ಹುನಗುಂದ: ತಾಲೂಕಿನಾಧ್ಯಂತ ಜೂನ್ ೨೮ರಿಂದ ಜುಲೈ ೧ ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಡಿಯಲ್ಲಿ ೦.೫ ವ?ದೊಳಗಿನ ಪ್ರತಿ ಮಗುವಿಗೂ ಪೋಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕೆಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ತಾಲೂಕ ಕಾರ್ಯಪಡೆ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೦.೫ ವ?ದೊಳಗಿನ ಎಲ್ಲು ಮಗುವು ಲಸಿಕೆಯಿಂದ ವಂಚಿತವಾಗಬಾರದು. ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಕೈಜೋಡಿ ಯಶಸ್ವಿಗೊಳಿಸಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ, ತಲೂಕಿನ ಪಪಂ ಮತ್ತು ಪುರಸಭೆ, ನಗರಸಭೆ ಸಿಬ್ಬಂದಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕೂಡಾ ಸಹಕಾರ ಅಗತ್ಯವಾಗಿದೆ ಎಂದರು. ಅದರ ಜೊತೆಗೆ ವಿದ್ಯುತ್ ಸಮಸ್ಯೆಯಾದರೆ ಲಸಿಕೆ ಹಾನಿಯಾಗಲಿದ್ದು ಆ ದಿನ ವಿದ್ಯುತ್ ಸಮಸ್ಯೆಯಾಗದಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ತಾಲೂಕ ವೈದ್ಯಧಿಕಾರಿ ಡಾ.ಸಂಗಮೇಶ ಅಂಗಡಿ ಮಾತನಾಡಿ ನಮ್ಮ ನೆರೆಯ ದೇಶಗಳಾದ ಆಫ್ಘಾನಿಸ್ತಾನ ಪಾಕಿಸ್ತಾನದಲ್ಲಿ ಪೋಲಿಯೋ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು. ಅದು ನಮ್ಮ ದೇಶದ ಮೇಲೆ ಪರಿಣಾಮ ಬೀರಬಾರದೆಂದು ಮುಂಜಾಗೃತವಾಗಿ ಈ ಲಸಿಕೆಯನ್ನು ಎಲ್ಲ ಮಕ್ಕಳಿಗೂ ನೀಡಬೇಕು. ಮೊದಲ ದಿನ ಪೋಲಿಯೋ ಲಸಿಕಾ ಕೇಂದ್ರದಲ್ಲಿ ನೀಡಲಾಗುತ್ತದೆ. ಮರು ದಿನ ಮನೆ ಮನೆಗಳಿಗೆ ಹೋಗಿ ಲಸಿಕೆಯನ್ನು ಹಾಕಿ ಪೋಲಿಯೋ ಲಸಿಕೆ ಮುಕ್ತಗೊಳಿಸೋಣ ಎಂದರು.
ಜಿ. ಬಿ.ಭದ್ರಣ್ಣವರ ಮಾತನಾಡಿ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನಲ್ಲಿ ೦-೫ ವ?ದೊಳಗಿನ ಒಟ್ಟು ೩೫,೦೭೮ ಮಕ್ಕಳಿದ್ದು. ಹನಗುಂದ,ಇಳಕಲ್ಲ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ೨೫೯ ಲಸಿಕಾ ಕೇಂದ್ರಗಳು ತೆರೆಲಾಗಿದ್ದು ಒಂದು ತಂಡದಲ್ಲಿ ಇಬ್ಬರು ಕಾರ್ಯನಿರ್ವಹಿಸಲಿದ್ದು. ೧೨ ಮೊಬೈಲ್ ತಂಡಗಳನ್ನು ಮತ್ತು ೧೧ ಟ್ರಾನ್ಸಿಟ್ ತಂಡಗಳನ್ನು ರಚಿಸಲಾಗಿದೆ ಎಂದು ಸಭೆಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಇಳಕಲ್ಲ ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ, ಸಿಡಿಪಿಓ ಮುತ್ತಣ್ಣ ಅರಳಿ, ಹಿಂದುಳಿದ ಇಲಾಖೆ ಅಧಿಕಾರಿ ಮಾಟೂರ, ಹುನಗುಂದ ಸಾರಿಗೆ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ. ವೈದ್ಯ ಮಂಜುನಾಥ ಅಂಕೋಲ್ಕರ ಸೇರಿದಂತೆ ಅನೇಕರು ಇದ್ದರು.
