LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | National News

ಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆ

ಭುವನೇಶ್ವರದಲ್ಲಿ 13ನೇ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರ ಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅಭಿಮತ

ಹಸಿರು ಕ್ರಾಂತಿ ವರದಿ ನವದೆಹಲಿ

ನಮ್ಮ ಶಿಕ್ಷಣ ವ್ಯವಸ್ಥೆ ಪ್ರಮುಖವಾಗಿ ಯುವಕರನ್ನು ಉದಯೋನ್ಮುಖ ಅವಕಾಶಗಳಿಗೆ ಸಿದ್ಧಪಡಿಸಬೇಕು ಮತ್ತು ಮಾನವೀಯ ಮೌಲ್ಯಗಳಲ್ಲಿ ದೃಢವಾಗಿ ಬೇರೂರಿಸುವಂತಿರಬೇಕು ಎಂದು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ 13ನೇ ಶಿಕ್ಷಣ ಸಚಿವರ ಸಮ್ಮೇಳನಾಧ್ಯಕ್ಷ, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ಭುವನೇಶ್ವರದಲ್ಲಿ ನಡೆದ 13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಭವಿಷ್ಯದ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಗಳನ್ನು ನಿರಂತರ ಬದಾಲವಣೆ, ಸುಧಾರಣೆ ಮತ್ತು ನಾವೀನ್ಯತೆಗೆ ಅಳವಡಿಸಬೇಕು ಎಂದು ಅಭಿಪ್ರಾಯಿಸಿದರು.

ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ಯುವಕರನ್ನು ಶೈಕ್ಷಣಿಕ ನೀತಿ-ನಿರೂಪಣೆ ಹಾಗೂ ಅಂತರಾಷ್ಟ್ರೀಯ ಸಹಕಾರದ ಕೇಂದ್ರದಲ್ಲಿ ಇರಿಸಬೇಕು. ಈ ನಿಟ್ಟಿನಲ್ಲಿ ಭಾರತ ಎಲ್ಲಾ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಬ್ರಿಕ್ಸ್‌ ಶಿಕ್ಷಣ ಸಚಿವರುಗಳ ಗಮನ ಸೆಳೆದರು.

ಶಿಕ್ಷಣವು ಸಮಗ್ರ ಬೆಳವಣಿಗೆ ಮತ್ತು ಹಂಚಿಕೆಯ ಸಮೃದ್ಧಿಗೆ ಮೂಲಾಧಾರವಾಗಿದೆ. ಈ ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಘೋಷಣೆಯು ಐದು ಆದ್ಯತಾ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸುವಲ್ಲಿ ಬ್ರಿಕ್ಸ್ ದೇಶಗಳ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನಾವೀನ್ಯತೆ ಮತ್ತು ಪರಂಪರೆ ಪರಸ್ಪರ ಪೂರಕವಾಗಿವೆ. ಬ್ರಿಕ್ಸ್ ದೇಶಗಳ ಶ್ರೀಮಂತ ನಾಗರಿಕ ಸಂಪ್ರದಾಯಗಳು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸಲು, ಆಳವಾಗಿ ಅಧ್ಯಯನ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ರವಾನಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತವೆ ಎಂದು ಹೇಳಿದರು.

ಒಡಿಶಾದ ಶ್ರೀಮಂತ ಪರಂಪರೆ ಪ್ರಾಚೀನ ಕಲಿಕೆಯ ಕೇಂದ್ರವಾಗಿದೆ. ʼಅತಿಥಿ ದೇವೋ ಭವ" ಮತ್ತು ʼವಸುಧೈವ ಕುಟುಂಬಕಂʼ ಎನ್ನುವುದು ಭಾರತದ ನಾಗರಿಕತೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ವಿವಿಧ ದೇಶಗಳು ವಿಭಿನ್ನ ಸಂಪ್ರದಾಯ ಮತ್ತು ಅನುಭವಗಳನ್ನು ಹೊಂದಿದ್ದರೂ ಪ್ರಗತಿಗೆ ಪರಸ್ಪರ ಸಂಬಂಧ ಹೊಂದಿವೆ ಎಂದು ಅಭಿಪ್ರಾಯಿಸಿದರು.

ಬ್ರಿಕ್ಸ್‌ ಸಭೆಯ ಪಂಚ ನಿರ್ಣಯ: ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಬಲಪಡಿಸುವುದು. ಕೌಶಲ್ಯ ಅಭಿವೃದ್ಧಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ, ತರಬೇತಿಯಲ್ಲಿ ಸಹಕಾರವನ್ನು ಬಲಪಡಿಸುವುದು. ಸಂಶೋಧನೆ, ನಾವೀನ್ಯತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು. ಪರಸ್ಪರ ಅರ್ಹತೆಗಳ ಗುರುತಿಸುವಿಕೆಯನ್ನು ಮುಂದುವರಿಸುವುದು. ಶೈಕ್ಷಣಿಕ ನಾಯಕತ್ವ ಮತ್ತು ಸಾಂಸ್ಥಿಕ ಅಭಿವೃದ್ಧಿಗಾಗಿ ಸಾಮರ್ಥ್ಯ ವೃದ್ಧಿ ಬಲಪಡಿಸುವಿಕೆ ಸೇರಿದಂತೆ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ ಬ್ರಿಕ್ಸ್‌ ಸಭೆಯಲ್ಲಿ ಕೆಲ ಒಪ್ಪಂದ-ನಿರ್ಣಯಗಳಿಗೆ ಸಮ್ಮತಿಸಲಾಯಿತು.

ಅಧ್ಯಾಪಕರು ಮತ್ತು ನಾಯಕತ್ವ ವಿನಿಮಯ ಕಾರ್ಯಕ್ರಮ, STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಮೇಲೆ ವಿಶೇಷ ಒತ್ತು ನೀಡುವ ವಿದ್ಯಾರ್ಥಿವೇತನ ಯೋಜನೆಗಳು ಮತ್ತು ಬ್ರಿಕ್ಸ್ ವಿಶ್ವವಿದ್ಯಾಲಯದ ಜಾಗತಿಕ ಶ್ರೇಯಾಂಕ ಮತ್ತು ಮೌಲ್ಯಮಾಪನ ವ್ಯವಸ್ಥೆಯ ಕಡೆಗೆ ಪ್ರಾಥಮಿಕ ಪರಿಶೋಧನಾ ಕಾರ್ಯವನ್ನು ಪ್ರೋತ್ಸಾಹಿಸುವ ಬಗ್ಗೆ ಒತ್ತು ನೀಡಲಾಯಿತು.

ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಕುರಿತು ಶೈಕ್ಷಣಿಕ ಸಹಯೋಗ ಬಲಪಡಿಸುವ ಬ್ರಿಕ್ಸ್ ಮಾರ್ಗದರ್ಶಿ ತತ್ವಗಳ ಕುರಿತು ಭಾರತದ ಉಪಕ್ರಮವನ್ನು ಸಭೆ ಸ್ವಾಗತಿಸಿತು. ಬ್ರಿಕ್ಸ್ ನೆಟ್‌ವರ್ಕ್ ವಿಶ್ವವಿದ್ಯಾಲಯವು ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಹೆಚ್ಚುವರಿ ಅಂತರಾಷ್ಟ್ರೀಯ ವಿಷಯಾಧಾರಿತ ಗುಂಪಾಗಿ ಸೇರಿಸಿಕೊಳ್ಳುವುದನ್ನು ಪರಿಗಣಿಸಬಹುದು ಎಂದು ಸಹ ಸೂಚಿಸಲಾಯಿತು.

 "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಯೋಗ ಮತ್ತು ಸುಸ್ಥಿರತೆ ನಿರ್ಮಿಸುವುದು" 2026ರ ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ವಿಷಯವಾಗಿದೆ. 13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯವಾಯಿತು.

ದೆಹಲಿಯಲ್ಲಿ ಮತ್ತೆ ಬ್ರಿಕ್ಸ್‌ ಶೃಂಗಸಭೆ: ಭಾರತ ತನ್ನ ಬ್ರಿಕ್ಸ್ ಅಧ್ಯಕ್ಷತೆಯ ಅವಧಿಯಲ್ಲಿ ವಿವಿಧ ವಲಯಗಳಲ್ಲಿ ಬ್ರಿಕ್ಸ್ ಸಚಿವರ ಸಭೆ ಆಯೋಜಿಸುವುದನ್ನು ಮುಂದುವರಿಸುತ್ತದೆ. ಅದರಂತೆ ಸೆಪ್ಟೆಂಬರ್ 12-13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಬ್ರಿಕ್ಸ್ ಶಿಕ್ಷಣ ಕಾರ್ಯಸೂಚಿಯಡಿ ಸಹಕಾರ ವೃದ್ಧಿಸುವ ಗುರಿಯೊಂದಿಗೆ ಆಯೋಜಿಸಿದ್ದ ಈ ಮಹತ್ವದ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಇರಾನ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಕ್ರವಾರ ಇಳಿಕೆ ಕಂಡರೂ ವಾರದ ಅಂತ್ಯಕ್ಕೆ ಲಾಭದಲ್ಲೇ ಮುಕ್ತಾಯಗೊಂಡ ಷೇರು ಮಾರುಕಟ್ಟೆ₹23,731 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಉತ್ತೇಜನಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆಕಿತ್ತೂರು ಸಂಸ್ಥಾನದ ಭವ್ಯ ಪರಂಪರೆಯ ಸಂರಕ್ಷಣೆ: ಐತಿಹಾಸಿಕ ವೈಭವದ ಮರುಜೀವಕ್ಕೆ  ಬೇಕಾಗಿದೆ ಸಮಗ್ರ ಯೋಜನೆರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೊಡಿ: ಕುರುಬ ಮುಖಂಡರ ಆಗ್ರಹಬಸರಕೋಡ ಮೂರ್ತಿ ಕಳ್ಳರು ದರ್ಗಾ ಜೇಲಿಗೆನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ – ಕಳವಾದ ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಸಮುದಾಯ ಭವನ ಸಹಕಾರಿ: ಈರಣ್ಣ ಕಡಾಡಿಬೆಳಗಾವಿಯ ಸಾವಿರಾರು ಕೋಟಿ 'ಶಿವಂ ಅಸೋಸಿಯೇಟ್ಸ್' ವಂಚನೆ ಪ್ರಕರಣ: ಉದ್ಯಮಿ ಶಿವಾನಂದ ನೀಲಣ್ಣನವರ್‌ ಆಸ್ತಿಗಳ ಮೇಲೆ ಇಡಿ ತ್ರಿಮುಖ ಸಮರ!ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಬದಲಾವಣೆ ಬಿರುಗಾಳಿ: ಬಂಡಾಯ ಶಮನಕ್ಕೆ 'ಹೈಕಮಾಂಡ್ ಶಸ್ತ್ರಚಿಕಿತ್ಯೆ'!