ಹುನಗುಂದ; ನಗರದ ವಿಮವಿವ ಸಂಘದ ವಿಜಯ ಮಹಾಂತೇಶ ಎಸ್.ಆರ್, ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿಎಸ್ ಬೆಳ್ಳಿಹಾಳ ಮಹಾವಿದ್ಯಾಲಯ, ತಾಲೂಕಾ ಕಾನೂನು ಸೇವಾ ಸಮೀತಿ, ವಕೀಲರ ಸಂಘ ಹುನಗುಂದ-ಇಲಕಲ್ಲ ಮತ್ತು ವರದಿಶ್ರೀ ಫೌಂಡೇಶನ್ ಹುಬ್ಬಳ್ಳಿ ಸಂಯುಕ್ತಾಶ್ರಯದಲ್ಲಿ ಜುಲೈ ೧೦ರಂದು ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ೧೦ಕ್ಕೆ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವದಿಯಾರ್ಥಿಗಳಿಗೆ ಕಾನೂನು ಅರಿವು-ನೆರವು ಹಾಗೂ ಪಂಚವಟಿ ಸಸಿ ನೆಡುವು ಕಾರ್‍ಯಕ್ರಮ ನಡೆಯಲಿದೆ. ಚಿತ್ರಗಿ ಸಂಸ್ಥಾನಮಠ ಹುನಗುಂದದ ಡಾ. ಗುರುಮಹಾಂತ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಿ.ಎ. ಮೂಲಿಮನಿನಕಾರ್‍ಯಕ್ರಮ ಉದ್ಘಾಟಿಸುವರು. ಸಂಸ್ಥೆಯ ಕಾರ್‍ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಸಂಘದ ಗೌರವ ಕಾರ್‍ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಅಪರ ದಿವಾಣಿ ನ್ಯಾಯಾಧೀಶೆ ಪದ್ಮಾವತಿ ನಾಗಣ್ಣ ಮಾದಿಗ, ತಾಪಂ ಇಒ ಮುರಳೀಧರ ದೇಶಪಾಂಡೆ, ಮಲ್ಲಿಕಾರ್ಜುನ ರಡ್ಡೇರ, ವಕೀಲ ಸಂಘದ ಅಧ್ಯಕ್ಷ ಎಂ.ಬಿ. ದೇಶಪಾಂಡೆ, ಎಂ.ಎಸ್. ಹೊಸೂರ, ಕಾಲೇಜ ಪ್ರಾಚಾರ್‍ಯ ಡಾ. ಎಸ್.ಆರ್. ಗೋಲಗುಂಡ, ಎಚ್.ಎಸ್. ಬೋಳಿಶಟ್ಟರ, ಎಸ್.ಬಿ. ಚಳಗೇರಿ, ಎಫ್.ಎಂ. ರಾಮವಾಡಗಿ ಉಪಸ್ಥಿತರಿರುವರು.
