ಗುರ್ಲಾಪೂರ ೨೯ : ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಇಂದಿಗೂ ಎಂದೆಂದಿಗೂ ಶ್ರೀಮಂತವಾಗಿರುತ್ತದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಜುಲೈ ೨೮ ರಂದು ಗುರ್ಲಾಪುರ ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಶ್ರೀ ಇಟ್ಟಪ್ಪದೇವರ ಅಭಿವೃದ್ಧಿ ಸೇವಾ ಸಮಿತಿ ಹಳ್ಳೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಕಲಾ ಮೇಳ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಭಾಗದಲ್ಲಿ ಎಲೆ ಮರಿ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಗೌರವಿಸುವ ಸಿದ್ದಣ್ಣ ದುರದುಂಡಿ ಅವರ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳುತ್ತಾ ಇಂತಹ ಕಾರ್ಯಕ್ಕೆ ನಮ್ಮ ಜಾರಕಿಹೊಳಿ ಕುಟುಂಬ ಪ್ರೋತ್ಸಾಹ ಸದಾ ಇರುತ್ತದೆ ಎಂದು ಹೇಳಿದರು.
ಗುರ್ಲಾಪುರ ಪಿಕೆಪಿಎಸ್ ಅಧ್ಯಕ್ಷ ಎಸ್ ಜಿ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನಪದ ಸಂಸ್ಕೃತಿಯನ್ನು ಉಳಿಸಲು ಪ್ರತಿಯೊಬ್ಬ ಯುವಕರು ನಿಸ್ವಾರ್ಥ ಸೇವೆಯೊಂದಿಗೆ ಕಾರ್ಯ ಮಾಡಬೇಕೆಂದು ಎಲ್ಲಾ ಯುವಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಬಿ ಸಿ ಮುಗಳಖೋಡ ಮಾತನಾಡಿ ನಶಿಸಿ ಹೋಗುತ್ತಿರುವ ಜನಪದ ಸಾಂಸ್ಕೃತಿಕ ಕಲಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಡೊಳ್ಳಿನ ಪದಗಳು ಮುಕ್ಕಟವಾಗಿವೆ ಕಲೆ ಜೀವಂತವಾಗಿರಲು ಕಲಾವಿದರನ್ನು ಗುರುತಿಸುವಲ್ಲಿ ಅಪರೂಪದ ಸಂಘಟನೆಯ ಸರದಾರ ಸಿದ್ದಣ್ಣ ದುರದುಂಡಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳು ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದಂಡಿ ಮಾತನಾಡಿ ಜನಪದ ಸಾಂಸ್ಕೃತಿಕ ಮೂಲ ಕಲೆಗಳು ಉಳಿದು ಬೆಳೆಯಬೇಕಾದರೆ ಪ್ರತಿಯೊಬ್ಬರು ಸಹಕಾರ ಮುಖ್ಯವಾಗಿರುತ್ತದೆ. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ನಮ್ಮ ಭಾಗದ ಜನಪ್ರಿಯ ಶಾಸಕರು ಹಾಗೂ ಬೆಮುಲ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಮತ್ತು ಊರಿನ ಹಿರಿಯರ ಸಹಕಾರದಿಂದ ಈ ಕಾರ್ಯಕ್ರಮವನ್ನು ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿವರುದ್ರಯ್ಯಾ ಹಿರೇಮಠ, ಶಿವಾನಂದ ಹಿರೇಮಠ, ಹಿರಿಯರಾದ ಎಮ್ ಎಮ್ ಮುಗಳಖೋಡ, ಯುವ ಮುಖಂಡರಾದ ಸಿದ್ದು ಗಡ್ಡೆಕಾರ, ಮಹಾದೇವ ಮುಕುಂದ, ಆನಂದ ಸುಳ್ಳನ್ನವರ, ಟಿ ಡಿ ಗಾಣಿಗೇರ, ಪ್ರಕಾಶ ಸುಳ್ಳನ್ನವರ, ಹಾಲಪ್ಪ ಗಡ್ಡೆಕಾರ, ಗೋಪಾಲ ಗಡ್ಡೆಕರ, ಮಲ್ಲು ಸುಳಣ್ಣವರ, ಲಕ್ಷ್ಮಣ ಗೌರಾಣಿ, ರಾಜು ಕುಲಗೋಡ, ಸದಾಶಿವ ನೇಮಗೌಡರ, ನಾಗಪ್ಪಾ ಹಳ್ಳೂರ, ವೀರಭದ್ರ ನೇರ್ಲಿ, ಹಾಗೂ ಗ್ರಾಮದ ಗುರು ಹಿರಿಯರು, ಪ್ರಮುಖರು, ಯುವ ಮುಖಂಡರು ಉಪಸ್ಥಿತರಿದ್ದರು.
ಮಾಯಕ್ಕ ದುರದುಂಡಿ ನಿರೂಪಿಸಿದರು, ಬಸವರಾಜ ಸಸಾಲಟ್ಟಿ ಸರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಗದಗ ಜಿಲ್ಲೆಯ ಕೊನ್ನೂರ ಜನಪದ ಕಲಾ ತಂಡ, ಡೊಳ್ಳಿನ ಪದ ಹಳ್ಳೂರ ಸತ್ಯಪ್ಪ ಮಹಾರಾಜರು, ಗೀಗಿ ಪದ ಮತ್ತು ಶಾವರ್ಕಿ ಪೂರ್ಣಿಮಾ ಮಹಾದೇವಿ ದೇವರವರು, ಡೊಳ್ಳು ಕುಣಿತ ಶ್ರೀ ಮಹಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ ಹಳ್ಳೂರ, ಸಿದ್ದಿ ಕುಣಿತ ಚುಟುಕುಸಾಬ್ ಜಾತಿಗಾರ ಮಂಟೂರ, ಸಮೂಹ ಗೀತೆ ನಾಗಯ್ಯ ಹಿರೇಮಠ, ಭಜನಾ ಪದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಗುರ್ಲಾಪುರ್, ಜನಪದ ನೃತ್ಯ ಭಗೀರಥ ಯುವತಿ ಮಂಡಲ, ಏಕಪಾತ್ರಭಿನಯ ಚಂದು ಅರಳಿಕಟ್ಟಿ ರಾಮದುರ್ಗ, ಜನಪದ & ಡೊಳ್ಳಿನ ಪದ ಅಕ್ಷತಾ ಮುತ್ತೂರು ಜಮಖಂಡಿ, ಶೋಭಾನ್ ಪದ ಶ್ರೀ ಸೀಮೆ ದೇವಿ ಸೋಬಾನ ಪದ ಮಹಿಳಾ ತಂಡ ಹಳ್ಳೂರ, ಜನಪದ ಗೀತೆಗಳು ಐಶ್ವರ್ಯ ತಳವಾರ, ಕಿರು ನಾಟಕ ಮಂಜುನಾಥ್ ಕಲಾ ತಂಡ ಗೋಕಾಕ ಹಾಗೂ ಹಲವಾರು ಕಲಾತಂಡ ಪ್ರೇಕ್ಷಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಪದ ಕಲಾವಿದರಿಗೆ ಜಾನಪದ ಕಲರತ್ನ ಪ್ರಶಸ್ತಿ ಪ್ರಧಾನ ಮಾಡಿದರು.
