LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ರೈತರ ಸಾಲ ಮನ್ನಾಮಾಡಿ  ಎಕರೆಗೆ 30 ಸಾವಿರ ಪರಿಹಾರ ನೀಡಿ ;  ಮೀನಳ್ಳಿ ತಾಯಣ್ಣ ಒತ್ತಾಯ

 
ಬಳ್ಳಾರಿ. ಸೆ. 26 : ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರಾಜ್ಯದಲ್ಲಿ  ಬರ ಆವರಿಸಿದೆ, ಜನ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು  ಸಂಕಷ್ಟಕ್ಕೆ ಸಿಲುಕಿದ್ದಾರೆ  ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದರೆ ಸಾಲದು, ಬರ ಕಾಮಗಾರಿಗಳನ್ನು ಪ್ರಾರಂಭೀಸಬೇಕು ಬೆಳೆ ನಷ್ಟ ಹೊಂದಿದ  ರೈತರಿಗೆ ಪ್ರತಿ ಎಕರೆಗೆ 30 ಸಾವಿರ ಪರಿಹಾರ ನೀಡಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾಮಾಡಬೇಕು. ಸರ್ಕಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ಎಕರೆಗೆ 2500 ಪರಿಹಾರ ಘೋಷಣೆ ಮಾಡಿದೆ, ಸಿ. ಎಂ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ, ಸರ್ಕಾರ ನಿರ್ಲಕ್ಷ ವಹಿಸಿದರೆ ರಾಜ್ಯಾಧ್ಯoತ ಜೆಡಿಎಸ್ ವತಿಯಿಂದ  ಪ್ರತಿಭಟನೆಯ ನಡೆಸಲಾಗುವುದು ಎಂದು ಜಾತ್ಯತೀತ ಜನತಾದಳದ ಬಳ್ಳಾರಿ ಜಿಲ್ಲಾಧ್ಯಕ್ಷ ಮಿನಳ್ಳಿ ತಾಯಣ್ಣ ಎಚ್ಚರಿಸಿದರು. 
 ಈ ವಿಷಯದ ಕುರಿತು ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಇಂದು ಪ್ರತಿಭಟನೆಯನ್ನು ನಡೆಸಿ ಮಾತನಾಡಿದ ಅವರು, ಬರಪೀಡಿತ ಪ್ರದೇಶದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ರೈತರಿಗೆ ಪ್ರತಿ ಎಕರೆಗೆ 30 ಸಾವಿರ ಪರಿಹಾರ ನೀಡಬೇಕು, ಗ್ರಾಮೀಣ ಭಾಗದ ಕೂಲಿಕಾರರಿಗೆ ಕೂಲಿ ಕೆಲಸ ಕಲ್ಪಿಸಬೇಕು, ಸಮರ್ಪಕ ಕುಡಿವ ನೀರಿನ ಸೌಲಭ್ಯ ಕಲ್ಪಿಬೇಕು, ಜಾನುವಾರುಗಳಿಗೆ ನೀರು ಹಾಗೂ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಅಗ್ರಹಿಸಿ ಜೆಡಿಎಸ್ ಜಿಲ್ಲಾ ಸಮೀತಿ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ, ನಗರದ ಜೆಡಿಎಸ್ ಜಿಲ್ಲಾ ಕಚೇರಿಯಿಂದ ರಾಯಲ್ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ  ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಮಫಲಕಗಳನ್ನು ಹಿಡಿದ ನೂರಾರು ಕಾರ್ಯಕರ್ತರು ಡಿಸಿ ಕಚೇರಿಗೆ ತೆರಳಿ  ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ  ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳವರ ಮೂಲಕ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿದರು. 
ಈ ಪ್ರತಿಭಟನೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೊನ್ನೂರು ಸ್ವಾಮಿ (ವಂಡ್ರಿ), ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಅದ್ದಿಗೇರಿ ರಾಮಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ವಸಂತಕುಮಾರ್, ಯುವ ಘಟಕ ಅಧ್ಯಕ್ಷ ಕಿರಣ್ ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾ, ಮಾಧ್ಯಮ ಸಂಚಾಲಕ ರವಿ ಕುಮಾರ್ ಮೀನಳ್ಳಿ, ಜಮೀಲಾ, ಮೇಘರಾಜ್, ರಾಜೂ ಹೊನ್ನಳ್ಳಿ, ಬಸವ ಅಹಂಬಾವಿ, ರುದ್ರಪ್ಪ, ಚಾಗನೂರು ನಾಗರಾಜ್, ರಾಮಾಂಜಿನಿ ಸೇರಿದಂತೆ ನೂರಾರು ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Self-care ಐಷಾರಾಮವಲ್ಲ : ಸುಮಂತ್ ಎಸ್. ಹಿರೇಮಠ ಪ್ರಜಾಸೇವೆ ಯೋಜನೆಯಿಂದ ಸ್ಥಳದಲ್ಲಿಯೇ ಪರಿಹಾರ ಪಡೆಯಿರಿ :ಬಾಬಾಸಾಹೇಬ ಪಾಟೀಲ ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು .ವಿಧಾನಸಭೆ ಸಭಾಧ್ಯಕ್ಷರಾದ ಜಿ.ಎಸ್.ಪಾಟೀಲಸೆ.೩ ಎಸ್.ಎಲ್.ಬೈರಪ್ಪನವರ ಪ್ರಥಮ ಪುಣ್ಯಸ್ಮರಣೆರೋಹಿತ್ ವಿದ್ಯಾರ್ಥಿ ಚೆಸ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆರೈತರ ಸಾಲ ಮನ್ನಾಮಾಡಿ  ಎಕರೆಗೆ 30 ಸಾವಿರ ಪರಿಹಾರ ನೀಡಿ ;  ಮೀನಳ್ಳಿ ತಾಯಣ್ಣ ಒತ್ತಾಯಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಶ್ರೀ ಗಣೇಶನ ಪೂಜೆಶಾರ್ಟ್ ಸರ್ಕ್ಯೂಟ್: ೧೫-೨೦ ಎಕರೆ ಕಬ್ಬು ಬೆಂಕಿಗಾಹುತಿಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳಿಗಾಗಿ ಸೆ. 29ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುತ್ತಿಗೆ: ಪತ್ರಿಕಾಗೋಷ್ಠಿಯಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ ಎಚ್ಚರಿಕೆಇಂಡಿ-ಚಡಚಣ ಭಾಗದ ರೈತರಿಗೆ ಸಂಜೀವಿನಿ: ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿ - ಶಾಸಕ ಯಶವಂತರಾಯಗೌಡ ಪಾಟೀಲ