Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನನ್ನ ಪತ್ನಿಯ ಜೀವ ಉಳಿಸಿ : ಕಿಡ್ನಿ ಕಸಿ ಚಿಕಿತ್ಸೆಗೆ ನೆರವು ಕೋರಿದ ತಿಮ್ಮಾರೆಡ್ಡಿ,

ಕೊಪ್ಪಳ, ಜೂನ್ ,20 : ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ನಿವಾಸಿ ತಿಮ್ಮಾರೆಡ್ಡಿ ಅವರು ತಮ್ಮ ಪತ್ನಿ ಹುಲಿಗೆಮ್ಮ ಅವರ ಕಿಡ್ನಿ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಪತ್ನಿ ಹುಲಿಗೆಮ್ಮ ಅವರ ಎರಡು ಕಿಡ್ನಿಗಳು ಸಂಪೂರ್ಣವಾಗಿ ವೈಫಲ್ಯಗೊಂಡಿದ್ದು, ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು. ವೈದ್ಯರ ಸಲಹೆಯಂತೆ ಡಯಾಲಿಸಿಸ್ ಚಿಕಿತ್ಸೆ ನಿರಂತರವಾಗಿ ಮುಂದುವರಿಯದಿದ್ದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವೈದ್ಯರನ್ನು ಸಂಪರ್ಕಿಸಿದ್ದು, ಕಿಡ್ನಿ ಕಸಿ ಮಾಡಿದರೆ ಆರೋಗ್ಯ ಸುಧಾರಿಸುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು.
ಆದರೆ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಕಿಡ್ನಿ ಕಸಿ ಹಾಗೂ ಇತರೆ ಚಿಕಿತ್ಸೆಗಳಿಗಾಗಿ ಸುಮಾರು 10 ಲಕ್ಷ ವೆಚ್ಚವಾಗಲಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ತಮಗೆ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ನೋವು ತೋಡಿಕೊಂಡರು.
ಹೀಗಾಗಿ ದಾನಿಗಳು, ಸಂಘ,ಸಂಸ್ಥೆಗಳು ಹಾಗೂ ಸಾರ್ವಜನಿಕರು ಮಾನವೀಯ ನೆಲೆಯಲ್ಲಿ ನೆರವು ನೀಡುವಂತೆ ಅವರು ವಿನಂತಿಸಿದರು. ನೆರವು ನೀಡಲು ಇಚ್ಛಿಸುವವರು ಫೋನ್ ಪೇ ಸಂಖ್ಯೆ : 7795061761 ಗೆ ಆರ್ಥಿಕ ಸಹಾಯ ಮಾಡಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ನಿ,ಮತ್ತು ಮಕ್ಕಳು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು  ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಅದ್ದೂರಿಯಾಗಿ ಲೋಕಾರ್ಪಣೆ. ಚಿಕ್ಕಸಂಗಮ ಅಂತಾರಾಷ್ಟ್ರೀಯ ಪ್ರವಾಸಿತಾಣ  ಮಾಡುವ ಗುರಿ ರಾಯಬಾಗ:ಗ್ರಾಹಕರ ಅಚಲ ವಿಶ್ವಾಸವೇ ಸಹಕಾರಿಯ ಯಶಸ್ಸಿಗೆ ಕಾರಣ: ಸಂಜಯ ಅಡಕೆಜು ೨೨ ರಿಂದ ಜು ೨೮ರ ವರೆಗೆ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರವಿಜಯಾನಂದ ಕಾಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜೂನ್ ೨೨ರಂದು ಹಕ್ಕೊತ್ತಾಯ ಪಾದಯಾತ್ರೆ ಇದ್ದಲಗಿ ಗ್ರಾಮಸ್ಥರ ಧರಣಿ ಸತ್ಯಾಗ್ರಹ : ಬೇಡಿಕೆಗಳ ಇಡೇರಿಕೆಗೆ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ ಶ್ರೀ ರಾಮನ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಶಾಸಕ ವಿಶ್ವಾಸ ವೈದ್ಯ ರೈತರಿಗೆ ಖೇತ ಬಚಾವೋ ಅಭಿಯಾನ ತರಬೇತಿ ಕಾರ್ಯಕ್ರಮ*ಅಳವಂಡಿ ಪೋಲಿಸ್ ಠಾಣೆಯ ಯಲ್ಲಿ ದೌರ್ಜನ್ಯ: ಆರೋಪ: ಕ್ರಮಕ್ಕೆ ಒತ್ತಾಯ*