Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ ನಮೂನೆ ವಿತರಿಸಿದ ಡಿಸಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಾರಂಭ

ಬಾಗಲಕೋಟೆ, ಜೂನ್ ೨೯ : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರು ನವನಗರದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ಮಂಗಳವಾರ ವಿತರಣೆ ಮಾಡಿದರು.
ನವನಗರದ ಸೆಕ್ಟರ ನಂ.೩೩ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಷ್ಕೃತ ವೆಂಕಣ್ಣ ಸುಗತೇಕರ ಮನೆ ಸೇರಿದಂತೆ ಇತರೆ ಮನೆಗಳಿಗ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ವಿಗತರಣೆ ಮಾಡಿದರು. ಈ ವೇಳೆ ಮತದಾರರಿಗೆ ಫಾರಂ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಿದರು. ನಿಗದಿತ ಅವಧಿಯೊಳಗೆ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿಕೊಂಡರು.
ಎಸ್.ಐ.ಆರ್ ಅಭಿಯಾನದಲ್ಲಿ ಸಾರ್ವಜನಿಕರು ಸಹಕರಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶಿಲಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ, ಸೇರ್ಪಡೆ ಅಥವಾ ಬದಲಾವಣೆಗಾಗಿ ಸಂಬಂಧಿಸಿದ ಫಾರಂಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಮನೆ ಮನೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್ಯೂಮರೇಷನ್ ಕಾರ್ಯವೈಖರಿಯನ್ನು ಪರಿಶೀಲಸಿ, ಪ್ರತಿ ಅರ್ಹ ಮತದಾರರಿಗೂ ನಮೂನೆ ತಲುಪುವಂತೆ ಹಾಗೂ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ತಹಶೀಲ್ದಾರ ವಾಸುದೇವ ಸ್ವಾಮಿ, ಚುನಾವಣಾ ಶಿರಸ್ತೇದಾರ ನಾಗರಾಜ ಕುಲಕರ್ಣಿ, ಬೂತ ಮಟ್ಟದ ಅಧಿಕಾರಿ ಸರಸ್ವತಿ ಬಿ.ಎಸ್, ಮೇಲ್ವಿಚಾರಕಿ ಸುರೇಖಾ ರಾಟಿ ಸೇರಿದಂತೆ ಇತರರು ಇದ್ದರು.  

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೈಜ ದೇವರ ಕೆಲಸ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌ಗ್ರಂಥಾಲಯ ಸಂಘದ ಚಟುವಟಿಕೆ ವಿಸ್ತರಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಿನಾಲತವಾಡ ಸಮುದಾಯ ಆಸ್ಪತ್ರೆಯಲ್ಲಿ ಕಿರುಕುಳ ಆರೋಪ: ಹೊರಗುತ್ತಿಗೆ ಸಿಬ್ಬಂದಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ, ಪ್ರತಿಭಟನೆಮನೆಗಳಿಗೆ ಭೇಟಿ ನೀಡಿ ಎನ್ಯೂಮರೇಷನ್ ನಮೂನೆ ವಿತರಿಸಿದ ಡಿಸಿಕಾರ್ಮಿಕರು ಕೈಜೋಡಿಸಿದರೆ 4 ಲಕ್ಷ ಟನ್ ಕಬ್ಬು ನುರಿಸುವ  ಗುರಿ : ಚನ್ನರಾಜ ಹಟ್ಟಿಹೊಳಿಇಂದಿನಿಂದ ಬೂತ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ಸಂಚಾರ ಸುರಕ್ಷತೆ : ಕ್ರ್ಯಾಶ್ ಬಾರಿಯರ್ ದುರಸ್ತಿಧಾರವಾಡದಲ್ಲಿ ಮೌನೇಶ್ವರ ಸ್ವಾಗತ ಕಮಾನು ಉದ್ಘಾಟನೆ ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ : ಪಿ ಎಸ್ ಇ ರಾಘವೇಂದ್ರ ಖೋತಧರ್ಮದಿಯಾ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಕಿಟ್ ವಿತರಣೆ