LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

'ನಮ್ಮ ಮಗಳಿಗೆ ನ್ಯಾಯ ಕೊಡಿಸಿ’ - ಯುವತಿ ಸಾವಿಗೆ ಕಿರುಕುಳವೇ ಕಾರಣ: ಪೋಷಕರ ಆಕ್ರೋಶ

ಬಳ್ಳಾರಿ, ಆ.08: ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮಾನಸಿಕವಾಗಿ ನೊಂದಿದ್ದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಗರದ ಕೌಲಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 
ನಗರದ ಕೌಲಬಜಾರ್ ಜಾಗೃತಿನಗರದ ನಿವಾಸಿ ಜೀನತ್ ಉಲ್ ಫಿರ್ದೋಸ್ ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪೋಷಕರು ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮಗಳ ಸಾವಿಗೆ ಇಬ್ಬರು ಯುವಕರ ಕಿರುಕುಳವೇ ಕಾರಣ ಎಂದು ಆರೋಪಿಸಿ ಸಮಗ್ರ ತನಿಖೆಗೆ ಆಗ್ರಹಿಸಿದರು.
ಪೋಷಕರ ದೂರಿನ ಪ್ರಕಾರ, ಫಿರ್ದೋಸ್ ಅವರು ಮೊದಲು ಅಜೀಂ ಎಂಬ ಯುವಕನೊಂದಿಗೆ ಪರಿಚಯ ಹೊಂದಿದ್ದರು. ಕೆಲ ದಿನಗಳ ನಂತರ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ದೂರವಾಗಿದ್ದರು. ಬಳಿಕ ಫಿರ್ದೋಸ್ ಅವರು ಅಜೀಂನ ಸ್ನೇಹಿತ ಸೋಹೈಲ್ ಎಂಬಾತನೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಲು ನಿರ್ಧರಿಸಿದ್ದರು.
ಈ ವಿಷಯ ತಿಳಿದ ಅಜೀಂ, ತನ್ನ ಬಳಿಯಿದ್ದ ಫಿರ್ದೋಸ್ ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬೆದರಿಕೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜುಲೈ 26ರಂದು ಸಂಜೆ ಮನೆಯಲ್ಲಿ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪೋಷಕರು ಹೇಳಿದರು.
ಆತ್ಮಹತ್ಯೆಗೂ ಮುನ್ನ ಫಿರ್ದೋಸ್ ಅವರು ಸೋಹೈಲ್ ಅವರಿಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ನಮ್ಮ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣದ ಹಿಂದೆ ಇರುವ ಸತ್ಯವನ್ನು ಪೊಲೀಸರು ಬಯಲಿಗೆಳೆದು ನಮಗೆ ನ್ಯಾಯ ಒದಗಿಸಬೇಕು” ಎಂದು ಪೋಷಕರು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಜೀಂ ಹಾಗೂ ಸೋಹೈಲ್ ಅವರ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಮಾನಸಿಕ ಕಿರುಕುಳ ನೀಡಲಾಗಿತ್ತೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೂಳು–ಕಸದಿಂದ ಮುಚ್ಚಿದ ಎಎಲ್‌ಬಿಸಿ ಕಾಲುವೆ: ಚವನಭಾವಿ ರೈತರಿಗೆ ನೀರಿನ ಸಂಕಷ್ಟನೂತನ ಸಚಿವ ಲಕ್ಷ್ಮಣ ಸವದಿಗೆ ಸ್ವಕ್ಷೇತ್ರದಲ್ಲಿ ಅಭೂತಪೂರ್ವ ಸ್ವಾಗತಕುಂಟೋಜಿ ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ಸಮಿತಿ ರಚನೆತಂಪೆರೆದ ಆಶ್ಲೇಸಾ ಮಳೆ : ೧ ಗಂಟೆಕಾಲ ಸುರಿದ ರಬಸದ ಮಳೆಪರಿಣಾಮಕಾರಿ ಬೋಧನೆ ಮತ್ತು ತರಗತಿ ನಿರ್ವಹಣೆ: ಘನಮಠೇಶ್ವರ ಶಾಲೆಯ ಶಿಕ್ಷಕರಿಗೆ ಮಾರ್ಗದರ್ಶನಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಸುತ್ತ ರಾಜಕೀಯ ಸಮರ: ರಾಹುಲ್ ಗಾಂಧಿ-ಕಿರಣ್ ರಿಜಿಜು ನಡುವೆ ತೀವ್ರ ವಾಗ್ದಾಳಿಬಾಗಲಕೋಟೆಯಲ್ಲಿ ರಾಜಕೀಯ-ಧಾರ್ಮಿಕ ಸಮರ ತೀವ್ರ: ಸಚಿವ ವಿಜಯಾನಂದ ಕಾಶಪ್ಪನವರ್ ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ನಡುವೆ ವಾಕ್ಸಮರ ಉಗ್ರ ರೂಪಕ್ಕೆಎಸ್. ಆಯ್. ಆರ್. ಪಟ್ಟಿ 17 ರ ವರೆಗೆ ಮುಂದುಡಿಕೆ ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ.'ನಮ್ಮ ಮಗಳಿಗೆ ನ್ಯಾಯ ಕೊಡಿಸಿ’ - ಯುವತಿ ಸಾವಿಗೆ ಕಿರುಕುಳವೇ ಕಾರಣ: ಪೋಷಕರ ಆಕ್ರೋಶಬೆಳಗಾವಿ–ಗೋವಾ ಸೌಹಾರ್ಧತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್