ಘಟಪ್ರಭಾ. ಘಟಪ್ರಭಾದಿಂದ ಸಂಕೇಶ್ವರ ಚಿಕ್ಕೋಡಿ ವರೆಗೆ ಪ್ರತಿದಿನಾ ಬೆಳಿಗ್ಗೆ, ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸುವ ಕುರಿತು. ಘಟಪ್ರಭಾ. ದಿನಾಂಕ 29.07.2026 ರಂದು ಘಟಪ್ರಭಾ ಮೃತ್ಯುಂಜಯ ಸರ್ಕಲದಲ್ಲಿ ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಘಟಪ್ರಭಾದಿಂದ ಸಂಕೇಶ್ವರ ಪಟ್ಟಣಕ್ಕೆ ಪ್ರತಿದಿನ ಬೆಳಿಗ್ಗೆ ನೂರಾರು ಜನ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಸೇರಿದಂತೆ ಅನೇಕ ಜನರು ಘಟಪ್ರಭದಿಂದ ಸಂಕೇಶ್ವರ ಪಟ್ಟಣಕ್ಕೆ ಕೆಲಸಕ್ಕಾಗಿ ಹಾಗೂ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಸ್ ಮೂಲಕ ಪ್ರಯಾಣಿಸುತ್ತಿದ್ದು,ಘಟಪುಭಾ ಪಟ್ಟಣದಲ್ಲಿ ರೇಲ್ವೆ ಸ್ಟೇಷನ್ ಹಾಗೂ ಅತಿದೊಡ್ಡ ಕೃಷಿ ಮಾರುಕಟ್ಟೆ ಹೊಂದಿರುವುದರಿಂದ ಜನದಟ್ಟನೆ ಅತಿ ಹೆಚ್ಚಾಗಿ ಇರುವುದರಿಂದ ಹೆಚ್ಚುವರಿ ಬಸ್ ಸೌಲಭ್ಯ ಮಾಡುವ ಕುರಿತು, ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಈಗಾಗಲೇ ಒಂದೆರಡು ಬಸುಗಳು ಸಂಚಾರ ಮಾಡುತ್ತಿದ್ದು, ಸರಿಯಾದ ಸಮಯಕ್ಕೆ ಬರುತ್ತಿರುವುದಿಲ್ಲಾ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ರವರ ಆದೇಶದಂತೆ ದಿನನಿತ್ಯ ಕೆ ಎ ಎ ಎಂ ಎಸ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿದ್ದು, ಸರ್ಕಾರಿ ಅನಾನೂಕೂಲತೆಯಿಂದ ನೌಕರರಿಗೂ ಕೂಡಾ ಬಸ್ ಹಾಜರಾಗಲು ಸರಿಯಾದ ಸಮಯಕ್ಕೆ ಸಾಧ್ಯವಾಗುತ್ತಿರುವುದಿಲ್ಲಾ, ಪ್ರತಿ ದಿನಾಲು ಬೆಳಿಗ್ಗೆ ಅಂದಾಜು 8.00 ಗಂಟೆಯಿಂದ 8.30 ರ ಒಳಗೆ ಹೆಚ್ಚುವರಿಯಾಗಿ ಎರಡು ಬಸ್ ಅನುಕೂಲ ಮಾಡಿಕೊಡಬೇಕೆಂದು ಅಗ್ರಹಿಸಿ ಬಸ ತಡೆದು ಪ್ರತಿಭಟನೆ ನಡೆಸಲಾಲಾಯಿತು. ಕರವೇ ಸಂಘಟನೆಗಳ ಸದಸ್ಯರು, ನೌಕರರು, ಶಾಲಾ ವಿದ್ಯಾರ್ಥಿಗಳು ಪಟ್ಟಣದ ಮೃತ್ಯುಂಜಯ ಸರ್ಕಲನಲ್ಲಿ ಪ್ರತಿಭಟಿಸಿದರು .
ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ವಕೀಲರು ಮಾತನಾಡಿ ಅನೇಕ ವಿದ್ಯಾರ್ಥಿಗಳಿಗೂ ಹಾಗೂ ಸರಕಾರಿ ನೌಕರಸ್ಥರಿಗೂ ಸಾರ್ವಜನಿಕರಿಗೂ ಅನುಕೂಲವಾಗುವ ದೃಷ್ಟಿಯಿಂದ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡಲು ಪೋಲಿಸ್ ಅಧಿಕಾರಿಗಳು ಘಟಪ್ರಭಾ ಠಾಣೆ ಇವರಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಯವರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕರವೇ ರಾಜ್ಯ ಉಸ್ತುವಾರಿ ಅಧ್ಯಕ್ಷ ತಮ್ಮಣ್ಣ ಅರಭಾಂವಿ, ಕನ್ನಡ ಸೇನೆ ತಾಲೂಕ ಅಧ್ಯಕ್ಷ ಅಪ್ಪಾಸಾಬ್ ಮುಲ್ಲಾ, ಕರವೇ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಾಶಿ, ಕರವೇ ಮೂಡಲಗಿ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ರಾಘವೇಂದ್ರ ಕುಡ್ಡೆಮಿ, ಘಟಪ್ರಭಾ ನಗರ ಘಟಕ ಅಧ್ಯಕ್ಷರಾದ ಯಲ್ಲಪ್ಪ ಅಟ್ಟಿಮಿಟ್ಟಿ. ಕರವೇ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಮಂಜುನಾಥ್ ಪಾಟೀಲ್, ರಾಜು ಗಾಡಿ ವಡ್ಡರ್, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಉಪಸ್ಥಿತರಿದ್ದರು.
