LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bijapur

ಬಸರಕೋಡ ಮೂರ್ತಿ ಕಳ್ಳರು ದರ್ಗಾ ಜೇಲಿಗೆ

ಮೂರ್ತಿ ಕಳ್ಳರನ್ನು ತಾಳಿಕೋಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೇಲಿಗಟ್ಟಿದ ಪೊಲೀಸರು

ತಾಳಿಕೋಟೆ,  : ಇತ್ತೀಚಗೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿಯ ಶ್ರೀ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿ ಕಳ್ಳತನಕ್ಕೆ ಸಂಬಂದಿಸಿದ ೩ ಜನ ಕಳ್ಳರನ್ನು ಶುಕ್ರವಾರರಂದು ತಾಳಿಕೋಟೆ ನ್ಯಾಯಾಲಯಕ್ಕೆ ಸಿಪಿಐ ಮಹ್ಮದಪಶಿಉದ್ದೀನ ನೇತೃತ್ವದಲ್ಲಿ ಪೊಲೀಸ್‌ರು ಹಾಜರುಪಡಿಸಿದರು.

              ಕಳೆದ ಜುಲೈ ೫ ರಂದು ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ ಕಬ್ಬಿಣದ ಬಾಗೀಲಿನ ಕೀಲಿಕೈ ಮುರಿದು ದೇವಸ್ಥಾನದಲ್ಲಿ ೩೨ ಕೆಜಿ ಬೆಳ್ಳಿ ಮೂರ್ತಿ ಕಳವು ಮಾಡಲಾಗಿತ್ತು ಸುಮಾರು ೫೧ ಲಕ್ಷ ೨೦ ಸಾವಿರ ರೂ. ಮೌಲ್ಯದ ಈ ಬೆಳ್ಳಿಯ ಮೂರ್ತಿ ಕುರಿತು ಕಳ್ಳತನ ಕುರಿತು ದೇವಾಲಯದ ಕಮಿಟಿಯ ಅಧ್ಯಕ್ಷರಾದ ಕರಿನಂದೆಪ್ಪ ಯಮನಪ್ಪ ಬಿರಾದಾರ ಅವರು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

              ಈ ಪ್ರಕರ್ಣವನ್ನು ಗಂಬೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದರು ಈ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

              ತನಿಖಾ ತಂಡದಲ್ಲಿ ಬ.ಬಾಗೇವಾಡಿ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹ್ಮದಪಶಿಉದ್ದೀನ, ಪಿಎಸ್‌ಐ ಸಂಜಯ ತಿಪ್ಪರಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ಹಾಗೂ ನುರಿತ ಪೊಲೀಸ್ ಸಿಬ್ಬಂದಿಗಳೊಳಗೊಂಡ ೪ ತನಿಖಾ ತಂಡಗಳು ಶೋದನಾ ಕಾರ್ಯದೊಮದಿಗೆ ತನಿಖೆ ಕೈಗೊಂಡು ಗುಜರಾತವರೆಗೂ ತೆರಳಿ ೩ ಜನ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಪಲರಾಗಿದ್ದಾರೆ.

              ಗುಜರಾತ ಮೂಲದ ಸುರೇಶಕುಮಾರ ಶಾಂತಿಲಾಲ ಸೋನಿ(೫೧), ಬ್ರಹ್ಮಾರಟೋಪಿಯಾ ನೇಟ್(೩೫), ಇಂದ್ರಜಿತ ಮನಿಯಾರ ನೇಟ್(೩೩) ಈ ಬಂದಿತ ಆರೋಪಿಗಳನ್ನು ವಿಚಾರ ಣೆ ನಡೆಸಿದಾಗ ಕಳ್ಳತನ ಮಾಡಿದ್ದು ತಪ್ಪು ಒಪ್ಪಿಕೊಂಡಿದ್ದಾರೆ. ಕಳ್ಳತನ ಮಾಡಿದ್ದ ಪವಾಡ ಬಸವೇಶ್ವರ ಬೆಳ್ಳಿಯ ಮೂರ್ತಿಯನ್ನು ತುಂಡರಿಸಿ ನಾಲ್ಕು ಭಾಗಗಳನ್ನಾಗಿ ಮಾಡಿ ಇನ್ನೂಳಿದ ಭಾಗವನ್ನು ಕರಗಿಸಿ ಗಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಿದ್ದರ ಕುರಿತು ಹೇಳಿಕೆ ನಿಡಿದ್ದು ಆ ಪ್ರಕಾರ ತನಿಖೆ ಕೈಕೊಂಡ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದಂತೆ ತುಂಡರಿಸಿದ ೪ ಕೆಜಿ, ೨೩ ಕೆಜಿ ತೂಕದ ಬೆಳ್ಳಿಯ ತುಣಕು, ೬೭.೬೦೦ ರೂ. ನಗದು, ಎರಡು ಮುಬೈಲ್ ಪೋನ್, ಈ ದುಸ್ಕೃತ್ಯಕ್ಕೆ ಬಳಿಸಿದ ಕಾರು, ಎರಡು ಕಬ್ಬಿಣದ ರಾಡುಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ೫೨ ಲಕ್ಷ ೭೦ ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಈ ಮೂರು ಜನ ಆರೋಪಿತರಿಂದ ಪಡೆಯಲಾಗಿದ್ದು ಈ ಪ್ರಕರ್ಣಕ್ಕೆ ಸಂಬಂದಿಸಿದ ಇನ್ನೂ ಕೆಲವು ಆರೋಪಿತರು ಭಾಗಿಯಾಗಿದ್ದಾರೆಂಬುದರ ಕುರಿತು ಪೊಲೀಸ್ ಇಲಾಖೆ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದುವರೆದಿದೆ.

              ಈ ಘಟನೆಗೆ ಸಂಬಂದಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ರಚಿಸಿದ ತನಿಖಾ ತಂಡ ಕುರಿತು ಹಾಗೂ ಡಿಎಸ್‌ಪಿ ಅವರ ಹಾಗೂ ಸಿಪಿಐ ಅವರ ಪ್ರಾಮಾಣಿಕವಾಗಿ ಮಾಡಿದ ಸೇವಾ ಕಾರ್ಯಗಳ ಕುರಿತು ತಾಳಿಕೋಟೆ, ಮುದ್ದೇಬಿಹಾಳ ಭಾಗವಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರಶಂಶಿಸಿದ್ದಾರೆ.

              ಶುಕ್ರವಾರರಂದು ಮೇಲಿನ ೩ ಆರೋಪಿಗಳನ್ನು ತಾಳಿಕೋಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರಿಂದ ಗೌರವಾನ್ವಿತ ನ್ಯಾಯಾದೀಶರಾದ ರಾಮಮೂರ್ತಿ ಅವರು ನ್ಯಾಯಾಂಗ ಬಂದನದಲ್ಲಿಡಲು ಆದೇಶಿಸಿದಂತೆ ವಿಜಯಪುರ ದರ್ಗಾ ಜೇಲಿಗೆ ಡಿಆರ್ ತುಕಡಿಯೊಂದಿಗೆ ಸೂಕ್ತ ಬದ್ರತೆಯಲ್ಲಿ ಕರೆದೊಯಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಕ್ರವಾರ ಇಳಿಕೆ ಕಂಡರೂ ವಾರದ ಅಂತ್ಯಕ್ಕೆ ಲಾಭದಲ್ಲೇ ಮುಕ್ತಾಯಗೊಂಡ ಷೇರು ಮಾರುಕಟ್ಟೆ₹23,731 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಉತ್ತೇಜನಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆಕಿತ್ತೂರು ಸಂಸ್ಥಾನದ ಭವ್ಯ ಪರಂಪರೆಯ ಸಂರಕ್ಷಣೆ: ಐತಿಹಾಸಿಕ ವೈಭವದ ಮರುಜೀವಕ್ಕೆ  ಬೇಕಾಗಿದೆ ಸಮಗ್ರ ಯೋಜನೆರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೊಡಿ: ಕುರುಬ ಮುಖಂಡರ ಆಗ್ರಹಬಸರಕೋಡ ಮೂರ್ತಿ ಕಳ್ಳರು ದರ್ಗಾ ಜೇಲಿಗೆನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ – ಕಳವಾದ ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಸಮುದಾಯ ಭವನ ಸಹಕಾರಿ: ಈರಣ್ಣ ಕಡಾಡಿಬೆಳಗಾವಿಯ ಸಾವಿರಾರು ಕೋಟಿ 'ಶಿವಂ ಅಸೋಸಿಯೇಟ್ಸ್' ವಂಚನೆ ಪ್ರಕರಣ: ಉದ್ಯಮಿ ಶಿವಾನಂದ ನೀಲಣ್ಣನವರ್‌ ಆಸ್ತಿಗಳ ಮೇಲೆ ಇಡಿ ತ್ರಿಮುಖ ಸಮರ!ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಬದಲಾವಣೆ ಬಿರುಗಾಳಿ: ಬಂಡಾಯ ಶಮನಕ್ಕೆ 'ಹೈಕಮಾಂಡ್ ಶಸ್ತ್ರಚಿಕಿತ್ಯೆ'!