ಮೂಡಲಗಿ : ಪಟ್ಟಣದ ಪ್ರತಿಷ್ಠಿತ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ, 2025-26ನೇ ಹಣಕಾಸಿನ ವರ್ಷದ ಕೊನೆಯಲ್ಲಿ 5.35 ಕೋಟಿ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ.ಭೀ.ಢವಳೇಶ್ವರ ತಿಳಿಸಿದರು.
ಸೋಮವಾರದಂದು ಪಟ್ಟಣದಲ್ಲಿರುವ ಸಂಘದ ಸಭಾ ಭವನದಲ್ಲಿ ಜರುಗಿದ 31ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಸೊಸಾಯಿಟಿಯು 6.90 ಕೋಟಿ ರೂ. ಶೇರು ಬಂಡವಾಳ, 27.21 ಕೋಟಿ ರೂ. ಕಾಯ್ದಿರಿಸಿದ ನಿಧಿಗಳು, 274.36 ಕೋಟಿ ರೂ. ಠೇವಣಿ ಹಾಗೂ 81.34 ಕೋಟಿ ರೂ. ಗುಂತಾವಣೆ ಹೊಂದಿದ್ದು, 208.34 ಕೋಟಿ ರೂ. ಸಾಲ ವಿತರಿಸಿ, 321.67 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಗೋಕಾಕ್ ಅರ್ಬನ್ ಬ್ಯಾಂಕಿನ ಪ್ರ.ವ್ಯವಸ್ಥಾಪಕರಾದ ಎಸ್.ಎಸ್.ಪಾಟೀಲರವರು ಮಾತನಾಡುತ್ತ ಶಿಸ್ತು ಬದ್ಧ ಆರ್ಥಿಕ ವ್ಯವಸ್ಥೆ, ಸದಸ್ಯರ ವಿಶ್ವಾಸ, ಸಾಲವನ್ನು ಸರಿಯಾದ ವ್ಯಕ್ತಿಗೆ, ಸರಿಯಾದ ಉದ್ಧೇಶಕ್ಕೆ, ಸರಿಯಾದ ಪ್ರಮಾಣದಲ್ಲಿ ಕೊಡಮಾಡಿದರೆ ಸರಿಯಾದ ಸಮಯದಲ್ಲಿ ಮರುಪಾವತಿಯಾಗಿ ಸಂಘದ ಪ್ರಗತಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರವೀಂದ್ರ ಭಾಗೋಜಿ, ಅತಿಥಿಗಳಾಗಿ ಎಸ್.ಜಿ.ಢವಳೇಶ್ವರ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅಶೋಕ್ ಗಾಣಿಗೇರ್, ಮಲ್ಲಪ್ಪ ಗುಡನ್ನವರ, ಮೋಹನ ಹಾದಿಮನಿ, ಪ್ರಕಾಶ ಹೊಸೂರ ಸೇರಿದಂತೆ ವಿವಿಧ ಶಾಖೆಗಳ ಅಧ್ಯಕ್ಷರು, ಸರ್ವ ನಿರ್ದೇಶಕರು, ಗ್ರಾಹಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರ.ವ್ಯವಸ್ಥಾಪಕರಾದ ಬಸವರಾಜ ಬಡಿಗೇರ ನಿರೂಪಿಸಿದರು, ಮಹಾದೇವ ಶೀಳನವರ ಸ್ವಾಗತಿಸಿ, ಶಿವಾನಂದ ಮರಾಠೆ ವಂದಿಸಿದರು.