Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಜಪೂತ ಸಮೂದಾಯಗಳ ಅಭಿವೃದ್ದಿ ನಿಗಮ ಸ್ಥಾಪಿಸಲು ಮನವಿ

ತಾಳಿಕೋಟೆ,   ಕರ್ನಾಟಕ ಸರ್ಕಾರವು ರಜಪೂತ ಸಮೂದಾಯಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗಾಗಿ ಅಭಿವೃದ್ದಿ ನಿಗಮ ನಿ,ವನ್ನು ಸ್ಥಾಪಿಸಿ ಸಮಾಜ ಬಾಂದವರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ತಾಳಿಕೋಟೆಯ ರಜಪೂತ ಸಮಾಜದ ಕ್ಷೇಮಾಭಿವೃದ್ದಿ ಸಂಘ ರಾಜ್ಯ ಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರರಂದು ತಹಶಿಲ್ದಾರರ ಮುಖಾಂತರ ರವಾನಿಸಿದೆ.
ಕರ್ನಾಟಕ ರಜಪೂತ ಸಮೂದಾಯಗಳ ಅಭಿವೃದ್ದಿ ನಿಗಮ ನಿ,ವನ್ನು ಸ್ಥಾಪಿಸಿದಲ್ಲಿ ಆರ್ಥಿಕವಾಗಿ ಸಮೂದಾಯದವರನ್ನು ಸ್ವಾವಲಂಬಿಗಳನ್ನಾಗಿಸಲು ಅನುಕೂಲವಾಗಲಿದೆ ಇದು ಅಲ್ಲದೇ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ ನಿಟ್ಟಿನಲ್ಲಿ ಸಮೂದಾಯ ಉದ್ದೇಶವನ್ನು ಹೊಂದುವ ಕುರಿತು ಹಾಗೂ ಸಮಾಜದ ಸರ್ವತೋನ್ಮುಖ ಅಭಿವೃದ್ದಿಗಾಗಿ ಶ್ರಮಿಸುವ ಕುರಿತು ನಿಗಮ ಸ್ಥಾಪನೆಯು ಅಗತ್ಯವಾಗಿದೆ ಎಂದು ರಜಪೂತ ಸಮಾಜದ ಕ್ಷೇಮಾಭಿವೃದ್ದಿ ಸಂಘ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ನಮೂದಿಸಿದೆ.
ಈ ವಿಷಯ ಕುರಿತು ರಜಪೂತ ಸಮಾಜ ಕ್ಷೇಮಾಭಿವೃದ್ದಿ ಸಂಘ ಸಮಾಜಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸುವ ಮೂಲಕ ರಜಪೂತ ಸಮಾಜದ ಮಹಾ ರಾಣಾಪ್ರತಾಪಸಿಂಹ ಸರ್ಕಲ್‌ದಿಂದ ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕಾ ತಹಶಿಲ್ದಾರ ಕಚೇರಿಗೆ ತೆರಳಿ ಸಮಾಜದ ಎಲ್ಲ ಪದಾಧಿಕಾರಿಗಳು ಸದಸ್ಯರನ್ನೊಳಗೊಂಡು ಉಪಸ್ಥಿತ ಶಿರಸ್ಥದಾರರಿಗೆ ಮನವಿ ಸಲ್ಲಿಸಿ ಕೂಡಲೇ ಮನವಿಯನ್ನು ಗೌರವಾನ್ವಿತ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ರಜಪೂತ ಸಮಾಜದ ಯುವ ಮುಖಂಡ ವಿಜಯಸಿಂಗ್ ಹಜೇರಿ ಅವರು ಮಾತನಾಡಿ ಈಗಾಗಲೇ ರಜಪೂತ ಸಮಾಜ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೊಂದಣಿಯ ಪ್ರಕ್ರೀಯೇಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಸಮಗ್ರ ದತ್ತಾಂಶಗಳ ಡಾಟಾ ವರದಿಯು ಬೆಂಗಳೂರಿನಲ್ಲಿರುವ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ ಈ ಮಹತ್ವದ ಅಭಿಮಾನದ ಮೂಲಕ ಇಡೀ ರಾಜ್ಯದ ರಜಪೂತ ಸಮಾಜದ ಜನರು ಒಗ್ಗಟ್ಟಾಗುತ್ತಿದ್ದಾರೆ ಕಲ್ಬುರ್ಗಿ ಜಿಲ್ಲೆಯಲ್ಲಿ ಆರಂಭವಾಗಿರುವ ಈ ಪ್ರಕ್ರೀಯೇಗೆ ಪೂರಕವಾಗಿ ತಾಳಿಕೊಟೆ ತಾಲೂಕಿನ ರಜಪೂತ ಸಮಾಜ ಬಾಂದವರು ದ್ವನಿಗುಡಿಸುತ್ತಿದ್ದೇವೆ ಕಾರಣ ನಮ್ಮ ಸಮಾಜದ ಸಮಗ್ರ ಅಭಿವೃದ್ದಿಗಾಗಿ ರಜಪೂತ ಸಮಾಜದ ಅಭಿವೃದ್ದಿ ನಿಗಮ ಮಂಡಳಿಯನ್ನು ತಕ್ಷಣವೇ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹಿಂದೂಳಿದ ವರ್ಗದ ಕಲ್ಯಾಣ ಇಲಾಖೆಯ ಸಚೀವರಿಗೆ ಹಿಂದುಳಿದ ವರ್ಗದ ಆಯೋಗಕ್ಕೆ ಕೂಡಲೇ ತಾಲೂಕಾ ಆಡಳಿತದ ಪರವಾಗಿ ಈ ಶಿಪಾರಸ್ಸು ಪತ್ರವನ್ನು ಕೂಡಲೇ ಕಳುಹಿಸಿಕೊಡಬೇಕೆಂದು ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದಂತಹ ಮನವಿ ಪತ್ರವನ್ನು ಸಮಾಜದ ಎಲ್ಲರೂ ಒಗ್ಗೂಡಿ ಶಿರಸ್ಥದಾರರ ಮೂಲಕ ರವಾನಿಸಲಾಗಿದೆ ಎಂದರು.
ಮಹಾರಾಣಾಪ್ರತಾಪಸಿಂಹ್ ಸರ್ಕಲ್‌ದಿಂದ ಪ್ರತಿಭಟನೆ ನಡೆಸಿದ ಸಮಾಜ ಬಾಂದವರು ತಹಶಿಲ್ದಾರ ಕಚೇರಿಗೆ ಆಗಮಿಸಿ ತಹಶಿಲ್ದಾರ ಕಚೇರಿಯ ಶಿರಸ್ಥದಾರರಾದ ಎ.ಆರ್.ಚವ್ಹಾಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಜಪೂತ ಸಮಾಜದ ಅಧ್ಯಕ್ಷರಾದ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಶಿರಸಕುಮಾರ ಹಜೇರಿ, ರಗುರಾಮಸಿಂಗ್ ಹಜೇರಿ(ಶೇಠ), ನಾರಾಯಣಸಿಂಗ್ ಕೊಕಟನೂರ, ವಿಠ್ಠಲಸಿಂಗ್ ಬೇಕಿನಾಳ, ಗಂಗಾರಾಮಸಿಂಗ್ ಹಜೇರಿ, ಸುರೇಶ ಹಜೇರಿ, ವಿಠ್ಠಲ ಹಜೇರಿ, ದೀಲಿಪಸಿಂಗ್ ಹಜೇರಿ, ಅರುಣ ಧಡೇದ, ಮೋಹನಸಿಂಗ್ ರಜಪೂತ, ಗೋಪಾಲಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ರಾಜು ವಿಜಾಪೂರ, ಕೇಸರಸಿಂಗ್ ಹಜೇರಿ, ಕೇಸರಸಿಂಗ್ ದೇವಿ, ಗೋವಿಂದಸಿಂಗ್ ಮೂಲಿಮನಿ, ಭರತ ವಿಜಾಪೂರ, ನೀತಿನ ವಿಜಾಪೂರ, ರಾಘು ಹಜೇರಿ, ರಾಘು ದೇವಿ, ಚಂದು ರಜಪೂತ, ಸಿತಾರಾಮಸಿಂಗ್ ವಿಜಾಪೂರ, ಜೈಸಿಂಗ್ ಮೂಲಿಮನಿ, ವಿಶ್ವ ಚವ್ಹಾಣ, ರಾಕೇಶ ಹಜೇರಿ, ರಾಹುಲ್ ಮೂಲಿಮನಿ, ಸುನೀಲ್ ಮೂಲಿಮನಿ, ಆನಂದಸಿಂಗ್ ಹಜೇರಿ, ಭವನಸಿಂಗ್ ಹಜೇರಿ, ಅಶೋಕಸಿಂಗ್ ಹಜೇರಿ, ಮೊದಲಾದವರು ಉಪಸ್ಥಿತರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಜಪೂತ ಸಮೂದಾಯಗಳ ಅಭಿವೃದ್ದಿ ನಿಗಮ ಸ್ಥಾಪಿಸಲು ಮನವಿರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ಪೂರೈಕೆಯಾಗದ ವಿದ್ಯುತ್ : ಸುರೇಬಾನ ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆಸಂಸದ ಈರಣ್ಣ ಕಡಾಡಿ ಅವರ ನಿಧಿಯಿಂದ ಬಿ. ಕೆ. ಮಾಡೆಲ್ ಹೈಸ್ಕೂಲ್‌ಗೆ ಸ್ಮಾರ್ಟ್ ಬೋರ್ಡ್ ಕೊಡುಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಪದಗ್ರಹಣ ಇಂದುಖಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಶಾಸಕ ರಾಜು ಕಾಗೆ ಚಾಲನೆ ನೀಡಿದರು ಪವಾಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ, ಮೂರ್ತಿ ಮರುಸ್ಥಾಪನೆಗೆ ಕ್ರಮ ? ಶಾಸಕ ಸಿ.ಎಸ್. ನಾಡಗೌಡವಿದ್ಯುತ್ ಅವಘಡ ಗುತ್ತಿಗೆ ನೌಕರ ಸಾವು ಬ್ರಿಟೀಷ್ ಭಾರತದಲ್ಲಿ ಇಳಕಲ್ ಒಂದು ಆಡಳಿತ ಕೇಂದ್ರವಾಗಿತ್ತು  : ಡಾ. ಎಸ್.ಆರ್ ನಾಗಣ್ಣನವರ್ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು : ನ್ಯಾ.ಜಿ.ಎ. ಮೂಲಿಮನಿ ಮತದಾರರ ಪಟ್ಟಿ ಪರಿಷ್ಕರಣೆ: ಜು.೧೧ ಮತ್ತು ೧೨ ರಂದು ಜಿಲ್ಲೆಯಲ್ಲಿ ವಿಶೇಷ ಅಭಿಯಾನ