ಕೊಪ್ಪಳ : ಪದ್ಮಭೂಷಣ ನಾಡಿನ ಖ್ಯಾತ ಸಾಹಿತಿಯಾಗಿದ್ದ ಡಾ.ಎಸ್.ಎಲ್.ಬೈರಪ್ಪ ಅವರ ಪ್ರಥಮ ಪುಣ್ಯಸ್ಮರಣೆಯನ್ನು ಸೆ.೩ ರಂದು ನಗರದ ಗಂಜ್ ವೃತ್ತದ ಹತ್ತಿರವಿರುವ ಸೌಭಾಗ್ಯಲಕ್ಷಿö್ಮÃ ವಿವಿದೋದ್ದೇಶ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೈರಪ್ಪ ಅವರ ಸಾಹಿತ್ಯ ಕುರಿತು ಹಲವು ಚಿಂತನ, ಮಂಥನ ನಡೆಯಲಿದೆ. ಮತ್ತು ‘ಬೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ’ ಕುರಿತು ಅಂಕಣ ಲೇಖನಕ್ಕೆ ಬರಹಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗಿಣಿಗೇರಿಯ ಆನೆಗೊಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಅಭಿನವ ಶ್ರೀಕಂಠಸ್ವಾಮಿಗಳು ತಿಳಿಸಿದ್ದಾರೆ.
ಶನಿವಾರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿ ಅವರು ಮಾತನಾಡಿದರು. ಈ ನಾಡು ಕಂಡ ಅತ್ಯಂತ ಮೇಧಾವಿ ಹಾಗೂ ಸನಾತನ ಸಂಸ್ಕೃತಿಯನ್ನು ಜನಮನಕ್ಕೆ ತಲುಪಿಸುವಲ್ಲಿ ಮತ್ತು ಸಾಹಿತ್ಯದ ಅಭಿರುಚಿಯನ್ನು ತೊರಿಸಿಕೊಟ್ಟವರು ಎಸ್.ಎಲ್.ಬೈರಪ್ಪ ಅವರು. ಎಸ್.ಎಲ್.ಬೈರಪ್ಪ ಅವರ ಪ್ರತಿಷ್ಟಾನದಿಂದ ಪ್ರತಿವರ್ಷ ಸಾಹಿತ್ಯಕ್ಕೆ ಸಂಬAಧಿಸಿದ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನ ಬೈರಪ್ಪ ಪ್ರತಿಷ್ಟಾನ ಮತ್ತು ಆನೆಗೊಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಸಹಯೋಗದಲ್ಲಿ ಸೆ.೩ ರಂದು ಪ್ರಥಮ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ. ಬೈರಪ್ಪನವರ ಆತ್ಮ ಕಥನ ‘ಭಿತ್ತಿ’ ಕುರಿತು ಹಾಸ್ಯ ಸಾಹಿತಿ ಬಿ.ಪ್ರಾಣೇಶ ಮಾತನಾಡಲಿದ್ದಾರೆ. ಗವಿಸಿದ್ದೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಗಿಣಿಗೇರಿ ಹೋಬಳಿಯ ಕಸಾಪ ಅಧ್ಯಕ್ಷ ಶಂಕರಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಎಸ್.ಎಲ್.ಬೈರಪ್ಪ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳು, ಬರಹಗಾರರು, ಸಾಹಿತಿಗಳಿಗೆ ‘ಬೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ’ ಕುರಿತು ಲೇಖನ ಬರೆಯುವ ಅವಕಾಶ ನೀಡಲಾಗಿದೆ. ಆಸಕ್ತರು ಎರಡು ಸಾವಿರ ಶಬ್ಧದೊಳಗೆ ನುಡಿ ತಂತ್ರಾAಶದಲ್ಲಿ ಲೇಖನ ಬರೆದು ಕಳಿಸಬೇಕು. ಉತ್ತಮ ಲೇಖನಕ್ಕೆ ಕಾರ್ಯಕ್ರಮದಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಲೇಖನ ಕಳಿಸಲು ೯೭೪೨೫೮೩೯೨೯ ಈ ಮೋಬೈಲ್ ನಂಬರ್‌ಗೆ ಕಳುಹಿಸಬೇಕು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ, ಸೋಮಶೇಖರಪ್ಪ ಬೆಣ್ಣಿ ಇದ್ದರು.