ಅಥಣಿ : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮಹತ್ವದ ಜವಾಬ್ದಾರಿ ಹೊತ್ತು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಸ್ವಕ್ಷೇತ್ರ ಅಥಣಿಗೆ ಆಗಮಿಸಿದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡುವ ಮೂಲಕ ತಮ್ಮ ನಾಯಕನ ಮೇಲಿನ ಅಭಿಮಾನ ಹಾಗೂ ರಾಜಕೀಯ ಬೆಂಬಲವನ್ನು ಅನಾವರಣಗೊಳಿಸಿದರು.
ಅಥಣಿ ಪಟ್ಟಣಕ್ಕೆ ಶನಿವಾರ ಆಗಮಿಸಿದ ನೂತನ ಸಚಿವ ಲಕ್ಷ್ಮಣ ಸವದಿ ಅವರ ಆಗಮನದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣವೇ ಸಂಭ್ರಮದ ಅಲೆಯಲ್ಲಿ ತೇಲಿತು. ಪ್ರಮುಖ ರಸ್ತೆಗಳು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಕಿಕ್ಕಿರಿದು ಸೇರಿರುವದು ಕಂಡು ಬಂದಿತು. ಸಚಿವರನ್ನು ಬರಮಾಡಿಕೊಳ್ಳಲು ಕಾರ್ಯಕರ್ತರು ವಿಶೇಷ ಸಿದ್ಧತೆ ಮಾಡಿಕೊಂಡಿದ್ದು, ಆಪಲ್ ಹಾರ, ಬೃಹತ್ ಪುಷ್ಪಹಾರ ಹಾಗೂ ಹೂವಿನ ಸುರಿಮಳೆಯೊಂದಿಗೆ ಲಕ್ಷ್ಮಣ ಸವದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಭವ್ಯೆ ಮೇರವಣಿಗೆಯಲ್ಲಿ ಕುಡಚಿ ಶಾಸಕ ಮಹೇಶ ತಮ್ಮಣ್ಣವರ ಹಾಗೂ ಸಚಿವ ಸುಪತ್ರರಾದ ಚಿದಾನಂದ ಸವದಿ, ಸುಮಿತ್ ಸವದಿ ಅವರು ನೂತನ ಸಚಿವರಿಗೆ ಸಾಥ ನೀಡಿದರು.
ಈ ವೇಳೆ ನೂತನ ಸಚಿವ ಲಕ್ಷ್ಮಣ ಸವದಿ ಅವರು ಸುಪುತ್ರ ಕಾಂಗ್ರೇಸ್ ಮುಖಂಡ ಚಿದಾನಂದ ಸವದಿ ಮಾತನಾಡಿ ನಮ್ಮ ತಂದೆಯರಿಗೆ ಸಚಿವ ಸ್ಥಾನ ದೊರೆತಿರುವುದು ಅಥಣಿ ಕ್ಷೇತ್ರದ ಹೆಮ್ಮೆಯ ಸಂಗತಿ. ಕ್ಷೇತ್ರದ ಜನರ ಆಶಯಗಳಿಗೆ ಸ್ಪಂದಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅಥಣಿ ಕ್ಷೇತ್ರದ ಸಮಗ್ರ ಪ್ರಗತಿಗೆ ಹೊಸ ಅಧ್ಯಾಯ ಬರೆಯಲಿದೆ ಎಂದು ಹೇಳಿದರು
##ಪಟಾಕಿ ಸಿಡಿಸಿ ಸಂಭ್ರಮ: ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಿಜೆ ವಾದ್ಯದ ಸದ್ದಿಗೆ ಯುವ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರೆ, ಅಭಿಮಾನಿಗಳು ಲಕ್ಷ್ಮಣ ಸವದಿ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಹಲವೆಡೆ ಹೂಮಳೆ ಸುರಿಸಿ ಸಚಿವರನ್ನು ಅಭಿನಂದಿಸಲಾಯಿತು.
ಅಭಿವೃದ್ಧಿಗೆ ಹೊಸ ವೇಗದ ನಿರೀಕ್ಷೆ: ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ. ಸಾಮಾಜಿಕ, ಶೈಕ್ಷಣಿಕ, ನೀರಾವರಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿರುವ ಸವದಿ ಅವರು ಸಚಿವರಾಗಿ ಇನ್ನಷ್ಟು ವೇಗವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಪುರಸಭೆ ಅದ್ಯಕ್ಷ ದಿಲೀಪ ಲೋಣಾರೆ ಮಾತನಾಡಿ ನಮ್ಮ ಹೆಮ್ಮೆಯ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಸ್ವ ಕ್ಷೇತ್ರ ಅಥಣಿಗೆ ಆಗಮಿಸಿದ್ದಾರೆ. ಕ್ಷೇತ್ರದಲ್ಲಿ ಸಂತೋಷದ ಅಲೆ ಇದ್ದು ನಮ್ಮ ಬಹುದಿನಗಳ ಕನಸು ನನಸಾಗಿದೆ. ಈ ಹಿಂದೆ ಅವರು ಸಚಿವರಾಗಿ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಮುಂದೆ ಅವರಿಗೆ ಯಾವುದೇ ಖಾತೆ ನೀಡಿದರು ಅವರು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಅವರು ಸಚಿವರಾಗಿರುವುದರಿಂದ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ. ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ದತ್ತಾ ವಾಸ್ಟರ್. ಶಿವು ಗುಡ್ಡಾಪುರ್. ರಾಜು ಗುಡೊಡಗಿ. ಮಲ್ಲೇಶ ಹುದ್ದಾರ. ವಿನಾಯಕ ದೇಸಾಯಿ. ಶೇಖರ ಕನಕರೆಡ್ಡಿ. ಶರದ ಶಟ್ಟಿ. ವಿನೋದ ಶಟ್ಟಿ. ಪ್ರಶಾಂತ್ ಶಟ್ಟಿ. ವಿಶಾಲ ಸಗರಿ. ಆಸೀಫ್ ತಾಂಬೋಳಿ. ಸುಂದರ ಸೌದಾಗರ. ಮಲ್ಲು ಕುಲ್ಲೋಳ್ಳಿ. ಬಸು ತೇರದಾಳ. ಮುತ್ತು ಮೋಕಾಶಿ. ಸೇರಿದಂತೆ ಬೃಹತ್ ಪ್ರಮಾಣದ ಅಭಿಮಾನಿ ಬಳಗದವರು ಸೇರಿದ್ದರು.