ಹನಗುಂದ: ಉತ್ತಮ ಮಳೆಯಾಗಲಿ, ರೈತರ ಬದುಕು ಹಸನಾಗಲಿ ಹಾಗೂ ನಾಡಿನಲ್ಲಿ ಸುಭಿಕ್ಷ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಹುನಗುಂದ ಪಟ್ಟಣ ಬಸವ ಮಂಟಪದಲ್ಲಿ ಮುತೈದೆಯರು ಹಗೂ ಸದ್ಭಕ್ತರಿಂದ ಸಂಪ್ರದಾಯಬದ್ಧವಾಗಿ ತುಂಬಿದ ಕೊಡ ಪೂಜೆ ನೆರವೇರಿಸಿದರು. ಗ್ರಾಮೀಣ ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕವಾಗಿರುವ ಈ ವಿಶೇ? ಪೂಜೆಯಲ್ಲಿ ಅನೇಕ ಮಹಿಳೆಯರು ಭಕ್ತಿಭಾವದಿಂದ ಪಾಲ್ಗೊಂಡು ಮಳೆರಾಯನ ಅನುಗ್ರಹಕ್ಕಾಗಿ ಪ್ರಾರ್ಥಿಸಿದರು.
ಪೂಜೆಯ ವಿಶೇ?ತೆಯಾಗಿ ನೀರಿನಿಂದ ತುಂಬಿದ ಕೊಡವನ್ನು ದೇವರ ಸನ್ನಿಧಿಂತೆ ಭೂತಾಯಿ ಶೃಂಗರಸಿ ಪ್ರತಿ?ಪಿಸಿ ಪೂಜಿಸಲಾಯಿತು. ಜನಪದ ನಂಬಿಕೆಯ ಪ್ರಕಾರ, ಪೂಜೆಯ ವೇಳೆ ತುಂಬಿದ ಕೊಡವು ತಾನಾಗಿಯೇ ನೀರನ್ನು ಹೊರಗೆ ಚಿಮ್ಮುವುದು ಹಾಗೂ ಬರಲಕ್ಕಿಯೊಂದಿಗೆ ಕೊಡವು ಹಗುರವಾಗಿ ಕೈಜೊತೆ ತಾನಾಗಿಯೇ ತಿರುಗುವುದು ಶುಭಸೂಚಕವೆಂದು ಭಾವಿಸಲಾಗುತ್ತದೆ. ಈ ಲಕ್ಷಣಗಳು ಗೋಚರಿಸಿದರೆ ಶೀಘ್ರದಲ್ಲೇ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇಂದಿಗೂ ಜೀವಂತವಾಗಿದೆ.
ಈ ಸಂದರ್ಭದಲ್ಲಿ ಮಹಿಳೆಯರು ಮಳೆಗಾಗಿ ವಿಶೇ? ಪ್ರಾರ್ಥನೆ ಸಲ್ಲಿಸಿ, ರೈತರು ಉತ್ತಮ ಬೆಳೆ ಪಡೆಯುವಂತಾಗಲಿ, ಕೆರೆ-ಕಟ್ಟೆಗಳು ತುಂಬಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ದೇವರಲ್ಲಿ ಬೇಡಿಕೊಂಡರು. ಪೂಜೆಯಲ್ಲಿ ಭಕ್ತಿ, ಸಂಪ್ರದಾಯ ಮತ್ತು ಜನಪದ ಆಚರಣೆಗಳು ಒಂದಾಗಿ ಕಾಣಿಸಿಕೊಂಡು ಗಮನ ಸೆಳೆದವು.
ಪೂಜೆ ಬಳಿಕ ಭಕ್ತರಿಗೆ ಸಂಪ್ರದಾಯಬದ್ಧವಾಗಿ ಸಂಗಟಿ?ಸಾರು ಪ್ರಸಾದ ವಿತರಿಸಲಾಯಿತು. ಗ್ರಾಮಸ್ಥರು ಹಾಗೂ ಭಕ್ತರು ಪ್ರಸಾದ ಸ್ವೀಕರಿಸಿ ಮಳೆರಾಯನ ಕೃಪೆ ಶೀಘ್ರದಲ್ಲೇ ಲಭಿಸಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಮಂಜಮ್ಮ ಪಲ್ಲೇದ, ಮಹಾಂತವ್ವ ಕಡಪಟ್ಟಿ, ಸಂಗಮ್ಮ ಪಲ್ಲೇದ, ಸುವರ್ಣ ಪಲ್ಲೇದ, ಗುಂಡವ್ವ ಮೇಳಿ, ಗೌರಮ್ಮ ಮೇಳಿ, ಪಾರಮ್ಮ ಕಡಪಟ್ಟಿ, ಸಂಗಪ್ಪ ಕಡಪಟ್ಟಿ, ಈರಪ್ಪ ಮೇಳಿ, ಪರಸಪ್ಪ ಪಲ್ಲೇದ, ಮಲ್ಲಪ್ಪ ಪಲ್ಲೇದ, ಶೇಖಪ್ಪ ಹೊಸೂರ, ಮುತ್ತಣ್ಣ ಲೋಕಾಪೂರ, ಸಂಗಮೇಶ ಭದ್ರಣ್ಣವರ, ಮಲ್ಲಪ್ಪ ಕಡಪಟ್ಟಿ, ಮಹಾಂತೇಶ ಹೊದ್ಲೂರ, ಮುತ್ತಪ್ಪ ಭಾವಿಕಟ್ಟಿ, ಮಹಾಂತೇಶ ದರಗಾದ ಮಹಾಂತೇಶ ಪಲ್ಲೇದ ಮತ್ತು ಶ್ರೀಶೈಲ ಪಾದಯಾತ್ರಾ ಸೇವಾ ಸಮೀತಿ ಅಧ್ಯಕ್ಷ ವೀರೇಶ ಕುರ್ತಕೋಟಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು, ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.
ಮಳೆಗಾಗಿ ನಡೆಸುವ ಇಂತಹ ಜನಪದ ಆಚರಣೆಗಳು ಗ್ರಾಮೀಣ ಸಂಸ್ಕೃತಿಯ ವೈಶಿ?ವನ್ನು ಪ್ರತಿಬಿಂಬಿಸುತ್ತಿದ್ದು, ಪ್ರಕೃತಿಯೊಂದಿಗೆ ಮಾನವನ ಅವಿನಾಭಾವ ಸಂಬಂಧವನ್ನು ನೆನಪಿಸುವ ಕಾರ್ಯವಾಗಿವೆ. ಮಳೆರಾಯ ಶೀಘ್ರ ಕರುಣೆ ತೋರಿ ರೈತರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿತ್ತು.
