ಯರಗಟ್ಟಿ : ಸಮೀಪದ ರೈನಾಪೂರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶಾಸಕ ವಿಶ್ವಾಸ ವೈದ್ಯ.
ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ರೈನಾಪೂರ ಗ್ರಾಮದ ಸಾರ್ವಜನಿಕರು, ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಮಾಡಿದ್ದರು.
ಮನವಿ ಸ್ಪಂದಿಸಿದ ಶಾಸಕ ವಿಶ್ವಾಸ ವೈದ್ಯ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ರೈನಾಪೂರ ಗ್ರಾಮಕ್ಕೆ ಬಸ್ ಸೇವೆಗೆ ಸಾರಿಗೆ ನಿಯಂತ್ರಣಾಧಿಕಾರಿ ಉಮೇಶ ಶಿಂತ್ರಿ ಚಾಲನೆ ನೀಡಿದರು. ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಬಸ್ ಬರಮಾಡಿಕೊಂಡರು.
ಈ ವೇಳೆ ಶಿವಪ್ರಸಾದ ಜಕಾತಿ , ಅನಿಲ ಶಿದ್ನಾಳ, ಎಫ್. ಎಸ್. ಸಿದ್ನಾಳ, ಮಲ್ಲಪ್ಪ ಕಣಕಿ, , ಸಂಜು ಶಿದ್ನಾಳ, ರಾಜು ಕಳ್ಳಿಗುದ್ದಿ, ವೆಂಕಣ್ಣ ಆಚಮಟ್ಟಿ, ಫಕ್ಕೀರಪ್ಪ ಕಾನನ್ನವರ, ವಿಠ್ಠಲ ಹುಲಕುಂದ ಇದ್ದರು.
