ನೇಸರಗಿ.ಈ ಭಾಗದ ಸಾರ್ವಜನಿಕರ ತಮ್ಮ ಕೆಲಸಗಳಾದ ಹಿರಿಯರ ಪಿಂಚಣಿ, ಮಹಿಳೆಯರ ಸೌಲಭ್ಯ, ಅಂಗವಿಕಲರ, ರೈತರ, ವಿದ್ಯುತ್, ರಸ್ತೆ, ಮೂಲಸೌಕರ್ಯ,ಅನೇಕ ಸಾರ್ವಜನಿಕ ಸೌಕರ್ಯಗಳಿಗೆ ಪ್ರಜಾಸೇವೆ ಆಂದೋಲನ ಮನೆ ಬಾಗಿಲಿಗೆ ದೊರೆಯುವ, ಅಧಿಕಾರಿಗಳ ಮೂಲಕ ನಡೆಸುವ ಯೋಜನೆ ಆಗಿದ್ದು ಇದರ ಪ್ರಯೋಜನ ಸಾರ್ವಜನಿಕರು ಪಡೆಯಿರಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ
ಪಾಟೀಲ ಹೇಳಿದರು.
ಅವರು ಶನಿವಾರದಂದು ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ಆಯೋಜನೆ ಮಾಡಲಾಗಿದ್ದ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪ್ರಜಾಸೇವೆ ಆಂದೋಲನ ಉದ್ಘಾಟನೆ ನೆರವೇರಿಸಿ ಮಾತನಾಡಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಆಂದೋಲನ ಮಹತ್ವದ ಹೆಜ್ಜೆಯಾಗಿದೆ ಎಂದು ಬಾಬಾಸಾಹೇಬ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ತಹಶಿಲ್ದಾರರಾದ ಸದಾಶಿವ ಮಕ್ಕೋಜಿ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಜುಣ್ಣೂರ,ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಸಿ ಪಿ ಐ ಗಜಾನನ ನಾಯ್ಕ,ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ,ಯಮನಪ್ಪ ಪೂಜೇರಿ ಸೇರಿದಂತೆ ಮುಖಂಡರು, ಕಂದಾಯ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಹೆಸ್ಕಾಂ, ಪಂಚಾಯತ, ಸಾರಿಗೆ, ಅರೋಗ್ಯ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಜನರ ಸಮಸ್ಯೆಗೆ ಸ್ಥಳದಲ್ಲಿ ಸ್ಪಂದಿಸಿ ಪರಿಹಾರ ಒದಗಿಸಿದರು, ಮತ್ತು ಕೆಲವು ಸಮಸ್ಯೆಗಳಿಗೆ ಸಮಯ ಕೇಳಿದರು. ಈ ಪ್ರಜಾಸಭೆ ಆಂದೋಲನದಲ್ಲಿ ನೇಸರಗಿ ಭಾಗದ ಅನೇಕ ಜನ ರೈತ ಸಮಸ್ಯ, ಪೆನ್ಷನ್, ವಿದ್ಯುತ್, ರಸ್ತೆ, ವೃದ್ದಾಪ್ಯ ವೇತನ ಇನ್ನೂ ಅನೇಕ ಸಮಸ್ಯೆಗಳ ಕುರಿತು ಶಾಸಕರ ಹಾಗೂ ತಾಲೂಕಿನ, ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಜಾಸೇವೆ ಆಂದೋಲನ ಯಶಸ್ವಿಯಾಯಿತು.