ಮೂಡಲಗಿ: ನಶಾ ಮುಕ್ತ ಭಾರತ ಮಾಡಲು ಪ್ರತಿಯೊಬ್ಬ ಯುವಕರು ಆರೋಗ್ಯಯುತ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಮೂಡಲಗಿ ಪಟ್ಟಣದ ಶ್ರೀ ಶ್ರೀಪಾದಭೋದ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ಮೈ ಭಾರತ್ ಕೇಂದ್ರ ಬೆಳಗಾವಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಹಾಗೂ ಶ್ರೀಪಾದಭೋದ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿ ಏನ್ ಎಸ್ ಎಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ನಶಾ ಮುಕ್ತ ವಿಕಸಿತ ಭಾರತ ಕಾರ್ಯಕ್ರಮದ ವಿವಿಧ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ ಗುಟ್ಕಾ ಮಟಕಾದಂತ ಚಟಗಳಿಂದ ದೂರ ಇರಬೇಕು ಎಂದು ಯುವಕರಿಗೆ ಕರೆ ನೀಡಿದರು.
ಬೆಳಗಾವಿ ಮೈ ಭಾರತ ಕೇಂದ್ರದ ಬೆಳಗಾವಿ ಜಿಲ್ಲಾ ಯುವ ಅಧಿಕಾರಿ ಸಂಗ್ರಾಮ ಸಾವಂತ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರದ ಮೂಲಕ ದೇಶದ ಯುವಜನರಿಗೆ ಹಲವಾರು ಯೋಜನೆಗಳು, ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ನಮ್ಮ ಭಾಗದ ಯುವ ಜನತೆ ಯುವಕ ಸಂಘಗಳ ಮೂಲಕ ನಿರಂತರ ಕಾರ್ಯ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ನಮ್ಮ ಗ್ರಾಮೀಣ ಭಾಗದ ಯುವಕರು ಶ್ರದ್ದೆ ಭಕ್ತಿ ತಾಳ್ಮೆ ನಿಸ್ವಾರ್ಥದಿಂದ ಕಾರ್ಯ ಮಾಡಿದರೆ ನಮ್ಮ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳಿದರು.
ಮೂಡಲಗಿಯ ಹಿರಿಯ ಸಾಹಿತಿಗಳಾದ ಬಾಲಶೇಖರ ಬಂದಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಹೇಶ ಕಂಬಾರ ಮಾತನಾಡಿ ಕಾಲೇಜಿನಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮಾಡಿದ ಬೆಳಗಾವಿ ಮೈ ಭಾರತ್ ಕೇಂದ್ರಕ್ಕೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಚೇತನರಾಜ ಬಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಆರ್ ಐ ಆಸಂಗಿ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಸ ಗೊಡ್ಯಾಗೋಳ, ಗೋಪಾಲ ಗಡ್ಡೆಕಾರ, ಅಬ್ದುಲ್ ಮಿರ್ಜಾನಾಯಕ, ಮಲ್ಲಯ್ಯ ಕರಡಿ, ಆದರ್ಶ್ ಪೂಜೇರಿ, ಸರಸ್ವತಿ ರಬಕವಿ, ಸುಜಾತಾ ಪುಡ್ಲಕಟ್ಟಿ, ಮಲ್ಲಿಕಾರ್ಜುನ ಸಜ್ಜನವರ, ಸುರೇಶಬಾಬು ಮೋಹನಕುಮಾರ್, ಮಧುಸೂದನ, ಶಿವಾನಂದ ಹಿರೇಮಠ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶಿವಕುಮಾರ್ ನಿರೂಪಿಸಿ ವಂದಿಸಿದರು.