LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಧಾರವಾಡದಲ್ಲಿ ಮೌನೇಶ್ವರ ಸ್ವಾಗತ ಕಮಾನು ಉದ್ಘಾಟನೆ 

ಧಾರವಾಡ ಜೂನ್ ,30 : ಇಲ್ಲಿಯ ಕಸಬಾ ಗಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ 17 ಲಕ್ಷ ರೂಪಾಯಿ ವೆಚ್ಚದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಸ್ವಾಗತ ಕಮಾನನ್ನು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರೂ , ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಅರವಿಂದ ಬೆಲ್ಲದ ಅವರು ಉದ್ಘಾಟಿಸಿದರು.
ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ ಅವರು ಮಹಾಪೌರರಾಗಿದ್ದ ಸಂದರ್ಭದಲ್ಲಿ ನೀಡಿದ 12 ಲಕ್ಷ ರೂ. ಹಾಗೂ ಧಾರವಾಡದ ಪಾಲಿಕೆ ಸದಸ್ಯೆ ಶ್ರೀಮತಿ ರತ್ನಾಬಾಯಿ ನಾಜರೆ ಅವರ 5 ಲಕ್ಷ ರೂ.ಗಳ ಅನುದಾನದಲ್ಲಿ ಈ ಸ್ವಾಗತ ಕಮಾನನ್ನು ನಿರ್ಮಿಸಲಾಗಿದೆ. ಸ್ವಾಗತ ಕಮಾನು ಉದ್ಘಾಟಿಸಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು," ಶ್ರೀ ಮೌನೇಶ್ವರ ದೇವಸ್ಥಾನದ ಗೋಪುರ ಹಾಗೂ ದೇವಸ್ಥಾನದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಮ್ಮ ಶಾಸಕರ ನಿಧಿಯಿಂದ 10 ಲಕ್ಷ ರೂಗಳನ್ನು ಮಂಜೂರು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು .
ಮಾಜಿ ಮಹಾ ಪೌರರು ಹಾಗೂ ಹಾಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆಯ ಅಧ್ಯಕ್ಷ ಮಹಾರುದ್ರ ಬಡಿಗೇರ, ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ ನ ಅಧ್ಯಕ್ಷ ಜಿ.ಎಸ್. ಪಟ್ಟಣಕೋಡಿ, ಗಾಯಿತ್ರಿ ಮಾತಾ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಸರೋಜಾ ಬಡಿಗೇರ, ವಿಶ್ವಕರ್ಮ ಸಮಾಜದ ಗಣ್ಯರಾದ  ನಿರಂಜನ ಬಡಿಗೇರ, ಆರ್.ಸಿ.ನೇಗಿನಾಳ, ಸಂತೋಷ ಬಡಿಗೇರ, ವಿ.ಎಮ್ ಕಿಲ್ಲೆದ,ಡಾll ವಿರೂಪಾಕ್ಷ ಬಡಿಗೇರ, ಸಿಪಿ ಮಾಯಾಚಾರಿ, ರಮೇಶ ಬಡಿಗೇರ, ಸೋಮಶೇಖರ ಅರ್ಕಸಾಲಿ , ಶ್ರೀಮತಿ ಶೋಭಾ ಪತ್ತಾರ ಮತ್ತು ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಮತ್ತು ಹುಬ್ಬಳ್ಳಿ ಮತ್ತು ಧಾರವಾಡ ನಗರದ  ಹಲವಾರು ಗಣ್ಯರು ಪಾಲ್ಗೊಂಡಿದ್ದರು.
.....................................................

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡೋರಿ ಗ್ರಾಮಕ್ಕೆ ಜಿಲ್ಲಾಧಿಕಾರಿ- ಸ್ನೇಹಲ್ ಆರ್. ಭೇಟಿ  ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ಮಾತು ಮನೆ ಕಟ್ಟುತ್ತದೆ, ಮಾತೇ ಮನೆಯನ್ನು ಕೆಡಿಸುತ್ತದೆ - ಶಿದ್ದಲಿಂಗಶ್ರೀ*ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ದತ್ತಾ ವಾಸ್ಟರ್ ಅವಿರೋಧವಾಗಿ ಆಯ್ಕೆ*ಪ್ರಾಮಾಣಿಕತೆ ಇದ್ದಲ್ಲಿ ಲಾಭ ಹೆಚ್ಚಿರುತ್ತದೆ - ಗುರುಪಾದ ಶ್ರೀಭಾಜಪ ಜಿಲ್ಲಾಧ್ಯಕ್ಷ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ