಂತಕುಮಾರ ಹಾಲದೇವರಮಠ ಹಾಗೂ ಯಮಕನಮರಡಿ ಪತ್ರಕರ್ತರ ಬಳಗದ ಸದಸ್ಯರು ಉಪಸ್ಥಿತರಿದ್ದರು,ಕಾರ್ಯಕ್ರಮಕ್ಕೆ ಎಸ್ ಆರ್ ತಬರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ  ಎಸ್ ಜಿ ಹುನ್ನರಗಿ ವಂದಿಸಿದರು,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನು ಶಿಕ್ಷಣವು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಸಾಧನ: ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ’ನನ್ನ ದೇಹ, ನನ್ನ ಸುರಕ್ಷತೆ’ ಪರಿಕಲ್ಪನೆಯಡಿ ಮಕ್ಕಳಿಗೆ ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು "ಫಲಾಪೇಕ್ಷೆಯಿಲ್ಲದ ಕಾರ್ಯ ಶ್ಲಾಘನೀಯ" -ಶ್ರೀಗುರುಸಿದ್ದೇಶ್ವರ ಶ್ರೀದೇಶನೂರ ಬಂಗಲೆ ರಸ್ತೆ, ದೇವಸ್ಥಾನದ ಅಭಿವೃದ್ಧಿ ಆದಷ್ಟು ಬೇಗ  ಪ್ರಾರಂಭ : ಬಾಬಾಸಾಹೇಬ ಪಾಟೀಲ ಹತ್ತರಗಿ : ದೀಪ ಸಂಜೀವಿನಿ ಉತ್ಪನ್ನಗಳ ಮಳಿಗೆ ಉದ್ಘಾಟನೆ,"ನಾಡು ನುಡಿ, ಗಡಿ ವಿಚಾರದಲ್ಲಿ ಒಗ್ಗಟ್ಟಿನಿಂದ ಶ್ರಮಿಸಿ  / ನಾಡು ನುಡಿಯ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕು"  *ಶಾಲಾ ದಾಖಲಾತಿಯಲ್ಲಿ ಗಣನೀಯ ಏರಿಕೆ: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು*ವಕೀಲರ ಸಂರಕ್ಷಣೆಯ ಕಾಯ್ದೆ ಪರಿಣಾಮಕಾರಿ ಜಾರಿಗೆ ಸವದತ್ತಿ ವಕೀಲರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ  ಇಂಡಿ: ಸಿದ್ದೇಶ್ವರ ಸ್ವಾಮೀಜಿ ಮಳಿಗೆಗಳ ಬಹಿರಂಗ ಹರಾಜು – ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆವಿದ್ಯುತ್‌ ಸಮಸ್ಯೆಗಳಿಗೆ ಶೀಘ್ರ ಪರಿಹರಿಸಲು ಆಗ್ರಹಿಸಿ ಅನಿರ್ದಿಷ್ಟ ಹೋರಾಟ