ನೇಸರಗಿ. ಕ್ಷೇತ್ರದಲ್ಲಿ ಇರುವ ಹಳ್ಳಿಗಳ ಹಳ್ಳಗಳಿಗೆ ಬ್ಯಾರೇಜ್ ನಿರ್ಮಾಣ ಮಾಡುವದರಿಂದ ಹೊಲ ಗದ್ದೆಗಳಿಗೆ, ಕುಡಿಯುವ ನೀರಿನ ಅಂತರ್ಜಲ ಹೆಚ್ಚಳ ಆಗುತ್ತದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಬುಧವಾರದಂದು ಗ್ರಾಮದ ಸುತಗಟ್ಟಿ ರಸ್ತೆಯ ಕರೆಮ್ಮ ದೇವಸ್ಥಾನದ ಬಳಿ ಇರುವ ಹಳ್ಳಕ್ಕೆ ರೂ. 1 ಕೋಟಿ 60 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ನೇಸರಗಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯಿಂದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪ್ರಸಕ್ತ ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿ ಇದ್ದು ರೈತರು ಕಡಿಮೆ ನೀರು ಬಳಕೆ ಆಗುವ ಬೆಳಗಳನ್ನು ಬೆಳೆಯಿರಿ ಎಂದರು.
ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ ಶಾಸಕ ಬಾಬಾಸಾಹೇಬ ಅವರು ಕಳೆದ 20 ವರ್ಷಗಳಿಂದ ಯಾರೋ ಮಾಡದ ಕೆಲಸಗಳನ್ನು ತಂದು ಜನರ ಸೇವೆ ಮಾಡಿ ಮಾದರಿ ಶಾಸಕರಾಗಿದ್ದಾರೆ ಎಂದರು.
ಮಾಜಿ ಎ ಪಿ ಎಮ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ ಮಾತನಾಡಿ ನೇರ ನಡೆ ನುಡಿಯ ದನಿ ಅವರ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದು 2028 ಕ್ಕೆ 2 ನೇ ಬಾರಿಗೆ ಶಾಸಕರಾಗಿ ರಾಜ್ಯದ ಸಚಿವರಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಸಣ್ಣ ನೀರಾವರಿ ಇಲಾಖೆಯ ಶಾಖಾಧಿಕಾರಿ ಎಂ ಆರ್ ಪಾಟೀಲ,ಶಿವಾನಂದ ಕುಂಕುರ, ಚನಗೌಡ ಪಾಟೀಲ, ನಿಂಗಪ್ಪ ತಳವಾರ, ಪುಟ್ಟಪ್ಪ ಕೂಲಿನವರ, ಸುರೇಶ ಅಗಸಿಮನಿ, ಬಸವರಾಜ ಚಿಕ್ಕನಗೌಡ್ರ,ವೀರೇಶ ಉಳವಿ, ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ, ಶಿವಾನಂದ ಅಂಗಡಿ, ಗುತ್ತಿಗೆದಾರ ಶಿವಾನಂದ ಪೂಜೇರಿ, ಮುಗುಟಸಾಬ್ ಮನಿಯಾರ, ದುಂಡಪ್ಪ ಮೆಣಸಿಕಾಯಿ, ಸುಜಾತ ಪಾಟೀಲ, ಶಿವನಪ್ಪ ಮಾದೇನ್ನವರ, ಜಗದೀಶ ಕೊಟ್ರಮಠ, ಬಾಳಪ್ಪ ಕುಂಟಗಿ ಸೇರಿದಂತೆ ನೇಸರಗಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
