LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಶ್ರೀ ಖಾಸ್ಗತ ರಥದ ಕಳಸ ಇಳಿಸುವ ಕಾರ್ಯಕ್ರಮ

ತಾಳಿಕೋಟೆ, ಪಟ್ಟಣದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ನಿಮಿತ್ಯ ಜರುಗಿದ ಮಹಾ ರಥೋತ್ಸವದ ಕಳಸ ಇಳಿಸುವ ಕಾರ್ಯಕ್ರಮವು ಬುಧವಾರರಂದು ಗುರು ಪೂರ್ಣಿಮೆ ದಿನದಂದು ಸಾಯಂಕಾಲ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಸಮ್ಮುಖದಲ್ಲಿ ಭಕ್ತಿಭಾವದಿಂದ ಸಖಲ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಕಳಸ ಇಳಿಸುವ ಕಾರ್ಯಕ್ರಮದ ನಂತರ ಶ್ರೀ ಖಾಸ್ಗತೇಶ್ವರ ಕತೃ ಗದ್ದುಗೆಗೆ ಆಗಮಿಸಿದ ಭಕ್ತ ಸಮೂಹ ಮಹಾ ಪೂಜೆ ಸಲ್ಲಿಸಿದರಲ್ಲದೇ ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಪಟ್ಟಣದ ಶ್ರೀ ಮಂತ ಮನೆತನದ ಸಜ್ಜನ ಪರಪ್ಪನವರ ಮನೆಯಿಂದ ತಂದ ಆರತಿಯನ್ನು ಪುನಃ ಅವರ ಮನೆಗೆ ಮುಟ್ಟಿಸಿ ಜಾತ್ರೋತ್ಸವ ಕಾರ್ಯಕ್ರಮವನ್ನು ಮಂಗಲಗೊಳಿಸಲಾಯಿತು.
ಜೂಲೈ ೧೯ ರಿಂದ ಪ್ರಾರಂಭಗೊಂಡಿದ್ದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವವನ್ನು ರಥದ ಕಳಸ ಇಳಿಸುವ ಮೂಲಕ ಮಂಗಲಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಉಸ್ತುವಾರಿ ವೇ|| ಮುರುಘೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗುರಲಿಂಗಪ್ಪ ಸಜ್ಜನ, ರಮೇಶ ಸಾಲಂಕಿ, ಮಲ್ಲು ಗೋಗಿ, ಸುರೇಶ ಪುಲಸ್, ಸಂತೋಷ ಘಾವಡೆ, ಅವರನ್ನೊಳಗೊಂಡು ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್