ನೇಸರಗಿ. ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಪ್ರಯತ್ನದಿಂದ ಕಿತ್ತೂರು ಕ್ಷೇತ್ರದ ತಿಗಡೊಳ್ಳಿ ಮತ್ತು ತುರಮರಿ ಗ್ರಾಮಗಳಿಗೆ 2x20 ಎಂ ವಿ ಎ 110/11 ಕೆ ವಿ ಮಟ್ಟದ ನೂತನ ಕೆ ಇ ಬಿ ಎರಡು ಉಪ ಸ್ಟೇಷನಗಳು ಮಂಜೂರು ಆಗಿದ್ದು ಈ ಭಾಗದ ಜನ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಸಕರ ನೇಗಿನಹಾಳ ಗ್ರಾಮದ ಗೃಹ ಕಚೇರಿಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಹೆಸ್ಕಾಂ ಅಧಿಕಾರಿಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಎ ಇ ಇ ಹಿರೇಮಠ, ಎಸ್ ಓ ಬಾಗಲಕೋಟ ಹಾಗೂ ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.
