Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಭ್ರಮದಿಂದ ಜರುಗಿದ ಶ್ರೀ ವಿಠ್ಠಲ ರುಕುಮಾಯಿ  ಮೂರ್ತಿ ಪ್ರತಿಷ್ಠಾಪನೆ.

ನೇಸರಗಿ.ಇಲ್ಲಿನ  ಪ್ರಸಿದ್ದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಶನಿವಾರ  ಮತ್ತು ರವಿವಾರದಂದು  ಎರಡು ದಿನಗಳ ಕಾಲ ಶ್ರೀ ವಿಠ್ಠಲ ರುಕುಮಾಯಿ  ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ, ಸಡಗರ, ಸಂಭ್ರಮದಿಂದ ಅನೇಕ ಸಾಧು ಸಂತರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು.
ದಿ.4 ರಂದು ಮದ್ಯಾಹ್ನ 3 ಘಂಟೆಗೆ ಹೊಸಟ್ಟಿ ಬಸವೇಶ್ವರ ದೇವಸ್ಥಾನದಿಂದ ವಿಠ್ಠಲ ರುಕುಮಾಯಿ  ಮೂರ್ತಿಗಳನ್ನು ಸಕಲ ವೇದ ಮೇಳ, ಗ್ರಾಮದ ಸುಮಂಗಲೆಯರಿಂದ ಕುಂಭ, ಆರತಿ,ಪರ ಊರಿನಿಂದ ಬಂದ ವಾರಕರಿ ಮಂಡಳಿಯವರ ತಾಳ,ಮೃದಂಗ,ಭಜನೆಗಳೊಂದಿಗೆ ಭವ್ಯ ಮೆರವಣಿಗೆ ಸಂಜೆ 6 ಘಂಟೆಗೆ ಅಜ್ಜನ ಮಠಕ್ಕೆ ಆಗಮಿಸಿ, ಪೂಜೆ, ಪುಣ್ಯಾರಾಧನೆ, ಸ್ಥಳ ಶುದ್ದಿ, ವಾಸ್ತು ಶಾಂತಿ, ರಾಪೋಸ್ನ  ಹೋಮ, ಅಧಿವಾಸ ಪೂಜೆ,ದಿಕ್ಪಾಲಕರ ಬಲಿ,ಹರಿಪಾಠ,ಪ್ರವಚನ ಕೀರ್ತನೆ,ಜಾಗರಣೆ,ಪುರೋಹಿತರಿಂದ ಮೂರ್ತಿಗಳಿಗೆ ಜಲಾಧಿವಾಸ,ಪುಷ್ಪದಿವಾಸ, ಧಾನ್ಯ ದಿವಾಸ ಕಾರ್ಯಕ್ರಮಗಳು ನೆರವೇರಿದವು.
     ರವಿವಾರ ದಿ.5 ರಂದು ಪುರೋಹಿತರ ಉಪಸ್ಥಿತಿಯಲ್ಲಿ  ಬೆಳಿಗ್ಗೆ 9-12 ರ ಶುಭ ಮಹೂರ್ಥದಲ್ಲಿ  ಅಭಿಷೇಕ್, ಕಾಕಡ ಆರತಿ,ಕಲಾವೃದ್ಧಿ ಹೋಮ, ಪಂಡರಾಪುರದ   ಶ್ರೀ ಹ ಬ ಕ ಕೌಸ್ಟುಭ ರಾಹು ವಿವೇಕಾನಂದ ದಾದಾ ವಾಸ್ಕರ  ಮಹಾರಾಜರ ಅಮೃತ ಹಸ್ತದಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ಸಕಲ ವಾರಕರಿ ಮಂಡಳಿಯೊಂದಿಗೆ ಅದ್ದೂರಿಯಾಗಿ ಜರುಗಿತು.  ಗ್ರಂಥಾರಾಜ ಜ್ಞಾನೇಶ್ವರ ಪಾರಾಯಣ 9  ಹಾಗೂ 12 ನೇ  ಅದ್ಯಾಯ , ಅನೇಕ ಶರಣರಿಂದ ಪ್ರವಚನ ನಂತರ ಮಹಾಪ್ರಸಾದ ಜರುಗಿದವು .
   ಕಾರ್ಯಕ್ರಮದಲ್ಲಿ ಹಣಬರಹಟ್ಟಿ ಹಿರೇಮಠದ ಷ ಬ್ರ. ಬಸವಲಿಂಗ ಶಿವಾಚಾರ್ಯರು, ದತ್ತವಾಡದ ಶ್ರೀ ಹೃಷಕೇಶಾನಂದ ಮಹಾರಾಜರು, ನೇಸರಗಿ ಮಲ್ಲಾಪೂರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ, ನೇಸರಗಿ ಗ್ರಾಮದ ಎಲ್ಲ ಮುಖಂಡರು, ಎಲ್ಲ ಸಮಾಜದ ಜನತೆ, ಸುತ್ತಮುತ್ತಲಿನ ಗ್ರಾಮಮಗಳ ಜನತೆ ಪಾಲ್ಗೊಂಡು ನೂತನವಾಗಿ ನಿರ್ಮಿಸಿದ ಶ್ರೀ ವಿಠ್ಠಲ ರುಕಮಾಯಿ ಮೂರ್ತಿ ಪ್ರತಿಷ್ಠಾಪನೆಗೆ ಮೆರಗು ತಂದು ಆಶೀರ್ವಾದ ಪಡೆದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ ೧೧ ರಂದು ರಾಮದುರ್ಗ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಧರಣಿ ಮಳೆರಾಯನ ಅನುಗ್ರಹಕ್ಕಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಹಡಪದ ಅಪ್ಪಣ್ಣ ಸಮುದಾಯ ಭವನ ಅಭಿವೃದ್ಧಿಗೆ ಚಾಲನೆ.ಪ್ರತಿಯೊಬ್ಬರೂ ಎಸ್‌ಐಆರ್ ಮಾಹಿತಿಗೆ ಸ್ಪಂದಿಸಿ: ಆರ್ ಬಿ ತಿಮ್ಮಾಪೂರ ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಆಸೀಫ್ ಸೇಠ್ವೈದ್ಯರು ರೋಗಿಗಳನ್ನು ದೇವರಂತೆ ಕಾಣಬೇಕು: ಡಾ. ಜಿ.ಎಸ್. ಗಲಗಲಿ  ಇಂದಿನ ತಂತ್ರಜ್ಞಾನ ಯುಗದಲ್ಲಿ ಜೀವನಕ್ಕೆ ಅಗತ್ಯ : ಜಿ.ಬಿ.ವಡವಡಗಿದೇವಸ್ಥಾನಗಳನ್ನು ಮರು ನಿರ್ಮಿಸಿ ಹಿಂದೂ ಧರ್ಮ ರಕ್ಷಿಸಿದ ರಾಜಮಾತೆ ಹೊಳಕರ : ಶ್ರೀಮಂತ ಮಹಾರಾಜ್ ಪುಸ್ತಕವಿತರಣೆಯಿಂದ ಬಡ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ- ಈರಣ್ಣ ಹಲಗತ್ತಿ