LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | National News

₹23,731 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಉತ್ತೇಜನ

ಗೋಬರ್‌ ಧನ್' ಯೋಜನೆಗೆ ಕೇಂದ್ರ ಅನುಮೋದನೆ: ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ 

ಹಸಿರು ಕ್ರಾಂತಿ ವರದಿ ನವದೆಹಲಿ

ಕೇಂದ್ರ ಸರ್ಕಾರ ₹23,731 ಕೋಟಿ ವೆಚ್ಚದಲ್ಲಿ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಗೆ ಉತ್ತೇಜನ ನೀಡಲು ʼಗೋಬರ್‌ಧನ್' ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಗುರುವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ʼಗೋಬರ್‌ಧನ್'ಗೆ ಅನುಮೋದನೆ ಸಿಕ್ಕಿದ್ದು, 2026-27ನೇ ಆರ್ಥಿಕ ವರ್ಷದಿಂದ 2035-36ರವರೆಗಿನ ಒಂದು ದಶಕಕ್ಕೆ ಆರಂಭಿಕವಾಗಿ ₹23,731 ಕೋಟಿ ಮೀಸಲಿರಿಸಲಾಗಿದೆ. ಈ ಮಹತ್ವದ ಯೋಜನೆ ಸಾವಯವ ತ್ಯಾಜ್ಯವನ್ನು ʼಸ್ವಚ್ಛ ಇಂಧನ'ವನ್ನಾಗಿ ಪರಿವರ್ತಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತ ಜೈವಿಕ ಅನಿಲ (CBG)ಗೂ ಒತ್ತು ನೀಡುತ್ತಿದೆ. ಹೀಗಾಗಿ ಇದೀಗ ಭಾರತದ ರಾಷ್ಟ್ರೀಯ ಏಕೀಕೃತ ಯೋಜನೆ ʼಗೋಬರ್‌ಧನ್'ಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ʼಗೋಬರ್‌ಧನ್' ಯೋಜನೆ ದೇಶೀಯವಾಗಿ ಇಂಧನ ಬೇಡಿಕೆ, ಸ್ಥಿರ ಬೆಲೆ ನಿಗದಿ, ಬಂಡವಾಳ ಬೆಂಬಲ, ಪೈಪ್‌ಲೈನ್ ಸಂಪರ್ಕ ಮತ್ತು ಆರ್ಥಿಕ ನೆರವಿನ ಲಭ್ಯತೆ ಮೂಲಕ CBG ಉತ್ಪಾದನೆಯನ್ನು ವೇಗಗೊಳಿಸಲಿದೆ ಎಂದಿದ್ದಾರೆ.

ಈ ಯೋಜನೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ರೈತರ ಆದಾಯವನ್ನೂ ಹೆಚ್ಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಜತೆಗೆ ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಕ್ರವಾರ ಇಳಿಕೆ ಕಂಡರೂ ವಾರದ ಅಂತ್ಯಕ್ಕೆ ಲಾಭದಲ್ಲೇ ಮುಕ್ತಾಯಗೊಂಡ ಷೇರು ಮಾರುಕಟ್ಟೆ₹23,731 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನೆಗೆ ಉತ್ತೇಜನಉದಯೋನ್ಮುಖ ಅವಕಾಶಗಳಿಗೆ ಯುವಕರನ್ನು ಸಿದ್ಧಪಡಿಸಲಿ ಶಿಕ್ಷಣ ವ್ಯವಸ್ಥೆಕಿತ್ತೂರು ಸಂಸ್ಥಾನದ ಭವ್ಯ ಪರಂಪರೆಯ ಸಂರಕ್ಷಣೆ: ಐತಿಹಾಸಿಕ ವೈಭವದ ಮರುಜೀವಕ್ಕೆ  ಬೇಕಾಗಿದೆ ಸಮಗ್ರ ಯೋಜನೆರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೊಡಿ: ಕುರುಬ ಮುಖಂಡರ ಆಗ್ರಹಬಸರಕೋಡ ಮೂರ್ತಿ ಕಳ್ಳರು ದರ್ಗಾ ಜೇಲಿಗೆನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಅಥಣಿ ಪೊಲೀಸರ ಕಾರ್ಯಾಚರಣೆ – ಕಳವಾದ ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಸಮುದಾಯ ಭವನ ಸಹಕಾರಿ: ಈರಣ್ಣ ಕಡಾಡಿಬೆಳಗಾವಿಯ ಸಾವಿರಾರು ಕೋಟಿ 'ಶಿವಂ ಅಸೋಸಿಯೇಟ್ಸ್' ವಂಚನೆ ಪ್ರಕರಣ: ಉದ್ಯಮಿ ಶಿವಾನಂದ ನೀಲಣ್ಣನವರ್‌ ಆಸ್ತಿಗಳ ಮೇಲೆ ಇಡಿ ತ್ರಿಮುಖ ಸಮರ!ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಬದಲಾವಣೆ ಬಿರುಗಾಳಿ: ಬಂಡಾಯ ಶಮನಕ್ಕೆ 'ಹೈಕಮಾಂಡ್ ಶಸ್ತ್ರಚಿಕಿತ್ಯೆ'!