ಉಳ್ಳಾಗಡ್ಡಿ-ಖಾನಾಪೂರ:-ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕದ ಶ್ರಮದಿಂದ ಸೃಜನಶೀಲತೆಯಿಂದ ತಯಾರಿಸಿದ ವಿವಿಧ ವಿನ್ಯಾಸದ ದೀಪಗಳಿಗೆ ಹಾಗೂ ಹಬ್ಬದಲ್ಲಿ ತಯಾರಿಸುವ ವಿವಿದ ಸಿಹಿ-ತಿಂಡಿ ತಿನಿಸುಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಿ ಸ್ವದೇಶಿ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶದಿಂದ ದೀಪ ಸಂಜಿವಿನಿ ಮಳಿಗೆಗಳನ್ನು ತೆರೆಯುತ್ತಿರುವುದಾಗಿ ಸಹಾಯಕ ಕೃಷಿ ನಿರ್ದೇಶಕರಾದ ಮಹಾದೇವ ಪಟಗುಂದಿ ಹೇಳಿದರು,
ಅವರು ಮಂಗಳವಾರ ದಿ, ೩ ರಂದು ಹತ್ತರಗಿಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಇಲಾಖೆ ಜಿ,ಪಂ,ಬೆಳಗಾವಿ ತಾ,ಪಂ, ಹುಕ್ಕೇರಿ ಕೌಶಲ್ಯಾಭಿವ್ರದ್ದಿ ಮದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗು ಹತ್ತರಗಿ ಗ್ರಾ,ಪಂ,ಸಂಯುಕ್ತಾಶ್ರಯದಲ್ಲಿ ತೆರೆದ ದೀಪ ಸಂಜೀವಿನಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ವಿವಿಧ ಸ್ವ ಸಹಾಯ ಗುಂಪಿನವರು ತಯಾರಿಸಿದ ಉತ್ಪನ್ನಗಳು ಹಾಗೂ ಆಹಾರ ಪದಾರ್ಥ ಬಿಸ್ಕತ್ತು ಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕೆ ಇಡಲಾಗಿತ್ತು, ಗ್ರಾ,ಪಂ,ಅಭಿವೃದ್ದಿ ಅಧಿಕಾರಿ ಆನಂದ ಹೊಳೆನ್ನವರ ಸಂಜಿವಿನಿ ಒಕ್ಕೂಟಗಳ ವ್ಯವಸ್ಥಾಪಕರಾದ ವಿಜಯ ಕಾಂಬಳೆ ಸ್ವಸಹಾಯ ಸಂಘದ ಅಧ್ಯಕ್ಷೆ ಗಂಗವ್ವಾ ಕರಗುಪ್ಪಿ ಶೋಭಾ ಜಾರಕಿಹೊಳಿ ಮಾಧುರಿ ಪಟೋಳಿ ಭಾರತಿ ಸಮಯ ಲಕ್ಷ್ಮೀ ಮಠಪತಿ ಶೋಭಾ ಹಿರೇಮಠ ಲಕ್ಷ್ಮೀ ಆಲೂರಿ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಸಂಘದ ಮಹಿಳಾ ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು,
ಫೋಟೋ:-sss೩ ಯುಕೆ-೨ ಸಮೀಪದ ಹತ್ತರಗಿಯಲ್ಲಿ ದೀಪ ಸಂಜೀವಿನಿ ಮಳಿಗೆ ಉದ್ಘಾಟಿಸುತ್ತಿರುವ ಕೃಷಿ ಅಧೀಕಾರಿಗಳಾದ ಮಹಾದೇವ ಪಟಗುಂದಿ ಆನಂದ ಹೊಳೆನ್ನವರ ಮತ್ತು ಒಕ್ಕೂಟದ ಸದಸ್ಯೆಯರು,