ತಾಳಿಕೋಟೆ,ಜು,೦೮ ಪಟ್ಟಣದ ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಮಂಗಳವಾರರಂದು ವಿಜಯಪುರ ಉಪನಿರ್ದೇಶಕರ ಕಾರ್ಯಾಲಯದ ವಿಷಯ ಪರಿವೀಕ್ಷಕರು ಹಾಗೂ ಎಸ್.ಎಸ್.ಎಲ್.ಸಿ.ಜಿಲ್ಲಾ ನೊಡಲ್ ಅಧಿಕಾರಿಗಳಾದ ಎಸ್.ಎಮ್.ಬ್ಯಾಹಟ್ಟಿ ಅವರು ಆಕಸ್ಮಿಕ ಬೇಟಿ ನೀಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಅನೇಕ ವಿಷಯಗಳ ಕುರಿತು ಶಿಕ್ಷಕರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಮಯದಲ್ಲಿ ಸಿಆರ್‌ಪಿ ಎಸ್.ಎಮ್ ಪಾಲ್ಕಿ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ ಕಟ್ಟಿ, ಬಿ.ಆಯ್. ಹಿರೇಹೊಳಿ, ಎಸ್.ವಿಜಾಮಗೊಂಡಿ, ಹತ್ತನೆ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ, ಎಚ್.ಬಿ.ಪಾಟೀಲ, ಎಮ್. ಎಸ್.ರಾಯಗೊಂಡ, ಯು.ಎಚ್.ಗಟನೂರ, ಸಿದ್ದನಗೌಡ ಮುದನೂರ, ಸುನೀಲ ಮತ್ತಿಗಟ್ಟಿ, ಶ್ರೀಮತಿ ರೇಣುಕಾ ಬಿರಾದಾರ, ಕೆ.ಎನ್.ನಾಲತವಾಡ ಉಪಸ್ಥಿತರಿದ್ದರು.
