ತಾಳಿಕೋಟೆ, ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮಣರಾವ್ ಮಹಿಂದ್ರಕರ ಅವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಗಳವಾರ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು ದಿವಂಗತ ಲಕ್ಷ್ಮಣರಾವ್ ಮಹಿಂದ್ರಕರ ಅವರೊಂದಿಗಿನ ತಮ್ಮ ರಾಜಕೀಯ ಒಡನಾಟ, ಪಕ್ಷದ ಕುರಿತು ಅವರಿಗಿದ್ದ ನಿಷ್ಠೆ ಹಾಗೂ ಅವರಲ್ಲಿದ್ದ ಒಳ್ಳೆಯ ಮಾನವೀಯ ಗುಣಗಳನ್ನು ಮೆಲುಕು ಹಾಕಿ ಇವತ್ತು ನಾನು ಪಕ್ಷದ ಒಬ್ಬ ಒಳ್ಳೆಯ ನಿಷ್ಠಾವಂತ ಮುಖಂಡನನ್ನು ಕಳೆದುಕೊಂಡಿದ್ದೇನೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಮಯದಲ್ಲಿ ಮೃತ ಲಕ್ಷ್ಮ ಮಹಿಂದ್ರಕರ ಅವರ ಸಹೋದರ ದಿಲೀಪ ಮಹಿಂದ್ರಕರ, ಎಸ್ ಎಂ ಮಹಿಂದ್ರಕರ, ವಿ.ಬಿ.ಲೋಕರೆ, ತುಳಸಿದಾಸ ಹಂಚಾಟೆ, ಮೋತಿಲಾಲ್ ಮಹಿಂದ್ರಕರ, ಕಿಟ್ಟು ಮಹಿಂದ್ರಕರ, ವಿಜಯ ಮಹಿಂದ್ರಕರ, ಸುರೇಶಧಣಿ ನಾಡಗೌಡ(ಬಿಂಜಲಬಾವಿ), ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಶ್ರೀಮತಿ ನೀಲಮ್ಮ ಪಾಟೀಲ ಹಾಗೂ ಕುಟುಂಬದ ಸದಸ್ಯರು ಇದ್ದರು.
