Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ಸಿ.ಎಸ್.ನಾಡಗೌಡರಪರ ಶ್ರೀಗಳ ಬ್ಯಾಟಿಂಗ್

ಸಚೀವಸ್ಥಾನ ನೀಡಿದರೆ ಸರ್ಕಾರಕ್ಕೆ ಶಕ್ತಿ ಹೆಚ್ಚಲಿದೆ-ಗುಂಡಕನಾಳಶ್ರೀ

ತಾಳಿಕೋಟೆ,   ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾಗಿರುವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಈ ಭಾರಿ ಸಚೀವ ಸಂಪುಟು ರಚನೆಯಲ್ಲಿ  ಸಚೀವ ಸ್ಥಾನಮಾನ ನೀಡಿದ್ದೇ ಆದಲ್ಲಿ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಅತ್ಯಂತ ಪ್ರಭಾವಶಾಲಿಯಾಗಲಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭವಿಷ್ಯ ನುಡಿದ್ದಾರೆ.
        ಬುಧವಾರರಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕಳೆದ ೫೦ ವರ್ಷಗಳ ರಾಜಕಾರಣದಲ್ಲಿ ಕಳಂಕ ರಹೀತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ ಅವರಲ್ಲಿರುವ ಅನುಭವ ಬಹಳೇ ದೊಡ್ಡಮಟ್ಟದ್ದಾಗಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳುವ ಸುವರ್ಣಾವಕಾಶ ಕಾಂಗ್ರೇಸ್ ಪಕ್ಷದವರಿಗೆ ಒದಗಿ ಬಂದಿದೆ ರಾಜ್ಯದ ಸರ್ವ ಜನರ ನಾಡಿ ಮಿಡಿತ ಅರೀತ ಅತ್ಯಂತ ಹಿರಿಯ ಶಾಸಕರಾಗಿರುವ ಅಪ್ಪಾಜಿ ನಾಡಗೌಡರ ಮನೆತನ ಬ್ರೀಟಿಷರ ಕಾಲದಿಂದಲೂ ದೇಶಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಕುಟುಂಭವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಾಡಗೌಡರ ಮನೆತನ ಯಾವತ್ತಿಗೂ ಹಣದಿಂದ ಹೋದುದ್ದಲ್ಲಾ ಗುಣದಿಂದ ಸಚ್ಚ್ಯಾರಿತ್ರ್ಯತನದಿಂದ ಗುರುತಿಸಿಕೊಂಡ ರಾಜ ಮನೆತನವಾಗಿದೆ ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ಆಡಳಿತ ನಡೆಸುವ ಮತ್ತು ರಾಜ್ಯದ ಜನರ ಸೇವೆ ಮಾಡುವ ಅತ್ಯಂತ ಹಿರಿಯ ರಾಜಕೀಯ ಮುತ್ಸದ್ದಿತನದಲ್ಲಿ ಗುರುತಿಸಿಕೊಂಡಿರುವ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚೀವ ಸ್ಥಾನ ನೀಡಿದ್ದೇ ಆದಲ್ಲಿ ರಾಜ್ಯದ ರಾಜಕಾರಣದಲ್ಲಿಯೇ ಹೊಸ ದಿಕ್ಕನ್ನೇ ಬದಲಾವಣೆಗೊಳ್ಳಲಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರೂ ಕೂಡಾ ಒಳ್ಳ:ಯ ಧಾರ್ಮಿಕ ಭಾವನೆಯುಳ್ಳ ಮುಖ್ಯಮಂತ್ರಿಯಾಗಿರುವದರಿಂದ ಬಸವಣ್ಣನವರ ವಿಚಾರಧಾರೆಯಂತೆ ಎಲ್ಲರಿಗೂ ಸಮಾನಾಂತರದಲ್ಲಿ ರಾಜ್ಯದ ಜನರಿಗೆ ನ್ಯಾಯ ಒದಗಿಸುವತ್ತ ಸಾಗಿದ್ದಾರೆ ಈ ಭಾರಿಯ ಸಚೀವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚೀವ ಸ್ಥಾನ ನೀಡಿದರೆ ಅವರ ಸಾರಥಿಯಾಗಿ ರಾಜ್ಯದ ಅಭಿವೃದ್ದಿಗ ಮುನ್ನುಡಿಬರೆಯಲಿದ್ದಾರೆ ಈ ಹಿಂದೆ ಅಲ್ಪ ಲಾಭದಲ್ಲಿದ್ದ ಕೆಆರ್‌ಡಿಎಲ್ ಸಂಸ್ಥೆ ೫೦೦ ಕೋಟಿಗೂ ಅಧಿಕ ಲಾಭಗಳಿಸುವತ್ತ ಮುನ್ನಡೆದಿರುವದು ಶಾಸಕ ಸಿ.ಎಸ್.ನಾಡಗೌಡ ಅವರ ಶ್ರಮದ ಕೊಡುಗೆಯಾಗಿದೆ ಇದರಿಂದ ಸರ್ಕಾರಕ್ಕೂ ದೊಡ್ಡ ಮಟ್ಟದ ಲಾಭವನ್ನು ತಂದುಕೊಟ್ಟಿದ್ದಾರೆ ಶಾಸಕ ನಾಡಗೌಡರು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಭಲವರ್ದನೆಯಲ್ಲಿ ಪಕ್ಷದ ನಾಯಕರುಗಳೊಂದಿಗೆ ಮುನ್ನೇಜ್ಜೆ ಇಟ್ಟಂತಹ ಪ್ರಭಾವಿ ನಾಯಕರು ಆಗಿದ್ದಾರೆ ಅವರಿಗೆ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನಮಾನವನ್ನು ನೀಡಿ ಪಕ್ಷದ ಹಾಗೂ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಒದಗಿಸಿಕೊಡುವದರೊಂದಿಗೆ ಲಕ್ಷಾಂತರ ಜನ ಅಭಿಮಾನಿಗಳ ಆಸೆಯನ್ನು ಇಡೇರಿಸಬೇಕೆಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುರುಮಹಾಂತ ಶ್ರೀಗಳಿಗೆ ಸನ್ಮಾನ ಜುಲೈ ೧೦ರಂದು ಕಾಲೇಜು ಒಕ್ಕೂಟ ಉದ್ಘಾಟನೆಅಕ್ರಮ ಕಟ್ಟಡ ತೆರವು ಪ್ರಕರಣ : ಅಧಿಕಾರಿಗಳ ಮತ್ತು ಕರವೆ ಕಾರ್‍ಯಕರ್ತರ ನಡುವೆ ವಾಗ್ವಾದ ಅತೀ ಶೀಘ್ರದಲ್ಲಿಯೇ ನಾಗರಬೆಟ್ಟ ಏತನನಿರಾವರಿ ಯೋಜನೆ  - ಸುಮಾರು ೫೦೦ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಸಿಎಂ ಚಾಲನೆ: ಶಾಸಕ ಸಿ.ಎಸ್. ನಾಡಗೌಡಶ್ರೀ ಸಂಗಮೇಶ್ವರ ಶಾಲೆಗೆ ನೋಡಲ್ ಅಧಿಕಾರಿ ಬ್ಯಾಹಟ್ಟಿ ಬೆಟ್ಟಿಮೃತ ಲಕ್ಷ್ಮಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ: ಸಾಂತ್ವನಶಾಲಾ ಸಂಸತ್ತ ರಚನೆಜುಲೈ ೧೦ ರಂದು ಬಾಡಗಂಡಿ ಆಯುರ್ವೇದಿಕ್ ಆಸ್ಪತೆಲ್ಲಿ ಉಚಿತ ಆರೋಗ್ಯ ಮತ್ತು ಚಿಕಿತ್ಸಾ ಶಿಬಿರ : ಎಂ.ಎನ್.ಪಾಟೀಲ.ರಾಮನಗೌಡ ರುದ್ರಗೌಡ ಪಾಟೀಲ ನಿಧನಘಟಪ್ರಭಾ ನಿಲ್ದಾಣದಲ್ಲಿ 4 ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮಂಜೂರಾತಿ: ಮಾಜಿ ಸಂಸದ ಈರಣ್ಣ ಕಡಾಡಿ