Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಂಥಾಲಯ ಸಂಘದ ಚಟುವಟಿಕೆ ವಿಸ್ತರಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಿ

ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಾ.ಎಸ್.ಎಲ್.ಕಾಡದೇವರಮಠ ಸಲಹೆ

ಹಸಿರು ಕ್ರಾಂತಿ ವರದಿ ಬೆಳಗಾವಿ

ಗ್ರಂಥಾಲಯ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಹೇಳಿದರು.

ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ) ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓದುವ ಹವ್ಯಾಸ ಹಾಗೂ ಆಸಕ್ತಿಗಳನ್ನು ಹೆಚ್ಚಿಸುವಂತ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಓದಿಸುವ ಪ್ರವೃತ್ತಿ ಹೆಚ್ಚಾಗಬೇಕು ಎಂದು ಸಲಹೆ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Advertisement

ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಪ್ರೊ.ಪಿ.ವಿ.ಕೊಣ್ಣೂರ ಮಾತನಾಡಿ, ಗ್ರಂಥಾಲಯ ಚಳುವಳಿಯ ಮಹತ್ವ ಮತ್ತು ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಜವಾಬ್ದಾರಿಯ ಬಗ್ಗೆ ವಿವರಿಸಿದರು.

ಕಲಾ ಉಪಾಧ್ಯಕ್ಷ ಹಾಗೂ ಬೆಂಗಳೂರಿನ ಐಆರ್‌ಸಿ ಟಿಸಿಎಸ್‌ನ ಪ್ರಾದೇಶಿಕ ಮುಖ್ಯಸ್ಥ ಡಾ.ನಾಗಪ್ಪ ಬಕ್ಕಣ್ಣನವರ ನೂತನ ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿ ಮತ್ತು ಉದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಬೋಧಿಸಿದರು.

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಬೆಳಗಾವಿ ಜಿಲ್ಲಾ ಘಟಕದ ಸಲಹೆಗಾರ ಡಾ.ಕಿರಣ್ ಪಿ.ಸವನೂರ ಹಾಗೂ ಬೆಳಗಾವಿ ಜಿಲ್ಲಾ ಗ್ರಂಥಾಲಯ ಅಧಿಕಾರಿ ರಾಮಯ್ಯ ಉಪಸ್ಥಿತರಿದ್ದರು.

ಡಾ.ರಾಜು ಗಡದ ಮತ್ತು ಡಾ.ಅಶ್ವಿನಿ ಲಟ್ಟೆ ಕಾರ್ಯಕ್ರಮ ನಿರೂಪಿಸಿದರು. ಡಾ.ಕಿರಣ ಮಾಳವಡೆ ವಂದಿಸಿದರು. ಜಿಲ್ಲೆಯಾದ್ಯಂತ ಗ್ರಂಥಾಲಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಕ್ತ ಚರ್ಚೆ, ಅಮೂಲ್ಯ ಸಲಹೆ ನೀಡಿದ ಗ್ರಂಥಾಲಯ ವೃತ್ತಿಪರರು

ಈ ಸಂದರ್ಭದಲ್ಲಿ ಸದಸ್ಯರು ಸಂಘದ ಮುಂದಿನ ಕಾರ್ಯಯೋಜನೆ, ಸದಸ್ಯತ್ವ ವೃದ್ಧಿ, ಗ್ರಂಥಾಲಯ ವೃತ್ತಿಪರರ ಕೌಶಲ್ಯಾಭಿವೃದ್ಧಿ, ಸರ್ಕಾರ ಮಟ್ಟದ ನೇಮಕಾತಿ, ತರಬೇತಿ ಕಾರ್ಯಾಗಾರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳ ಆಯೋಜನೆ, ಡಿಜಿಟಲ್ ಗ್ರಂಥಾಲಯ ಸೇವೆಗಳ ವಿಸ್ತರಣೆ ಹಾಗೂ ಜಿಲ್ಲೆಯ ಎಲ್ಲ ಗ್ರಂಥಾಲಯಗಳ ನಡುವೆ ಸಮನ್ವಯ ಮತ್ತು ಸಹಕಾರ ಬಲಪಡಿಸುವ ಕುರಿತು ನಡೆದ ಚರ್ಚೆಗೆ ಪದಾಧಿಕಾರಿಗಳು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.

ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳು

ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಡಾ.ಭರತ್ ಬಿ.ಅಲಸಂಡಿ, ಉಪಾಧ್ಯಕ್ಷರಾದ ರವಿ ಡಿ.ಶಿವಣಾಯ್ಕರ ಮತ್ತು ಡಾ.ರಮೇಶ ಬಿ.ಕುರಿ, ಪ್ರಧಾನ ಕಾರ್ಯದರ್ಶಿ ಡಾ.ಕಿರಣ ಮಾಳವಡೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಇಚಲಕರಂಜಿ ಹಾಗೂ ಖಜಾಂಚಿ ಡಾ.ಸುಮನ್ ಮುದ್ದಾಪುರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ರಾಮಯ್ಯ, ಡಾ.ವೇಣುಗೋಪಾಲ ಹಜ್ಜಿ, ಡಾ.ಅಶ್ವಿನಿ ಲಟ್ಟೆ, ನಳಿನಿ ಅಂಬಲಿ, ಡಾ.ತಾಯಪ್ಪ ಅದಿನ್, ರಮೇಶ ಶಿರೋಟೆ, ಸುಪ್ರೀತ್ ಸಾಕತ್, ಡಾ.ರಾಜು ಗದಗ ಮತ್ತು ಮಹೇಶ ದೊಡ್ಡಲಕ್ಕಣ್ಣವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ನೋಂದಣಿಯಾದ ರಾಜ್ಯಮಟ್ಟದ ಸಂಘಟನೆಯಾಗಿದ್ದು, ಗ್ರಂಥಾಲಯಗಳು, ಗ್ರಂಥಪಾಲಕರ ಮತ್ತು ಗ್ರಂಥಾಲಯ ಮಾಹಿತಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

-ಡಾ.ಎಸ್.ಎಲ್.ಕಾಡದೇವರಮಠ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ಬೆಂಗಳೂರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೈಜ ದೇವರ ಕೆಲಸ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌ಗ್ರಂಥಾಲಯ ಸಂಘದ ಚಟುವಟಿಕೆ ವಿಸ್ತರಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಿನಾಲತವಾಡ ಸಮುದಾಯ ಆಸ್ಪತ್ರೆಯಲ್ಲಿ ಕಿರುಕುಳ ಆರೋಪ: ಹೊರಗುತ್ತಿಗೆ ಸಿಬ್ಬಂದಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ, ಪ್ರತಿಭಟನೆಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ ನಮೂನೆ ವಿತರಿಸಿದ ಡಿಸಿಕಾರ್ಮಿಕರು ಕೈಜೋಡಿಸಿದರೆ 4 ಲಕ್ಷ ಟನ್ ಕಬ್ಬು ನುರಿಸುವ  ಗುರಿ : ಚನ್ನರಾಜ ಹಟ್ಟಿಹೊಳಿಇಂದಿನಿಂದ ಬೂತ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ಸಂಚಾರ ಸುರಕ್ಷತೆ : ಕ್ರ್ಯಾಶ್ ಬಾರಿಯರ್ ದುರಸ್ತಿಧಾರವಾಡದಲ್ಲಿ ಮೌನೇಶ್ವರ ಸ್ವಾಗತ ಕಮಾನು ಉದ್ಘಾಟನೆ ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ : ಪಿ ಎಸ್ ಇ ರಾಘವೇಂದ್ರ ಖೋತಧರ್ಮದಿಯಾ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಕಿಟ್ ವಿತರಣೆ