LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ರಾಷ್ಟ್ರಮಟ್ಟದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿ

ಹಸಿರು ಕ್ರಾಂತಿ ವರದಿ ಬೆಳಗಾವಿ

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (KAHER) ನ ಅಂಗಸಂಸ್ಥೆಯಾದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯವು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.


ವಿಶ್ವವಿದ್ಯಾಲಯದ ಆರೋಗ್ಯ ವೃತ್ತಿಪರರಿಗಾಗಿ ಶಿಕ್ಷಣ ವಿಭಾಗದ (UDEHP) ದೂರದೃಷ್ಟಿ ಕುರಿತು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅನೇಕರು ಉತ್ಕೃಷ್ಟಮಟ್ಟದ ವೈದ್ಯಕೀಯ ಚಿಂತನೆಗಳು, ಅನುಭವಗಳನ್ನು ಹಂಚಿಕೊಂಡರು. ಆಧುನಿಕ ವೈದ್ಯಕೀಯ ಬೋಧನಾ ಪದ್ಧತಿಯಲ್ಲಿನ ಸವಾಲುಗಳು, ಭವಿಷ್ಯದ ವೈದ್ಯ ಪದ್ಧತಿಯ ಕುರಿತು ವಿಶ್ಲೇಷಣಾತ್ಮಕ ಮಾತುಗಳು ಕೂಡ ವೈದ್ಯರಿಂದ ಕೇಳಿಬಂದವು. ಕಾರ್ಯಕ್ರಮದಲ್ಲಿ ವಿವಿಧ ಆಯುರ್ವೇದ ಕಾಲೇಜುಗಳಿಂದ ಒಟ್ಟು 180 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನವದೆಹಲಿಯ ಎನ್‌ಸಿಐಎಸ್‌ಎಂ ಅಧ್ಯಕ್ಷ ಪ್ರೊ.ಡಾ.ಮನೀಷಾ ಯು.ಕೋಥೇಕರ್ ಅವರು ನಿಯಂತ್ರಣಾತ್ಮಕ ವಿಷಯಗಳ ಕುರಿತು ಅಮೂಲ್ಯವಾದ ಒಳನೋಟಗಳ ಕುರಿತು ಮಾತನಾಡಿದ್ದು, ಮನಮುಟ್ಟುವಂತಿತ್ತು. ನವದೆಹಲಿ ಎಂಎಆರ್‌ಬಿಐಎಸ್‌ಎಂ, ಎನ್‌ಸಿಐಎಸ್‌ಎಂ ಅಧ್ಯಕ್ಷ ಪ್ರೊ.ಡಾ.ಮುಕುಲ್ ಪಟೇಲ್ ಹಾಜರಿದ್ದರು.


ಅತಿಥಿಗಳಾಗಿ ಕಾಹೆರ್‌ ಕುಲಸಚಿವ ಪ್ರೊ.ಡಾ.ವಿಶ್ವನಾಥ್ ಎಂ.ಪಟ್ಟಣಶೆಟ್ಟಿ ಮತ್ತು ಕಾಹೆರ್‌ನ ಇಂಟಿಗ್ರೇಟಿವ್ ಮೆಡಿಸಿನ್, ಕ್ಲಿನಿಕಲ್ ಸರ್ವಿಸಸ್ ಮತ್ತು ಸಂಶೋಧನೆಯ ನಿರ್ದೇಶಕ ಪ್ರೊ.ಡಾ.ಬಿ.ಎಸ್.ಪ್ರಸಾದ್‌ ಭಾಗವಹಿಸಿದ್ದರು. ಕಾಹೆರ್‌ನ ಕುಲಪತಿ ಪ್ರೊ.ಡಾ.ಸಂದೀಪ್ ಶ್ರೀವಾಸ್ತವ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ವೈದ್ಯಕೀಯ ನಿರ್ದೇಶಕ ಪ್ರೊ.ಡಾ.ಸುಹಾಸ್ ಕುಮಾರ್ ಶೆಟ್ಟಿ, ನಿರ್ದೇಶಕ ಯುಡಿಇಎಚ್‌ಪಿ ಡಾ.ಸುನೀತಾ ವೈ.ಪಾಟೀಲ ಮತ್ತು ಯುಡಿಇಎಚ್‌ಪಿ ಸಮನ್ವಯಾಧಿಕಾರಿ ಡಾ.ಮಂಜುಳಾ ಕಿವಡಸನ್ನವರ್ ಮುಂದಾಳತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರಮಟ್ಟದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿ‘ಪ್ರಶ್ನಿಸುವ ಜೀನ್‌-ಜಿ ಪೀಳಿಗೆ ದೇಶವಿರೋಧಿಯಲ್ಲ, ಅದು ಹೊಸ ಚೈತನ್ಯ’: ಯುವಜನತೆಯ ಬೆಂಬಲಕ್ಕೆ ನಿಂತ ಆರ್‍ಎಸ್‌ಎಸ್ ಧುರೀಣ ಮೋಹನ್ ಭಾಗವತ್30ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ನಿಂದ ಖಡಕಲಾಟದ ಸರ್ಕಾರಿ ಶಾಲೆಗೆ ಗಣಕಯಂತ್ರ ಹಾಗೂ ಶೈಕ್ಷಣಿಕ ಪರಿಕರಗಳ ದೇಣಿಗೆಎಐಐಎಮ್‌ಎಸ್ NORCET 2026: ದೇಶಾದ್ಯಂತ 2,218 ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ; ರೂ. 85,000ಕ್ಕೂ ಅಧಿಕ ಆರಂಭಿಕ ವೇತನ!ಯುಪಿಐ ಪಾವತಿಗೆ 'ಎಂಡಿಆರ್' ಶುಲ್ಕದ ಆತಂಕ: ಉಚಿತ ಡಿಜಿಟಲ್ ಪಾವತಿ ಯುಗ ಅಂತ್ಯಗೊಳ್ಳಲಿದೆಯೇ?ಮದ್ಯಪ್ರಿಯರಿಗೆ ಬಿಗ್ ಶಾಕ್: 'ಓಲ್ಡ್ ಮಾಂಕ್', 'ರಾಯಲ್ ಚಾಲೆಂಜ್' ಬ್ರ್ಯಾಂಡ್‌ಗಳ ಬಣ್ಣ ಬಯಲು ಮಾಡಿದ FSSAI; ನಕಲಿ ಬ್ಲೆಂಡಿಂಗ್ ವಿರುದ್ಧ ಕಠಿಣ ಕ್ರಮ!ಸಮಸ್ಯೆಗಳಿಗೆ ತಕ್ಷಣ ಪರಿಹರಿಸದಿದ್ದರೇ ಜೆನ್‌-ಝೀ ಮಾದರಿ ಹೋರಾಟಶರಣರ ಆದರ್ಶ ತತ್ವಗಳು ಕೊನೆಗೊಳ್ಳದೇ ಮುಂದುವರೆಯಲಿರಾಷ್ಟ್ರೀಯ ಮಕ್ಕಳ ಕೇಂದ್ರದ ಗೌರವಾಧ್ಯಕ್ಷರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆನೀಟ್ ಯುಜಿ ಫಲಿತಾಂಶದಲ್ಲಿ ಒಎಂಆರ್ ವ್ಯತ್ಯಾಸ: ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳು