ಸಂಕೇಶ್ವರ: ಶ್ರೀ ಏಕದಂತ ಯುವಕ ಮಂಡಳ ಕುಂಬಾರ ಓಣಿ, ನಿಡಸೋಸಿ
ಹೆಗ್ಗಾಯಿ ಇವರ ಸ್ಥಳದಲ್ಲಿ ಗಣೇಶ್ ಮಂಟಪದ ಪೂಜೆ ಸಲ್ಲಿಸಲಾಯಿತು. ಹನ್ನೊಂದು ದಿನಗಳ ಕಾಲ ಸತತ ಪೂಜಾ ಹಾಗೂ ಮಂಗಳಾರತಿಯನ್ನು ಕುಂಬಾರ, ಬಾಡ, ಕೋಳಿ ಸೂರ್ಯವಂಶಿ , ಶಿಂದೆ ಬೋಸಲೆ ವಾಜಂತ್ರಿ , ಪದ್ಮನವರ, ಮಡಿವಾಳ, ಮದಿಹಳ್ಳಿ, ಬಡಿಗೇರ, ಚವ್ಹಾಣ ಬಂಧುಗಳಿಂದ ನೆರೆವರಿಸಲಾಯಿತು.
ನಂತರ ವರದ ಶಂಕರ ಪೂಜೆ ಹಾಗೂ ಮಹಾಪ್ರಸಾದವನ್ನು ಗುದಗಿ ಬಂಧುಗಳು ನೆರವೇರಿಸಿ ಕೊಟ್ಟರು. ಹಾಗೂ ಕೊನೆಯ ದಿನವನ್ನು ವಿಶೇಷ ಪೂಜೆ ಸಲ್ಲಿಸಿ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರೆವರಿಸಲಾಯಿತು. ಇದೇ ಸಮಯದಲ್ಲಿ ಮುಸ್ಲಿಂ ಬಾಂಧವರಿಂದ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಹಿಂದೂ- ಮುಸ್ಲಿಂ ಎಂಬ ಬೇದ ಭಾವವಿಲ್ಲದೆ ಎಲ್ಲರೂ ಒಂದಾಗಿ ಗಣೇಶನ ಪೂಜೆಯನ್ನು ನೆರವೇರಿಸಿದರು. ಹಾಗೂ ಕೇಸ್ತಿ ಗ್ರಾಮದ ಹಾಲುಮತದ ಸಮಾಜದಿಂದ ಡೊಳ್ಳಿನ ಪದಗಳು, ಭರತನಾಟ್ಯ ನೃತ್ಯ ಹಾಗೂ ಮುಂತಾದ ಮನೋರಂಜನೆ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟರು.