Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ಪುಷ್ಪಲತಾ ಅವರ ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ

ಕಾಗವಾಡ:,ಜೂ.೨೮: ಬೆಳಗಾವಿ ಜಿಲ್ಲೆಯ ಕಾಗವಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಮಾಣಿಕ ಹಾಗೂ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಡಾ. ಪುಷ್ಪಲತಾ ಅವರ ವರ್ಗಾವಣೆ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡಾ. ಪುಷ್ಪಲತಾ ಅವರನ್ನು ಕಾಗವಾಡದಿಂದ ಅಥಣಿಗೆ ವರ್ಗಾವಣೆ ಮಾಡಲಾಗಿದ್ದು, ಈ ತಕ್ಷಣವೇ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಸ್ಥಳೀಯ ’ಜೈ ಕರ್ನಾಟಕ ಸಂಘ’ ಮತ್ತು ಕಾಗವಾಡದ ಗ್ರಾಮಸ್ಥರು  ಆಗ್ರಹಿಸಿದ್ದಾರೆ.ಅವರು ಶನಿವಾರ ಕಾಗವಾಡ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಉಪತಹಸಿಲ್ದಾರ ವಿಜಯಕುಮಾರ ಚೌಗಲಾ ಅವರಿಗೆ ಮನವಿ  ಪತ್ರ ಸಲಿಸಿ ಮಾತನಾಡಿ ಪ್ರತಿಭಟನಾಕಾರರು ಡಾ. ಪುಷ್ಪಲತಾ ಮೇಡಂ ಆಸ್ಪತ್ರೆಗೆ ಬಂದಾಗಿನಿಂದಲೂ ರೋಗಿಗಳೊಂದಿಗೆ ಅತ್ಯಂತ ಮಮತೆಯಿಂದ ವರ್ತಿಸಿ, ಜನಸ್ನೇಹಿಯಾಗಿದ್ದ ವೈದ್ಯೆಯನ್ನು ಇಲ್ಲಿಯೆ ಮುಂದುವರಿಸಬೇಕು ಎಂದರು.
 ಒಂದು ವೇಳೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವರ್ಗಾವಣೆ ಆದೇಶವನ್ನು ತಕ್ಷಣವೇ ರದ್ದುಪಡಿಸದಿದ್ದರೆ,ಹೋದರೆ ಬರುವ ಜೂನ್ ೨೭ರಂದು ಆಸ್ಪತ್ರೆಯ ಮುಂಭಾಗದಲ್ಲೇ ಜೈ ಕರ್ನಾಟಕ ಸಂಘ ಹಾಗೂ ಸಾರ್ವಜನಿಕರು ಸೇರಿ ಬೃಹತ್ ಉಪವಾಸ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದ್ದಾರೆ .
ಇ ವೇಳೆ.ಕಾಗವಾಡ ತಾಲೂಕ ಅಧ್ಯಕ್ಷ ಬಸವರಾಜ ಮಗದುಮ್ಮ, ಮಹಾವೀರ ಪಾಟೀಲ, ದುಂಡಿರಾಮ ಮಾಳಿ ಸುನಿಲ್ ಕಿನಂಗೆ ,ನೇಮು ಚೌಗುಲೆ,  ರಾಜು ಮಾಲಗಾವೆ, ಜಿತು ಪಾಟೀಲ, ಸಚಿನ್ ಪಾಟೀಲ, ವಿನೋದ ಹೊನಕಾಂಬಳೆ, ರಾಜು ಆಲಾಷೆ, ಸುದರ್ಶನ ಆಲ್ ಗೌಡ್ರು ಸನಿ ಸಾಳಂಕಿ ,ಸಂತೋಷ ಮುಜಾವರ, ಪಿಂಟು ನಾವಲಗಿರ ಅರುಣ ಜೋಶಿ ಪ್ರಕಾಶ್ ಪರಿಟ ಮತ್ತು ಎಲ್ಲ ಊರಿನ ಹಿರಿಯ ನಾಗರಿಕರು ಮಹಿಳೆಯರು ಇತರರು ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಡಾ. ಪುಷ್ಪಲತಾ ಅವರ ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ"ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ" ಕೆಂಪೇಗೌಡರ ಆಡಳಿತ ಮಂತ್ರವು ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ : ಬಂಡೆ ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೈಜೋಡಿ ಯಶಸ್ವಿಗೊಳಿಸಬೇಕು : ಪ್ರದೀಪಕುಮಾರ ಹಿರೇಮಠ*ಬಳ್ಳಾರಿ: ಜೂ.28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ*"ಸಂಘದ ತರಬೇತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ."  ಹಿಂದೂಗಳ ಮನೆಯಲ್ಲಿ ಮೊಹರಂ, ಪಾಂಜಾಗಳನ್ನು ಪ್ರತಿಷ್ಠಾಪನೆ. ಭಾವೈಕ್ಯತೆ ಸಾರಿದ ಮುಧೋಳ ಕುಟುಂಬ*ಯರಗಟ್ಟಿ ತಾಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ*ನನ್ನ ಸಚಿವ ಸಂಪುಟದಲ್ಲಿ ಅಪ್ಪಾಜಿ ಇರಬೇಕೆಂಬುವುದು ನನ್ನ ಆಸೆ