ರಾಮದುರ್ಗ :ತಾಲೂಕಿನ ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಸುರೇಬಾನ ಪೊಲೀಸ್ ಠಾಣೆ ಸಹಯೋಗದಲ್ಲಿ ಡ್ರಗ್ಸ್ ವ್ಯಸನ ಮುಕ್ತ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.ಈ ವೇಳೆ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು, ಮುಕ್ತಿ ಹಾಗೂ ಪರಿಹಾರಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸುರೇಬಾನ ಪೊಲೀಸ್ ಠಾಣೆ ಪಿ ಎಸ್ ಆಯ್ ಗುರುರಾಜ ಕಲಬುರ್ಗಿ ಅವರು ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡಿ ಡ್ರಗ್ಸ್ ವ್ಯಸನ ದುಷ್ಪರಿಣಾಮಗಳು ಹಾಗೂ ಅದರಿಂದ ದೂರವಿರುವುದು ಹೇಗೆ ಎಂಬುದರ ಕುರಿತು ವಿವರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದದ್ದ ಕಾಲೇಜಿನ ಪ್ರಾಚಾರ್ಯರಾದ ನಾಗರಾಜ ಹಕ್ಕೇರ ಅವರು ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಒದಗಿದ ಮೇಲೆ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಬಿಡಿಸಿಕೊಳ್ಳಲು ಹೆಣಗುವದಕ್ಕಿಂತ ಮೊದಲೇ ಪೂರ್ವ ಜಾಗೃತಿಯನ್ನು ಹೊಂದುವುದು ಮುಖ್ಯವೆಂದು ಎಚ್ಚರಿಕೆ ಮಾತುಗಳನ್ನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ರಾಣಿ ಗಂಜಿ ಪ್ರಥಮ ಸ್ಥಾನ, ಅಮೃತಾ ಡಿ ದ್ವಿತೀಯ ಸ್ಥಾನ ಹಾಗೂ ಸಹನಾ ಭಜಂತ್ರಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ಪಿ ಎಸ್ ಆಯ್ ಗುರುರಾಜ ಕಲಬುರ್ಗಿ, ಎ ಎಸ್ ಆಯ್ ಎಲ್ ಟಿ ಪವಾರ್, ಶಂಕರ ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಅಶ್ವಿನಿ ಟಿ ಜಿ, ಡಾ. ಪ್ರವೀಣಕುಮಾರ ಕೋಟಿ, ಪ್ರಕಾಶ ವಡ್ಡರ, ಎಸ್ ಬಿ ಪಾಟೀಲ, ಸಾವಿತ್ರಿ ಪಾಟೀಲ, ಬೋಧಕೇತರ ಸಿಬ್ಬಂದಿ ಮಹಾಲಕ್ಷ್ಮೀ ಮುನವಳ್ಳಿಮಠ ಉಪಸ್ಥಿತರಿದ್ದರು. ರಮೇಶ ಬಡಿಗೇರ ನಿರೂಪಿಸಿದರು, ಬಸವರಾಜ ಕರಿಗಾರ ವಂದಿಸಿದರು.
