LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bijapur

ಪರಿಣಾಮಕಾರಿ ಬೋಧನೆ ಮತ್ತು ತರಗತಿ ನಿರ್ವಹಣೆ: ಘನಮಠೇಶ್ವರ ಶಾಲೆಯ ಶಿಕ್ಷಕರಿಗೆ ಮಾರ್ಗದರ್ಶನ

ತಾಳಿಕೋಟೆಶಿಕ್ಷಕರ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಶಿಕ್ಷಕರ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

      ಈ ತರಬೇತಿ ಕಾರ್ಯಕ್ರಮವನ್ನು ತುಂಗಳ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಹವಾಲ್ದಾರ್ ಅವರು ಪರಿಣಾಮಕಾರಿ ಬೋಧನೆಯ ವಿವಿಧ ಅಂಶಗಳ ಕುರಿತು ಅವರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ವಿಶೇಷವಾಗಿ ವಿಷಯ ಕೌಶಲ್ಯ, ತರಗತಿ ನಿರ್ವಹಣೆ ಹಾಗೂ ಸಮಯ ನಿರ್ವಹಣೆ ಕುರಿತು ಅವರು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರಲ್ಲದೇ ಶಿಕ್ಷಕರು ಹೊಸ ಹಾಗೂ ಪರಿಣಾಮಕಾರಿ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪಾಠವನ್ನು ಹೆಚ್ಚು ಆಸಕ್ತಿದಾಯಕ ಹಾಗೂ ಸಂವಾದಾತ್ಮಕವಾಗಿಸಬೇಕು ಎಂದು ಅವರು ತಿಳಿಸಿದ ಅವರು ತರಗತಿಯಲ್ಲಿ ಶಿಸ್ತು ಕಾಪಾಡುವುದು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮತ್ತು ಬೋಧನಾ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರಲ್ಲದೇ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಅವರು ಒತ್ತಿ ಹೇಳಿದರು. 

     ಈ ತರಬೇತಿ ಕಾರ್ಯಕ್ರಮವು ಭಾಗವಹಿಸಿದ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ಹಾಗೂ ಪ್ರೇರಣೆಯಾಗಿ ಮಾರ್ಪಟ್ಟಿತು. ಇದೇ ಸಮಯದಲ್ಲಿ ಅತಿಥಿ ಕಾರ್ಯಾಗಾರದ ಮುಖ್ಯಸ್ಥ ಸುರೇಶ ಹವಾಲದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಈ ಸಮಯದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಎಮ್ ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಹಾಗೂ ನೂರಕ್ಕೂ ಅಧಿಕ ಸಂಸ್ಥೆಯ ಶಿಕ್ಷಕ ವೃಂದದವರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೂಳು–ಕಸದಿಂದ ಮುಚ್ಚಿದ ಎಎಲ್‌ಬಿಸಿ ಕಾಲುವೆ: ಚವನಭಾವಿ ರೈತರಿಗೆ ನೀರಿನ ಸಂಕಷ್ಟನೂತನ ಸಚಿವ ಲಕ್ಷ್ಮಣ ಸವದಿಗೆ ಸ್ವಕ್ಷೇತ್ರದಲ್ಲಿ ಅಭೂತಪೂರ್ವ ಸ್ವಾಗತಕುಂಟೋಜಿ ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ಸಮಿತಿ ರಚನೆತಂಪೆರೆದ ಆಶ್ಲೇಸಾ ಮಳೆ : ೧ ಗಂಟೆಕಾಲ ಸುರಿದ ರಬಸದ ಮಳೆಪರಿಣಾಮಕಾರಿ ಬೋಧನೆ ಮತ್ತು ತರಗತಿ ನಿರ್ವಹಣೆ: ಘನಮಠೇಶ್ವರ ಶಾಲೆಯ ಶಿಕ್ಷಕರಿಗೆ ಮಾರ್ಗದರ್ಶನಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಸುತ್ತ ರಾಜಕೀಯ ಸಮರ: ರಾಹುಲ್ ಗಾಂಧಿ-ಕಿರಣ್ ರಿಜಿಜು ನಡುವೆ ತೀವ್ರ ವಾಗ್ದಾಳಿಬಾಗಲಕೋಟೆಯಲ್ಲಿ ರಾಜಕೀಯ-ಧಾರ್ಮಿಕ ಸಮರ ತೀವ್ರ: ಸಚಿವ ವಿಜಯಾನಂದ ಕಾಶಪ್ಪನವರ್ ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ನಡುವೆ ವಾಕ್ಸಮರ ಉಗ್ರ ರೂಪಕ್ಕೆಎಸ್. ಆಯ್. ಆರ್. ಪಟ್ಟಿ 17 ರ ವರೆಗೆ ಮುಂದುಡಿಕೆ ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ.'ನಮ್ಮ ಮಗಳಿಗೆ ನ್ಯಾಯ ಕೊಡಿಸಿ’ - ಯುವತಿ ಸಾವಿಗೆ ಕಿರುಕುಳವೇ ಕಾರಣ: ಪೋಷಕರ ಆಕ್ರೋಶಬೆಳಗಾವಿ–ಗೋವಾ ಸೌಹಾರ್ಧತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್