LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಮುದಾಯದ ಬಾಂಧವರನ್ನು ಸಂಘಟಿಸಿದ ಕೀರ್ತಿ ನಮ್ಮಅಪ್ಪಣ್ಣ ಸ್ವಾಮೀಜಿಗೆ ಸಲ್ಲುತ್ತದೆ : ಮಲ್ಲಿಕಾರ್ಜುನ ಹಡಪದ

ಹುನಗುಂದ; ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ಎಲ್ಲ ಸಮುದಾಯದ ಸ್ವಾಮೀಜಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ನಮ್ಮ ಸಮುದಾಯದ ಯುವಕರರು ಉಚಿತ ಕ್ಷೌರ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು., ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ದೂರದೃಷ್ಟಿ ಹೊಂದಿದ್ದರು. ಕರ್ನಾಟಕ, ಮಹಾರಾ?, ಗೋವಾದಲ್ಲಿ ಚದುರಿ ಹೋದ ಸಮುದಾಯದ ಬಾಂಧವರನ್ನು ಸಂಘಟಿಸಿದ ಕೀರ್ತಿ ನಮ್ಮ ಸ್ವಾಮೀಜಿಗೆ ಸಲ್ಲುತ್ತದೆ. ಸಮಾಜದ ಯುವಕರನ್ನು ಶಿಕ್ಷಣವಂತರನ್ನಾಗಿ ಹಾಗೂ ಉದ್ಯೋ-ಗದಾತರನ್ನಾಗಿ ಮಾಡಲು ಶ್ರಮಿಸಿದ್ದಾರೆ ಸೂಳೆಭಾವಿ ಕಿತ್ತೂರು ರಾಣಿ ಚೆನ್ನಮ ವಸತಿ ನಿಲಯದ ಪ್ರಾಚಾರ್ಯ ಮಲ್ಲಿಕಾರ್ಜುನ ಹಡಪದ ಹೇಳಿದರು.                                                                             ಇಲ್ಲಿನ ಶ್ರೀ ವಿಮವಿವ ಸಂಘ ಮತ್ತು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಸಹಯೋಗದಲ್ಲಿ ಅಪ್ಪಣ್ಣನವರ ೧೮ನೇ ಪುಣ್ಯಸ್ಮರಣೆ ಕಾರ್‍ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ ಅವರ ೧೮ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಗರದ ಕ್ಷೌರಿಕ ಸಮಾಜದ ೧೫ ಜನರಿಂದ ಇಲ್ಲಿನ ಉಚಿತ ಪ್ರಸಾದ ನಿಲಯದ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉಚಿತ ಕ್ಷೌರ (ಕಟಿಂಗ್) ಸೇವೆ ನಡೆಯಿತು. 
ಸಮಾಜದ ಮುಖಂಡ ಎಚ್.ಡಿ. ವೈದ್ಯ ಮಾತನಾಡಿ ಅಪ್ಪಣ್ಣ ಸ್ವಾಮೀಜಿ ಅವರು ಸಂಗೀತ ಕಲಾವಿದರಾಗಿದ್ದರು. ಸಮಾಜದ ಶರಣ ಸಂಸ್ಕೃತಿಯಲ್ಲಿ ನಡೆಯಿತ್ತಿದ್ದು,  ಶರಣರ ಆದರ್ಶಗಳೊಂದಿಗೆ ನಾವು ಮುಂದುವರಿಯಬೇಕು. ಸ್ವಾಮೀಜಿ ತಮ್ಮ ಜೀವನದ ಕೊನೆಯುಸಿರಿರುವವರೆಗೂ ಸಮುದಾಯದ ಪ್ರಗತಿಗೆ ಶ್ರಮಿಸಿದ್ದಾರೆಂದು ವೈಧ್ಯ ಹೇಳಿದರು.                                                                   ವಿಜಯ ಮಹಾಂತೇಶ ವಿವ ಸಂಘದ ಆಡಳಿತ ಮಂಡಳಿ ಸದಸ್ಯರಾದ ವೀರಣ್ಣ ಬಳೂಟಗಿ ಹಾಗೂ ಅರುಣ್ ದುದ್ದಗಿ ಮಾತನಾಡಿದರು.
ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಚೋಳಚಗುಡ್ಡ, ಸಂಗಣ್ಣ ಚಿನಿವಾಲರ, ರಾಚಪ್ಪ ರಾಜಮನಿ, ಮಂಜು ಕಿರಸೂರ ಹಾಗೂ ಸಮುದಾಯದ ಮುಖಂಡರು ಇದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿಯ ಪುಷ್ಕರಣಿ ವಿಚಾರದಲ್ಲಿ ಬೆಲ್ಲದ ರಾಜಕಾರಣ ಬಿಡಲಿ,  ದೀಪಕ ಚಿಂಚೋರೆ ವಾಗ್ದಾಳಿಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಮೃತರ ಕುಟುಂಬಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಅಳ್ನಾವರ ತಾಲೂಕಿನ ಬೆಣಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡೋರಿ ಗ್ರಾಮಕ್ಕೆ ಜಿಲ್ಲಾಧಿಕಾರಿ- ಸ್ನೇಹಲ್ ಆರ್. ಭೇಟಿ  ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಪಿಎಸ್‌ಐ  ಎ. ರುಕ್ಮಿಣಿತಾಯಿ-ಶಿಶು ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ಮಾತು ಮನೆ ಕಟ್ಟುತ್ತದೆ, ಮಾತೇ ಮನೆಯನ್ನು ಕೆಡಿಸುತ್ತದೆ - ಶಿದ್ದಲಿಂಗಶ್ರೀ*ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ದತ್ತಾ ವಾಸ್ಟರ್ ಅವಿರೋಧವಾಗಿ ಆಯ್ಕೆ*ಪ್ರಾಮಾಣಿಕತೆ ಇದ್ದಲ್ಲಿ ಲಾಭ ಹೆಚ್ಚಿರುತ್ತದೆ - ಗುರುಪಾದ ಶ್ರೀಭಾಜಪ ಜಿಲ್ಲಾಧ್ಯಕ್ಷ ಶ್ರೀ ಖಾಸ್ಗತೇಶ್ವರ ಮಠಕ್ಕೆ ಭೇಟಿ