LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನೈಜ ದೇವರ ಕೆಲಸ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌

ಹಸಿರು ಕ್ರಾಂತಿ ವರದಿ ಬೆಳಗಾವಿ

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನ ಕಾರ್ಯವು ನಿಜವಾದ ದೇವರ ಕೆಲಸವಾಗಿದ್ದು, ಅಂತ ಕಾರ್ಯ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌ ಕಾರ್ಯ ದೇವರ ಮೆಚ್ಚುಗೆ ಪಾತ್ರವಾಗಿದೆ ಎಂದು ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ನಾರಾಯಣ ಭರಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಆಯುಕ್ತರ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ 20 ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡುವ ವಿದ್ಯಾರ್ಥಿವೇತನ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನವು ಅನೇಕ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಜಿಲ್ಲಾಡಳಿತ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಕ್ರೆಡಿಟ್‌ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸೌಲಭ್ಯಗಳ ಕೊರತೆ ನಡುವೆಯೂ ಈ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿರುವುದು ಇತರರಿಗೆ ಮಾದರಿ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ನ ಬೆಳಗಾವಿ ವಲಯ ವ್ಯವಸ್ಥಾಪಕ ಎಸ್‌.ಎನ್‌.ರವಿ, ಬೆಳಗಾವಿ ವಿಭಾಗದ ಮುಖ್ಯಸ್ಥ ಮಾದೇಗೌಡ.ಸಿ, ವಲಯ ಆಡಿಟ್ ಲೀಡರ್ ಸಂಗನಬಸಯ್ಯ ಜಿ.ಹಿರೇಮಠ, ಬೆಳಗಾವಿ ವಲಯ ವ್ಯವಸ್ಥಾಪಕ ಸಂತೋಷ.ಬಿ.ಮಲ್ಲಗೊಂಡರ ಸೇರಿದಂತೆ ಶಾಲೆಯ ವಿದ್ಯಾರ್ಥಿಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

 

ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಡಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌ನ ಇಂತಹ ಕಾರ್ಯ ಮಾಡುತ್ತಿರುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಲಿದೆ. ಇದೇ ರೀತಿ ಸಾಮಾಜಿಕ ಕಾಳಜಿಯುಳ್ಳ ಕಾರ್ಯಗಳನ್ನು ಮಾಡುವ ಮೂಲಕ ಅಭಿವೃದ್ಧಿಗೆ ನಿಮ್ಮದೇ ಕೊಡುಗೆ ನೀಡಲೆಂದು ಶುಭ ಹಾರೈಸುತ್ತೇನೆ.

-ನಾರಾಯಣ ಭರಮನಿ, ಡಿಸಿಪಿ.

ಗ್ರಾಮೀಣ ಕ್ರೆಡಿಟ್‌ ಇದು ಆರ್‌ಬಿಐ ದಿಂದ ನೋಂದಣಿಯಾಗಿರುವ ಮೈಕ್ರೋ ಫೈನಾನ್ಸ್‌. ಇದು ಕಳೆದ 26 ವರ್ಷಗಳಿಂದ ಬಡ ಕುಟುಂಬಗಳಿಗೆ ಸೌಲಭ್ಯಗಳನ್ನು ಒದಗಿಸುತ್ತ ಬಂದಿದ್ದು, 16 ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. 20 ಸಾವಿರಕ್ಕೂ ಅಧಿಕ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿದೆ. ಇದರ ಜೊತೆಗೆ ಅನೇಕ ಅಂಗನವಾಡಿ ಮಕ್ಕಳಿಗೆ ಮೂಲಸೌಕರ್ಯಗಳಾದ ಸಣ್ಣ ಖುರ್ಚಿ, ಜಮಖಾನ್‌, ದೊಡ್ಡ ಖುರ್ಚಿ, ಪೊಲೀಸ್‌ ಸ್ಷೇಷನ್‌ಗಳಿಗೆ ಬ್ಯಾರಿಕೇಡ್‌, ಬಡ ಪ್ರತಿಭಾವಂತ ಹೆಣ್ಮಕ್ಕಳಿಗೆ ಸ್ಕಾಲರ್‌ಸಿಪ್‌, ಶಾಲೆಗೆ ಡೆಸ್ಕ್‌ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಪಿಟೋಪಕರಣಗಳನ್ನು ಒದಗಿಸಿದ್ದೇವೆ.

-ಎಸ್‌.ಎನ್‌.ರವಿ, ಬೆಳಗಾವಿ ವಲಯ ವ್ಯವಸ್ಥಾಪಕರು, ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ ಬೆಳಗಾವಿ.

ಸುಮಾರು 26 ವರ್ಷಗಳಿಂದ ಸಾಮಾಜಿಕ ಕಾಳಜಿ ವಹಿಸುತ್ತಿರುವ ನಮ್ಮ ಸಂಸ್ಥೆ ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ಹಾಗೂ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಸಹಾಯ, ಸಹಕಾರ ನೀಡುವ ಮೂಲಕ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಾಧನೆಗೆ ಕೈ ಜೋಡಿಸಿದ್ದೇವೆ.

-ಮಾದೇಗೌಡ.ಸಿ, ಬೆಳಗಾವಿ ವಿಭಾಗೀಯ ವ್ಯವಸ್ಥಾಪಕರು, ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ ಬೆಳಗಾವಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ