ಅಥಣಿ: ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಅವರು ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ೧ ಕೋಟಿ ವೆಚ್ಚದಲ್ಲಿ ನದಿ ಇಂಗಳಗಾಂವ ಗ್ರಾಮದಿಂದ ವಾಯಾ ಮದನಟ್ಟಿ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಶಿವಯೋಗಿಗಳ ತಪೋವನದಲ್ಲಿ ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿದರು. ಇದೇ ವೇಳೆ ನಂದಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, "ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪವಾಗಿದೆ. ರಸ್ತೆ, ಕುಡಿಯುವ ನೀರು, ಸಮುದಾಯ ಭವನ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳಿಗೆ ಸ್ಪಂದಿಸಿ ಹಂತ ಹಂತವಾಗಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲು ಬದ್ಧನಾಗಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ," ಎಂದು ಹೇಳಿದರು.
ಈ ವೇಳೆ ಜಿ.ಪಂ. ಅಧಿಕಾರಿ ವೀರಣ್ಣಾ ವಾಲಿ, ಗುತ್ತಿಗೆದಾರ ಶಿವರುದ್ರ ಘೂಳಪ್ಪನವರ, ಈಶ್ವರ ಮುಜಗುಣಿ, ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ರಾಚಗೌಡರ, ಗುರಬಸು ತೆವರಮನಿ, ಅಪ್ಪಾಸಾಬ ಮದಬಾವಿ, ನಾಗರಾಜ ಘೂಳಪ್ಪನವರ, ಅಲಗೌಡ ಮುದಗೌಡರ,ಹಣಮಂತ ಸತಿಗೌಡರ,ಶಿವಪುತ್ರ ಗೂಳಪ್ಪನ್ನವರ,ಅಪ್ಪಸಾಬ ಠಕ್ಕಣ್ಣವರ ಮಹಾಂತೇಶ ಘೂಳಪ್ಪನವರ, ಮಹಾಂತೇಶ ಪಾಟೀಲ, ರವಿ ಸಂತಿ, ಶ್ರೀಶೈಲ ಹಲ್ಯಾಳ, ಮಲ್ಲಿಕಾರ್ಜುನ ಕುಳ್ಳೋಳಿ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಔಟಿe ಚಿಣಣಚಿಛಿhmeಟಿಣ
? Sಛಿಚಿಟಿಟಿeಜ bಥಿ ಉmಚಿiಟ
