ತಾಳಿಕೋಟೆ, ಪ್ರೇಮ ಸುಃಖಗಳನ್ನು ತೇಜಿಸಿ ಒಳ್ಳೆಯ ಭಾವನೆಗಳನ್ನು ನೀಡುವದರೊಂದಿಗೆ ಸಮಾಜಕ್ಕಾಗಿ ತಮ್ಮನ್ನು ತಾವು ಸವಿಸಿಕೊಂಡು ಬೆಳೆದವರಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ವೈ.ಚೆ.ಜಯದೇವ ಅವರ ಜೀವನ ಚರಿತ್ರೆ ಮತ್ತು ಅವರ ಕುರಿತಾದ ಲೇಖನಗಳನ್ನು ಬಾಬುಕೃಷ್ಣ ಮೂರ್ತಿ ಬೆಂಗಳೂರ ಸುದರ್ಶನ ಅವರು ಸಂಗ್ರಹಿಸಿ ಸಿದ್ದಪಡಿಸಿದ ಗ್ರಂಥವು ರಾಷ್ಟ್ರೋತ್ತಾನ ಸಾಹಿತ್ಯದಿಂದ ಪ್ರಕಟಗೊಂಡಿರುವದು ಸಂತಸದಾಯಕ ಸಂಗತಿಯಾಗಿದೆ ಎಂದು ಹುಬ್ಬಳ್ಳಿಯ ಯುವ ಬ್ರೀಗೇಡ್ ರಾಜ್ಯ ಕಲ್ಪ ಪ್ರಮುಖರಾದ ಕಿರಣ್‌ರಾಮ ಅವರು ನುಡಿದರು.
ಶನಿವಾರರಂದು ರಾಷ್ಟ್ರೋತ್ತಾನ ಸಾಹಿತ್ಯ ಪರಿಷತ್ ಬೆಂಗಳೂರ ಹಾಗೂ ರಾಷ್ಟ್ರತ್ತೋತ್ತಾನ ಬಳಗ ವಿಜಯಪುರಜಿಲ್ಲೆ ಇವರ ವತಿಯಿಂದ ಎಸ್.ಕೆ.ಶಿಕ್ಷಣ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಲಾದ ಮೈ ಚೆ ಜಯದೇವ “ಬಧುಕು-ನೆನಪು” ಮತ್ತು “ಇತಿಹಾಸ ಸೇರಗು” ಎಂಬ ಎಸ್.ಆರ್.ರಾಮಸ್ವಾಮಿ ಅವರ ಪರಮರ್ಷ ಪ್ರಭಂದಗಳ ರಚಿತ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವೈ ಚೆ ಜಯದೇವ ಅವರ ಬಧುಕು ನೆನಪು ಎಂಬ ಪುಸ್ತಕ ಕುರಿತು ಪರಿಚಯಿಸುತ್ತಾ ಮಾತನಾಡುತ್ತಿದ್ದ ಅವರು ಸ್ವಾತಂತ್ರ್ಯ ಪುನರ್ ನಂತರ ಪಡೆದ ಮೇಲೆ ಭಾರತ ವ್ಯಕ್ತಿ ಆಳವನ್ನು ನೋಡಿದವರು ಈ ಹಿಂದಿನ ನೆನಪನ್ನು ನುಂಗಿದವರು ಜಯದೇವರಾಗಿದ್ದರು ಸಮಾಜ ಕಟ್ಟಲು ಬಂದವ ನಾನ್ನಲ್ಲಾ ನನ್ನ ಜೀವನ ಒಳಿತಿಗಾಗಿ ಭಗವಂತನಿಗಾಗಿ ಮುಕ್ತಿಬೇಕೆಂದು ಬೇಡಿಕೆ ದೇವರಲ್ಲಿ ಬಧುಕಿದ್ದೇವೆಂಬ ಭಾವನೆ ಅವರಲ್ಲಿತ್ತೆಂದರು. ಹಿಂದಿನ ಕಾಲದ ಬಧುಕು ಹೇಗಿತ್ತೆಂಬುದು ಈ ಪುಣ್ಯಾತ್ಮರಿಂದಲೇ ಕಲಿಯಬೇಕೆಂದರಲ್ಲದೇ ಭಾರತೀಯ ಶಿಕ್ಷಣ ಕೊಡಬೇಕು ಇಂತಹ ಶಿಕ್ಷಣ ಸಂಸ್ಥೆಗಳನ್ನು ಹುಟ್ಟಿಸಿ ಬೆಳೆಸಬೇಕು ಭಾವನೆಗಳೆಂಬುದಲ್ಲದೇ ಶಿಕ್ಷಣವೆಂಬುದರಲ್ಲಿ ಭಾರತೀಯತೆ ತರಬೇಕೆಂಬ ಭಾವನೆಯು ಅವರಲ್ಲಿತ್ತೆಂದು ಹೇಳಿದ ಕಿರಣ್‌ರಾಮ ಅವರು ಭಾರತ ಭಾರತಿ ಎಂಬ ಪುಸ್ತಕದಿಂದಲೇ ನಾನು ಓದಲು ಕಲಿತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಓದು ಎಂಬುದನ್ನು ಕಲಿಸಿಕೊಟ್ಟಿದ್ದೇನೆಂದು ತಮ್ಮ ಇಡೀ ಜೀವನದ ಇತಿಹಾಸವನ್ನು ಬಿಚ್ಚಿಟ್ಟ ಅವರು ಶಿಕ್ಷಣದಲ್ಲಿ ಓದು ಎಂಬುದನ್ನು ಅರ್ಥೈಸುವ ಕಾರ್ಯವಾಗಬೇಕು ತ್ಯಾಗ ಭಾವನೆ ಎಂಬುದು ಇರಬೇಕು ಇದು ಅಲ್ಲದೇ ಪ್ರೇರಣೆ ಕೊಡುವಂತಹ ಶಕ್ತಿಯಾಗಿ ನಿಲ್ಲಬೇಕೆಂದು ತಿಳಿದ ಅವರು ಜಯದೇವ ಅವರು ಬೈಠಕ್‌ದಲ್ಲಿ ಕುಳಿತಾಗ ಅಗತ್ಯವಾದ ವಿಷಯಗಳನ್ನು ಚರ್ಚೆಗಿಳಿದಾಗಿನ ಹಾಗೂ ವಿಜಯಪುರದ ಸಿದ್ದೇಶ್ವರ ಶ್ರೀಗಳ ಜಯದೇವರ ಅವಿನಾಭಾವ ಸಂಬಮದ ಹೇಗಿತ್ತೆಂಬುದರ ಕುರಿತು ಭಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಜೆಎಸ್‌ಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಕಾಂತ ಪತ್ತಾರ ಅವರು ಇತಿಹಾಸದ ಸೇರಗು ಎಂಬ ಎಸ್‌ಆರ್ ರಾಮಸ್ವಾಮಿ ಅವರ ಪರಮರ್ಷ ಪ್ರಭಂದ ಪುಸ್ತಕ ಕುರಿತು ಪರಿಚಯಿಸಿ ಮಾತನಾಡುತ್ತಿದ್ದ ಅವರು ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಚರಿತ್ರೆಗಳನ್ನು ಓದಬೇಕು ಹಾಗೂ ಅದ್ಯಯನ ಮಾಡಬೇಕೆಂದರು. ಇತಿಹಾಸವನ್ನು ಹೆಚ್ಚಿನ ಅಂಕಗಳಿಸುವದ್ದಕ್ಕಾಗಿ ಓದಿದ್ದೇನೆ ವಿದ್ವಾಂಸರು ಹೇಳಿದಂತೆ ಸಮಗ್ರ ಜೀವನ ಮೌಲ್ಯಗಳನ್ನು ರೂಡಿಸಿಕೊಳ್ಳಲು ಮುಂದಾಗುವದೇ ಇತಿಹಾಸವಾಗಿದೆ ಅಂತಹದನ್ನು ರಾಮಸ್ವಾಮಿ ಅವರು ಬರೆದಿದ್ದಾರೆಂದರು. ಅವರು ಬರೆದ ಪುಸ್ತಕಗಳಲ್ಲಿ ಇತಿಹಾಸ ಬಡೆದೆಬ್ಬಿಸುವಂತಹದ್ದಾಗಿದೆ ಡಿವ್ಹಿಜಿ ಅವರ ಭಾಗದಲ್ಲಿ ಬೆಳಗಿ ಅವರ ವ್ಯಕ್ತಿತ್ವ ದ್ಯಾನವನ್ನು ರಾಷ್ಟ್ರೀಯ ವಿಚಾರಗಳನ್ನು ರೂಪಿಸಿಕೊಂಡು ಪುಸ್ತಕ ಬರೆದು ನಾಡಿಗೆ ಅರ್ಪಿಸಿರುವವರು ರಾಮಸ್ವಾಮಿ ಎಂದರು. ಅವರು ಬರೆದ ದೃಷ್ಠಿಕೋನದ ಪುಸ್ತಕ ಇತಿಹಾಸ ಸೇರಗು ಎಂಬುದನ್ನು ಬರೆದಿದ್ದಾರೆ ಆದರೆ ನಾವು ಭಾರತಕ್ಕೆ ಆಗಮಿಸಿದವರನ್ನು ಬರೆದಿದ್ದೇವೆ ಆದರೆ ಆಗಮಿಸಿದವರು ನಿರ್ಗಮಿಸಿದ್ದನ್ನು ಬರೆದಿದ್ದಿಲ್ಲಾ ನಾವು ನಮ್ಮ ಭವಿಷ್ಯ ಶಕ್ತಿಯನ್ನು ತುಂಬುವಂತಾಗಬೇಕು ಪರಕೀಯರ ದಾಳಿಯನ್ನು ಚಿತ್ರಿಸಿರುವ ಇತಿಹಾಸದಿಂದಲೇ ನಾವು ಕಲಿತಿದ್ದೇವೆ ನಮ್ಮ ಮನೆತನದ ನಮ್ಮ ಇತಿಹಾಸದ ಮಹಾತ್ಮರ ನೆನಪಿನದ್ದನ್ನು ಎದ್ದು ನಿಲ್ಲಿಸುವಂತಾಗಬೇಕೆಂದು ಬಿಡುಗಡೆಯಾದ ಇತಿಹಾಸ ಸೇರಗು ಪುಸ್ತಕದಲ್ಲಿ ಆಂಗ್ಲರ ಗರ್ವಭಂಗ, ಚಾಣಕ್ಯ ಮತ್ತು ಅರ್ಥಶಾಸ್ತ್ರ, ಕ್ಷಾಂತ್ರ ಪ್ರವೃತ್ತಿಯ ಅನಿವಾರ್ಯತೆ ಕುರಿತು ಹಾಗೂ ಕೃಷ್ಣದೇವರಾಯರ ಆಳ್ವಿಕೆಯಲ್ಲಿಯ ಕೆಲವು ವಿಷಯಗಳನ್ನು ಪರಮಾರ್ಷ ಪ್ರಭಂದಗಳ ಕುರಿತು ಸಂಕ್ಷೀಪ್ತವಾಗಿ ಶ್ರೀಕಾಂತ ಅವರು ಪ್ರಶಿಕ್ಷಣಾರ್ಥಿಗಳ ಮುಂದೆ ವಿವರಿಸಿದರು.
ಇನ್ನೋರ್ವ ಉಪಸ್ಥಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿದಂಬರ ಕರಮರಕರ ಹಾಗೂ ರಾಷ್ಟ್ರೋತ್ತಾನ ಬಳಗದ ಜಿಲ್ಲಾ ಸಂಚಾಲಕ ಸಂಗಮೇಶ ಪಾಲ್ಕಿ ಅವರು ರಾಷ್ಟ್ರೋತ್ತಾನ ಪರಿಷತ್ ಸ್ಥಾಪನೆಯಾಗಿದ್ದರ ಕುರಿತು ತಮ್ಮ ಪ್ರಾಸ್ಥಾವಿಕ ನುಡಿಗಳಲ್ಲಿ ವಿವರಿಸಿ ಉಪಸ್ಥಿತ ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಭಾರತಮಾತೆಯ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಅತಿಥಿ ಮಹೋದಯರು ಹಾಗೂ ಶಿಕ್ಷಕ ವೃಂದದವರು ಪುಷ್ಪಾರ್ಚನೆಗೈಯುವ ಮೂಲಕ ಎರಡೂ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ವೇದಿಕೆಯ ಮೇಲೆ ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆರ್.ಎಂ.ಭಂಟನೂರ, ರಾಷ್ಟ್ರೋತ್ತಾನ ಬಳಗದ ಜಿಲ್ಲಾ ಸಂಯೋಜಕರಾದ ಲಿಂಗರಾಜ ಮನಗೂಳಿ, ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಸಂಸ್ಥಾಪಕರು, ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಕುಮಾರಿ ಮಧು ನಾಡಗೌಡ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ರೂಪಾ ಕಾಂಖಡ್ಕಿ ನಿರೂಪಿಸಿದರು. ಶಿವಾನಂದ ಉಪ್ಪಾರ ವಂದಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
