Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ"


ಇಂಡಿ,ಜು,೧೧  : ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ. ಆದರಿಸಿದೆ.ನಮ್ಮ ಕಣ್ಣಿನ ಕಾಣುವ ವಿಶಾಲವಾದ  ವಿಶ್ವವಾಗಲಿ ಅದರ ಸೌಂದರ್ಯವಾಗಲಿ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಒಂದು ಸುಂದರ ಹೂ ಅರಳುತ್ತದೆ. ಸುವಾಸ ಹರಡುತ್ತದೆ. ಒಂದು ದೀಪ ಉರಿಯುತ್ತದೆ. ಸುತ್ತಮುತ್ತೆಲ್ಲ ಬೆಳಕು ಚಲ್ಲುತ್ತದೆ. ಅರಳುವದು ಹೂವಿನ ಧರ್ಮ,ಬೆಳಗುವದು ದೀಪದ ಧರ್ಮ ಎಂದು ಸಂಸ್ಥಾನ ಗವಿಮಠ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾಹರೋಹಣ  ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು ಸ್ಟೀಲ ಬೆಳ್ಳಿ ಬಂಗಾರ ಪಾತ್ರೆಯಲ್ಲಿ  ರೋಟ್ಟಿ ಬಡಸಿದರೆ ರೊಟ್ಟಿ ಒಂದೇ ಎಂಬ ಭಾವವಿರಬೇಕು.ಬೆಳ್ಳಿ ಬಂಗಾರ ಕಡೆಗೆ ಲಕ್ಷ್ಯ ಇರಬಾರದು, ದೇವರು ಕೊಟ್ಟಿದ್ದು ಲಕ್ಷ ಇರಬೇಕು,ನಮ್ಮ ನೋಡುವ ದೃಷ್ಠಿಕೋನ ಬದಲಾಗಬೇಕು ಎಂದರು.
ಮೆಚ್ಚಿಗೆಯ ಮಾತು ಚುಚ್ಚು ಮಾತು, ನೋವು ನಲಿವು, ಕಷ್ಟ ಸುಖ,ಸೋಲು ಗೆಲವು ಬಡತನ ಶ್ರೀಮಂತಿಕೆ ಲಾಭ ಹಾನಿ ಮಧ್ಯೆ ಬದುಕಲು ಕಲಿಯಬೇಕು.ಕೆಲಸ ಮಾಡುವದು ಕಲಿಯಬೇಕು ಎಂದರು. ಆಕಾಸಕ್ಕೆ ಕಂಬಗಳಿಲ್ಲ,ತಾಯಿಯ ಹಾಲು ಅಮೃತಕ್ಕೆ ಸಮಾನ, ದೇಹಕ್ಕೆ ಒಂಬತ್ತು ರಂಧ್ರಗಳಿವೆ ಇವೆಲ್ಲ ದೇವರ ಕೊಟ್ಟ ಕೊಡುಗೆ.
ಪತ್ರಿ ಬಲ್ವಾರ್ಚನೆ ಗಿಡದಿಂದ ಬರುತ್ತವೆ,ಅನ್ನ ನೀರು ಭೂಮಿಯಿಂದ ಪಡೆಯುತ್ತೇವೆ, ಇದರಲ್ಲಿ ನಮ್ಮದೇನು ಇಲ್ಲ,ಅಭಿಷೇಕ ಮಾಡಿ ಸಂಪತ್ತು ಬೆಳ್ಳಿ ಬಂಗಾರ ವಸ್ತು ಮಕ್ಕಳು ವಡವೆ ಬೇಡುವ ಬದಲಾಗಿ ದೇವರು ಕೊಟ್ಟಿದ್ದಕ್ಕೆ ಧನ್ಯತಾ ಭಾವ ಇರಬೇಕು ಎಂದರು.
ಸಾಲೋಟಗಿ ಶ್ರೀ ಸಿದ್ದೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಹೂಗಳಲ್ಲಿ ಹತ್ತಿ ಹೂ ಶ್ರೇಷ್ಠ, ತಾಯಿಯ ಹಾಲು ಶ್ರೇಷ್ಠ, ಚುಕ್ಕೆಗಳಲ್ಲಿ ಬೆಳ್ಳಿ ಚುಕ್ಕೆ ಶ್ರೇಷ್ಠ , ಹಾಗೆಯೇ ಪ್ರಾಣಿಗಳಲ್ಲಿ ಮಾನವ ಜನ್ಮ ಶ್ರೇಷ್ಠ  ಅದರ ಸದುಪಯೋಗ ಪಡೆಯಬೇಕು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಮಾತನಾಡಿ ಈ ಜಗತ್ತಿನಲ್ಲಿ ಬಾಳಿ ಬದುಕಿದವರು ಋಷಿಮುನಿಗಳು ತತ್ವಜ್ಞಾನಿಗಳು ದಾರ್ಶನಿಕರು ದಾಸರು ಸಂತರು ಶರಣರು ಮಹಾಂತರು ಕಣ್ಣಿಗೆ ಕಾಣುವ ಈ ವಿಶಾಲವಾದ ವಿಶ್ವವು ದೇವನ ಅಭಿವ್ಯಕ್ತ ರೂಪವೆಂದರು.
 ಈರಣ್ಣ ಹುಣಸಗಿ, ಆನಂದ ಹುಣಸಗಿ, ಆನಂದ ಮೋರೆ, ಪ್ರಶಾಂತ ತಳವಾರ ಪ್ರಭು ಹ್ಯಾಳದ ಮಾತನಾಡಿದರು.
ವೇದಿಕೆಯ ಮೇಲೆ ವೀರಭದ್ರೇಶ್ವರ ದೇವಸ್ಥನ ಸಮಿತಿ ಅಧ್ಯಕ್ಷ ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಾ|| ಸುಶೀಲಕುಮಾರ ಹೂನಸಗಿ, ಬಾಬು ಸಾವಕಾರ ಮೇತ್ರಿ ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಮನವಿ"ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ"ಉತ್ಪಾದನೆಯಷ್ಟೇ ಬ್ರ್ಯಾಂಡಿಂಗ್, ಮಾರ್ಕೆಟಿಂಗ್‌ಗೂ ಮಹತ್ವ ನೀಡಿ: ಜಯಂತ ಹುಂಬರವಾಡಿವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಲಕ್ಷ್ಮಣ ಸವದಿವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಲಕ್ಷ್ಮಣ ಸವದಿಶಾಸಕ ಬಾಬಾಸಾಹೇಬ  ಪ್ರಯತ್ನದಿಂದ 110 ಕೆ ವಿ ವಿದ್ಯುತ್ ಸ್ಟೇಷನ್ ಮಂಜೂರು.ಪ್ರಿಸಿಷನ್ ಎಂಜಿನಿಯರಿಂಗ್ ಶ್ರೇಷ್ಠತಾ ಕೇಂದ್ರ ಉದ್ಘಾಟನೆ"ಜನರ ಧ್ವನಿಯಾಗಿ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ಸಂಗತಿ"ನಾಳೆ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಶಿಕ್ಷಣದಲ್ಲಿ ಭಾರತೀಯತೆಯನ್ನು ತರಬೇಕು-ಕಿರಣ್‌ರಾಮ